IPL 2021- IPL ಪಂದ್ಯಗಳ ಮೇಲೆ ಕೊರೊನಾ ಕಾರ್ಮೋಡ, ವಾನ್ ಖೇಡ್ ಕ್ರೀಡಾಂಗಣದ 8 ಸಿಬ್ಬಂದಿಗಳು ಕೊರೊನಾ ಪಾಸಿಟಿವ್

IPL 2021 - ಬರುವ ಏಪ್ರಿಲ್ 9 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)ನ 14ನೇ ಆವೃತ್ತಿ ಆರಂಭಗೊಳ್ಳಲಿದೆ. ಟೂರ್ನಿಯ ಆರಂಭಿಕ ಪಂದ್ಯ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್  ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. 

Written by - Nitin Tabib | Last Updated : Apr 3, 2021, 12:45 PM IST
  • IPL 2021 ಆರಂಭಕ್ಕೂ ಮುನ್ನವೇ ಕ್ರಿಕೆಟ್ ಅಭಿಮಾನಿಗಳಿಗೊಂದು ಕಹಿ ಸುದ್ದಿ.
  • Wankhede ಕ್ರೀಡಾಂಗಣದ ಎಂಟು ಜನ ಸಿಬ್ಬಂದಿಗೆ ಕೊರೊನಾ ಸೋಂಕು.
  • ಚಿಂತಿಸುವ ಅಗತ್ಯವಿಲ್ಲ ಎಂದ ಮುಂಬೈ ಕ್ರಿಕೆಟ್ ಅಸೋಸಿಯೇಶನ್.
IPL 2021- IPL ಪಂದ್ಯಗಳ ಮೇಲೆ ಕೊರೊನಾ ಕಾರ್ಮೋಡ, ವಾನ್ ಖೇಡ್ ಕ್ರೀಡಾಂಗಣದ 8 ಸಿಬ್ಬಂದಿಗಳು ಕೊರೊನಾ ಪಾಸಿಟಿವ್ title=
IPL 2021 (File Photo)

ನವದೆಹಲಿ: IPL 2021 - ಬರುವ ಏಪ್ರಿಲ್ 9 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)ನ 14ನೇ ಆವೃತ್ತಿ ಆರಂಭಗೊಳ್ಳಲಿದೆ. ಟೂರ್ನಿಯ ಆರಂಭಿಕ ಪಂದ್ಯ ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್  ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಆದರೆ, ಟೂರ್ನಿಯ ಆರಂಭಕ್ಕೂ ಮುನ್ನವೇ ಕ್ರಿಕೆಟ್ ಅಭಿಮಾನಿಗಳು ಹಾಗೂ ಆಯೋಜಕರ ಪಾಲಿಗೆ ಒಂದು ಕಾಗಿ ಸುದ್ದಿ ಪ್ರಕಟವಾಗಿದೆ. ಮುಂಬೈ ನ ವಾಂಖೆಡ್ (Wankhede Stadium) ಕ್ರೀಡಾಂಗಣದಲ್ಲಿ IPL 2021 ಆರಂಭಕ್ಕೂ ಮುನ್ನವೇ ಮೈದಾನದ ಎಂಟು ಜನ ಸಿಬ್ಬಂದಿ Covid-19 ಸೋಂಕಿಗೆ ಗುರಿಯಾಗಿದ್ದಾರೆ. IPL-2021ಕ್ಕಾಗಿ ಆಯ್ಕೆ ಮಾಡಲಾಗಿರುವ ಆರು ಸ್ಥಾನಗಳ ಪಟ್ಟಿಯಲ್ಲಿ ಮುಂಬೈ ಹೆಸರು ಕೂಡ ಶಾಮೀಲಾಗಿದೆ ಹಾಗೂ ಏಪ್ರಿಲ್ 10 ರಂದು  ವಾಂಖೆಡ್ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್  ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. 

ಇದನ್ನೂ ಓದಿ-  IPL 2021: ಈ ಋತುವಿನಲ್ಲಿ ಒಂದೇ ಒಂದು ಪಂದ್ಯ ಆಡದಿದ್ದರೂ Shreyas Iyerಗೆ ಸಿಗುತ್ತೆ ಸಂಭಾವನೆ

ಈ ಮೈದಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಲೋಕಲ್ ಟ್ರೈನ್ ಮೂಲಕ ಪ್ರಯಾಣ ಬೆಳೆಸುತ್ತಾರೆ. ಇದುವೇ ಅವರ ಕೊರೊನಾ ಸೋಂಕಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಮುಂಬೈ ಕ್ರಿಕೆಟ್ ಅಸೋಸಿಯೆಶನ್, ಐಪಿಎಲ್ 2021 ಟೂರ್ನಿ ಮುಕ್ತಾಯದವರೆಗೆ ಈ ಸಿಬ್ಬಂದಿಗಳನ್ನು ಮೈದಾನಕ್ಕೆ ಹೊಂದಿಕೊಂಡಂತೆಯೇ ಇಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಇಳಿದೆ. ಈ ಕುರಿತು ಮಾತನಾಡಿರುವ MCA ಅಧಿಕಾರಿಯೊಬ್ಬರು, "ಮೈದಾನದ ಸಿಬ್ಬಂದಿಗಳಿಗೆ ತಕ್ಷಣದಲ್ಲಿ ಮೈದಾನದ ಒಳಗಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಿದ್ದೇವೆ. ಮೈದಾನದ ಒಳಗೆ ಸಾಕಷ್ಟು ರೂಮ್ ಗಳಿವೆ. ಅಲ್ಲಿಯೇ ಅವರಿಗೆ ಉಳಿಯುವ ವ್ಯವಸ್ಥೆ ಮಾಡಲಾಗುವುದು ಹಾಗೂ ವಾಂಖೇಡ್ ಕ್ರೀಡಾಂಗಣದಲ್ಲಿ ನಡೆಯಬೇಕಿರುವ IPL ಪಂದ್ಯಗಳ ಕುರಿತು ಚಿಂತೆ ನಡೆಸುವ ಅವಶ್ಯಕತೆ ಇಲ್ಲ. ಟೂರ್ನಿಯ ಅವಧಿಯಲ್ಲಿ ನಾವು ಸಂಪೂರ್ಣ ಸಿದ್ಧತೆಯಲ್ಲಿರಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Yuzvendra Chahal: RCB ಅಭಿಮಾನಿಗಳ ಹೃದಯ ಗೆದ್ದ ಚಹಲ್!

ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ IPL 2021ರ ಎಲ್ಲಾ ಪಂದ್ಯಗಳನ್ನು ದೇಶದ ಒಟ್ಟು ಆರು  ವಿವಿಧ ನಗರಗಳಲ್ಲಿ ಆಯುಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇವುಗಳಲ್ಲಿ ಚೆನ್ನೈ, ಬೆಂಗಳೂರು, ಮುಂಬೈ, ಅಹ್ಮದಾಬಾದ್, ದೆಹಲಿ ಹಾಗೂ ಕೊಲ್ಕತಾಗಳು ಶಾಮೀಲಾಗಿವೆ. ಈ ಬಾರಿಯ IPLನಲ್ಲಿ ಯಾವುದೇ ತಂಡ ತನ್ನ ತವರು ನೆಲದಲ್ಲಿ ಒಂದೂ ಪಂದ್ಯವನ್ನು ಆಡುತ್ತಿಲ್ಲ. ಕೊವಿಡ್-19 ಹಿನ್ನೆಲೆ ಈ ಬಾರಿಯೂ ಕೂಡ ಪ್ರೇಕ್ಷಕರಿಗೆ ಕ್ರೀಡಾಂಗಣದ ಮೂಲಕ ಪಂದ್ಯ ವಿಕ್ಷೀಸುವ ಅನುಮತಿ ನೀಡಲಾಗಿಲ್ಲ. UAE ನಡೆಸಲಾಗಿದ್ದ IPL 2020ರ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ದೆಹಲಿ ಕ್ಯಾಪಿಟಲ್ಸ್  ಅನ್ನು ಸೋಲಿಸಿ ಐದನೇ ಬಾರಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿತ್ತು.

ಇದನ್ನೂ ಓದಿ-IPL 2021: ಈ ಆಟಗಾರನ ಹೆಗಲಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News