Yashasvi Jaiswal New Flat: ಯಶಸ್ವಿ ಜೈಸ್ವಾಲ್ ಸದ್ಯ ಟೀಂ ಇಂಡಿಯಾದ ಭವಿಷ್ಯ ಬರೆಯುತ್ತಿರುವ ಆಟಗಾರ ಎನ್ನಬಹುದು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡುವ ಕನಸು ಕಂಡಿದ್ದ ಅವರು, ಇದೀಗ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಭರವಸೆ ನೀಡಿದ್ದಾರೆ.
ಜೈಸ್ವಾಲ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಚೊಚ್ಚಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ 17ನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾ ಟೆಸ್ಟ್ ನಲ್ಲಿ 171 ರನ್ ಗಳ ದೊಡ್ಡ ಇನ್ನಿಂಗ್ಸ್ ಆಡಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಇವರು ಪಡೆದಿದ್ದಾರೆ.
ಇದನ್ನೂ ಓದಿ: “ಒಂದು ವರ್ಷದಿಂದ ಭಾರತ ತಂಡ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದೆ”: Team India ಕೋಚ್ ಹೇಳಿಕೆ
ಇನ್ನು ಭಾರತದಲ್ಲಿ ಯಶಸ್ವಿಯನ್ನು ಸ್ವಾಗತಿಸಲು ಅವರ ಕುಟುಂಬವೇ ಎದುರು ನೋಡುತ್ತಿದೆ, ಆದರೆ ಈ ಬಾರಿ ಭಾರತಕ್ಕೆ ಬಂದಾಗ ಜೈಸ್ವಾಲ್ ತಮ್ಮ ಹಳೆಯ ಮನೆಗೆ ಹೋಗುವುದಿಲ್ಲವಂತೆ. ಬದಲಾಗಿ ಥಾಣೆಯಲ್ಲಿ 5 ಕೋಣೆಗಳ ಹೊಸ ಫ್ಲಾಟ್ ನ್ನು ಖರೀದಿಸಿದ್ದು, ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿ ಪ್ರಕಾರ, ಜೈಸ್ವಾಲ್ ತನ್ನ ಕುಟುಂಬದ ಜೊತೆ ಕಳೆದ 2 ವರ್ಷಗಳಿಂದ 2 ಕೋಣೆಗಳ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಜೈಸ್ವಾಲ್ ಜೀವನದ ಕಥೆ:
ಜೈಸ್ವಾಲ್ ಅವರ ತಂದೆ, ಮಗ ಶತಕ ಪೂರೈಸಿದ ನಂತರ ಕಣ್ವಡ್ ಯಾತ್ರೆಗೆ ತೆರಳಿದ್ದಾರೆ. ಫೋನ್ ನಲ್ಲಿ ಮಗನ ಇನ್ನಿಂಗ್ಸ್ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. 21 ವರ್ಷದ ಜೈಸ್ವಾಲ್‌ಗೆ ಇದು ಹೊಸ ಆರಂಭ. ಈ ಹಿಂದೆ ಪಾನಿಪುರಿ ಮಾರಾಟ ಮಾಡುತ್ತಾ ಕ್ರಿಕೆಟ್ ಆಡಬೇಕೆಂದು ಕನಸು ಕಂಡಿದ್ದ ಜೈಸ್ವಾಲ್ ಇಂದು ಟೆಸ್ಟ್ ಲೋಕಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ. ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಸಹ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್’ನಲ್ಲಿ ಗೆದ್ದರೂ Team India ಪ್ಲೇಯಿಂಗ್ 11ನಲ್ಲಿ ಆಗಲಿದೆ ಬದಲಾವಣೆ: ಇವರು ಇನ್… ಅವರು ಔಟ್!
ಜೀವನದ ದೊಡ್ಡ ಕನಸು..
ಬಾಡಿಗೆ ಮನೆಯಲ್ಲಿ ವಾಸಿಸಲು ಇಷ್ಟವಿಲ್ಲದ ಕಾರಣ ಹೊಸ ಮನೆಗೆ ಶಿಫ್ಟ್ ಆಗುವಂತೆ ಹೇಳುತ್ತಿದ್ದರು ಎಂದು ಯಶಸ್ವಿ ಸಹೋದರ ತೇಜಸ್ವಿ ಹೇಳಿದ್ದಾರೆ. ಟೆಸ್ಟ್ ಪಂದ್ಯದ ವೇಳೆಯೂ ಅವರು ತಮ್ಮ ಶಿಫ್ಟಿಂಗ್ ಪ್ಲಾನ್ ಬಗ್ಗೆ ಕೇಳುತ್ತಿದ್ದರು. ತನಗೂ ಸ್ವಂತ ಮನೆ ಇರಬೇಕು ಎಂಬುದು ಯಶಸ್ವಿಯ ಜೀವನದ ದೊಡ್ಡ ಕನಸಾಗಿತ್ತು. ಆ ಕನಸು ಈಗ ಈಡೇರಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ