Rana Naved Ul Hasan Controversial Statement: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ರಾಣಾ ನಾವೇದ್-ಉಲ್-ಹಸನ್ ಭಾರತದ ವಿರುದ್ಧ ಹೇಳಿಕೆ ನೀಡುವ ಮೂಲಕ ಭಾರೀ ಚರ್ಚೆಗೆ ಸಿಲುಕಿದ್ದಾರೆ. ಏಕದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡವನ್ನು ಭಾರತೀಯ ಮುಸ್ಲಿಮರು ಬೆಂಬಲಿಸುತ್ತಾರೆ ಎಂದು ರಾಣಾ ನಾವೇದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವೇದ್ ಪಾಡ್‌ ಕ್ಯಾಸ್ಟ್‌ ನಲ್ಲಿ ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 22ರ ಹರೆಯದ ಈ ಕ್ರಿಕೆಟಿಗನಿಗೆ ಮರುಜೀವ ಕೊಟ್ಟ BCCI: ಕೊಹ್ಲಿ ಗೆಳೆಯನಿಗೆ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!


45ರ ಹರೆಯದ ನಾವೇದ್ ಪಾಕಿಸ್ತಾನ ಪರ 9 ಟೆಸ್ಟ್, 74 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.


ಪಾಡ್‌ ಕ್ಯಾಸ್ಟ್‌ ನಲ್ಲಿ ಮಾತನಾಡಿದ ನಾವೇದ್, “ಭಾರತವು ತನ್ನದೇ ದೇಶದಲ್ಲಿ ಆಡುತ್ತಿದ್ದರೆ ಅದು ನೆಚ್ಚಿನದಾಗಿರುತ್ತದೆ. ಪಾಕಿಸ್ತಾನ ತಂಡವೂ ಕಡಿಮೆ ಇಲ್ಲ. ಆದರೆ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದ ಮುಸ್ಲಿಮರು ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಅನೇಕ ಮುಸ್ಲಿಮರಿದ್ದಾರೆ” ಎಂದು ಹೇಳಿದ್ದಾರೆ.


ರಾಣಾ ನವೇದ್ ಉಲ್ ಹಸನ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ನವೇದ್ ಉಲ್ ಹಸನ್ ಪಾಕಿಸ್ತಾನದ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ಸೇರಿದಂತೆ ಒಟ್ಟು 132 ವಿಕೆಟ್‌ ಗಳನ್ನು ಕಬಳಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ODI ಸ್ವರೂಪದಲ್ಲಿ ಸೇರಿವೆ.


ಭಾರತದ ವಿರುದ್ಧ ದಾಖಲೆ ಹೇಗಿದೆ?


ರಾಣಾ ನವೇದ್ ಉಲ್ ಹಸನ್ ಭಾರತದ ವಿರುದ್ಧ ಒಟ್ಟು 16 ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾವೇದ್ 16 ODIಗಳಲ್ಲಿ 23.69 ಸರಾಸರಿಯಲ್ಲಿ ಒಟ್ಟು 16 ವಿಕೆಟ್‌ ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಭಾರತದ ವಿರುದ್ಧ ಕೇವಲ ಎರಡು ವಿಕೆಟ್‌ ಗಳನ್ನು ಪಡೆಯಲು ಸಾಧ್ಯವಾಗಿದೆ.


2010ರಲ್ಲಿ ಪಾಕಿಸ್ತಾನ ಪರ ಕೊನೆಯ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದ ನಾವೇದ್ ಅಂದಿನಿಂದ ತಂಡದಲ್ಲಿ ಸ್ಥಾನ ಸಿಗದೇ ನಿವೃತ್ತಿ ಘೋಷಿಸಿದ್ದರು.


ಇನ್ನು ರಾಣಾ ನವೇದ್ ಉಲ್ ಹಸನ್ ಭಾರತದಲ್ಲಿ ನಿಷೇಧಿತ ಇಂಡಿಯನ್ ಕ್ರಿಕೆಟ್ ಲೀಗ್‌ ನಲ್ಲಿ ಆಡಿದ್ದಾರೆ. ತನ್ನ ಪಾಡ್‌ಕ್ಯಾಸ್ಟ್‌ ನಲ್ಲಿ ICL ಬಗ್ಗೆ ಮಾತನಾಡಿದ ಹಸನ್, “ICL ನಲ್ಲಿ ಆಡಲು ಹೋದಾಗ, ಪಾಕಿಸ್ತಾನಿ ಆಟಗಾರರಿಗೆ ಭಾರತೀಯ ಮುಸ್ಲಿಮರಿಂದ ಸಾಕಷ್ಟು ಬೆಂಬಲವಿತ್ತು” ಎಂದು ಹೇಳಿದರು.


ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಶತಕದ ಬೆನ್ನಲ್ಲೇ ಹೊಸ ಮನೆ ಖರೀದಿಸಿದ ಜೈಸ್ವಾಲ್: ಹೇಗಿದೆ ನೋಡಿ ‘ಕನಸಿನ ಅರಮನೆ’


ಬಿಸಿಸಿಐ ಐಸಿಎಲ್ ಲೀಗ್‌ ನಲ್ಲಿ ಆಡುವ ಆಟಗಾರರನ್ನು ನಿಷೇಧಿಸಿತ್ತು. ಐಸಿಎಲ್ ಅನ್ನು ನಿಷೇಧಿಸಿದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.