Cricket Viral Video: ಕ್ರಿಕೆಟ್ ಆಟದಲ್ಲಿ ಪ್ರತಿದಿನ ಕೆಲವು ಹೊಸ ದಾಖಲೆಗಳು ನಿರ್ಮಾಣಗೊಳ್ಳುತ್ತಿವೆ, ಆದರೆ ನಾವು ನಿಮಗೆ ಹೇಳುವ ದಾಖಲೆಯು ಕೇವಲ ದಾಖಲೆಯಲ್ಲ, ಅದು ಒಂದು ದೊಡ್ಡ ವಿಶ್ವ ದಾಖಲೆಯಾಗಿದೆ. ಖಂಡಿತವಾಗಿಯೂ ನೀವು ಅಂತಹ ವಿಶ್ವ ದಾಖಲೆಯ ಬಗ್ಗೆ ಹಿಂದೆಂದೂ ಕೇಳಿರಲಿಕ್ಕಿಲ್ಲ. ಐರೋಪ್ಯ ಕ್ರಿಕೆಟ್‌ನ ಟಿ10 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ ಹಮ್ಜಾ ಸಲೀಂ ದಾರ್ ಎಂಬ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಿದ್ದಾರೆ. (Sports News In Kannada)


COMMERCIAL BREAK
SCROLL TO CONTINUE READING

ಸೋಹಲ್ ಹಾಸ್ಪಿಟಲ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಟಲುನ್ಯ ಜಾಗ್ವಾರ್ ತಂಡದ ಹಮ್ಜಾ ಸಲೀಮ್ ಕ್ರಿಕೆಟ್ ನಲ್ಲಿಯೇ ಈ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಹಮ್ಜಾ 43 ಎಸೆತಗಳಲ್ಲಿ 14 ಬೌಂಡರಿ ಮತ್ತು 22 ಸಿಕ್ಸರ್‌ಗಳಿಂದ ಅಜೇಯ 193* ರನ್‌ಗಳನ್ನು ಗಳಿಸಿದ್ದಾರೆ. ಇದು ಟಿ10 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಈ ಇನ್ನಿಂಗ್ಸ್‌ನಲ್ಲಿ ಹಮ್ಜಾ ಕೇವಲ 24 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಅಜೇಯ ಇನ್ನಿಂಗ್ಸ್‌ನಲ್ಲಿ ಹಮ್ಜಾ ಅವರ ಸ್ಟ್ರೈಕ್ ರೇಟ್ 448.83 ಆಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಹಮ್ಜಾ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ.


6 ಸಿಕ್ಸರ್‌ಗಳು ಸಿಡಿದ ಓವರ್‌ನಲ್ಲಿ ಒಟ್ಟು 43 ರನ್ ಗಳು ಬಂದಿವೆ. ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ, ಮೊಹಮ್ಮದ್ ವಾರಿಸ್ ಗೆ 6 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ, ಅದರಲ್ಲಿ ಅವರು 6 ಅಲ್ಲ ಒಟ್ಟು 9 ಎಸೆತಗಳನ್ನು ಬೌಲ್ ಮಾಡಿದರು, ಇದರಲ್ಲಿ 2 ವೈಡ್‌ಗಳು ಮತ್ತು 1 ನೋ ಬಾಲ್ ಸೇರಿತ್ತು. ಈ ಮೂಲಕ ಹಮ್ಜಾ ವಿಶ್ವದಾಖಲೆಯ ಇನ್ನಿಂಗ್ಸ್ ಪೂರ್ಣಗೊಳಿಸಿದ್ದಾರೆ.


ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಯಾಟಲುನ್ಯ ಜಾಗ್ವಾರ್ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 257 ರನ್ ಗಳಿಸಿತ್ತು. ಹಮ್ಜಾ ಹೊರತುಪಡಿಸಿ, ಸಹ ಆರಂಭಿಕ ಆಟಗಾರ ಯಾಸಿರ್ ಅಲಿ 19 ಎಸೆತಗಳಲ್ಲಿ 58* ರನ್ ಗಳಿಸಿದ್ದಾರೆ. ಗುರಿ ಬೆನ್ನಟ್ಟಿದ ಸೋಹಲ್ ಆಸ್ಪತ್ರೆ 10 ಓವರ್‌ಗಳಲ್ಲಿ 8 ವಿಕೆಟ್‌ಗೆ 104 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಮ್ಜಾ ಬೌಲಿಂಗ್ ನಲ್ಲೂ ಮಿಂಚಿದ್ದಾರೆ. ಬೌಲಿಂಗ್ ಮಾಡುವಾಗ, ಅವರು ತಮ್ಮ ಹೆಸರಿನಲ್ಲಿ 3 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಪಂದ್ಯ ಸಂಪೂರ್ಣವಾಗಿ ಹಮ್ಜಾ ಸಲೀಂ ದಾರ್ ಹೆಸರಿನಲ್ಲಿತ್ತು ಎಂದರೆ ತಪ್ಪಾಗಲಾರದು.


ಇಲ್ಲಿದೆ ಅವರ ಬ್ಯಾಟಿಂಗ್ ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ