Haseen Jahan Statement About Mohammad Shami: ಮೊಹಮ್ಮದ್ ಶಮಿ ವಿಶ್ವಕಪ್’ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌’ಗಳು ಕೂಡ ವೈರಲ್ ಆಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಕ್ಕುಗಳು ‘ಮಿಯಾಂವ್’ ಅನ್ನುತ್ತಲ್ಲಾ… ಅದರ ಅರ್ಥವೇನು ಗೊತ್ತಾ? ಏನಕ್ಕೆ ಹಾಗೆ ಕರೆಯುತ್ತೆ?


ಮೊಹಮ್ಮದ್ ಶಮಿ ಆಟದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹಸಿನ್ ಮಾತನಾಡುತ್ತಿದ್ದರೂ ಸಹ, ಈ ಹಿಂದೆ ಶಮಿ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಶಮಿ ತನ್ನ ಬೌಲಿಂಗ್‌’ನಲ್ಲಿ ವಿಕೆಟ್ ಪಡೆಯಲು ಎದುರಾಳಿ ತಂಡದ ಬ್ಯಾಟರ್’ಗಳಿಗೆ ಹಣ ನೀಡುತ್ತಾನೆ ಎಂದು ಆರೋಪಿಸಿದ್ದರು. ಆದರೆ ಇದೀಗ ಶಮಿ ತನ್ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಹೇಳಿಕೆ ನೀಡುವ ಮೂಲಕ ನಿರಾಕರಿಸಿದ್ದಾಳೆ.


"ಸಾಮಾಜಿಕ ಅಪರಾಧಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥೈಸಿಕೊಳ್ಳುಬ ಜನರು, ನನ್ನ ಮಾನಹಾನಿಗಾಗಿ ಪ್ರತಿ ಸುಳ್ಳು ಸುದ್ದಿಯನ್ನು ಹೇಗೆ ಹರಡಲಾಗುತ್ತಿದೆ ಎಂಬುದನ್ನು ನೋಡಿ. ಸಮಾಜವಿರೋಧಿ ವ್ಯಕ್ತಿಗಳ ಕೂಟ ಈ ಕೆಲಸ ಮಾಡಿದೆ. 2018 ರಲ್ಲಿ ಶಮಿ, ಉಮೇಶ್ ಎಂಬ ಮಾಧ್ಯಮದ ವ್ಯಕ್ತಿಯನ್ನು ನೇಮಿಸಿಕೊಂಡಿದ್ದಾನೆ., ಅಂದಿನಿಂದ ಈ ಮಾಧ್ಯಮ ನನ್ನ ಪ್ರತಿಷ್ಠೆಗೆ ನಿರಂತರವಾಗಿ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ನಾನು ಶಮಿ ವಿರುದ್ಧ ಯಾವುದೇ ಸುಳ್ಳು ಆರೋಪ ಮಾಡಿಲ್ಲ. ಯಾವುದೇ ಸುಳ್ಳು ಪ್ರಕರಣಗಳನ್ನು ಹಾಕಿಲ್ಲ. ಶಮಿ ಮತ್ತು ಅವರ ಕುಟುಂಬದವರು ನನ್ನ ಮೇಲೆ ಏನೇ ದೌರ್ಜನ್ಯ ಎಸಗಿದ್ದರೂ ಗಮನಕ್ಕೆ ತಂದಿದ್ದೇನೆ. ಪ್ರಕರಣವನ್ನು ದಾಖಲಿಸಿದ್ದೇನೆ" ಎಂದು ಪೋಸ್ಟ್‌’ನ ಮೊದಲ ಭಾಗದಲ್ಲಿ ಹಸೀನ್ ಜಹಾನ್ ಬರೆದಿದ್ದಾರೆ.  


ಇದನ್ನೂ ಓದಿ: ದುಡ್ಡಿಗಾಗಿ ಕಸ ಗುಡಿಸುತ್ತಿದ್ದ ಈತ ಇಂದು ಕೋಟಿ ಕೋಟಿ ಸಂಪತ್ತಿನ ಒಡೆಯ: ಟೀಂ ಇಂಡಿಯಾದ ಜೂ.ಧೋನಿ


"ಶಮಿ ಅಹ್ಮದ್ ಅವರು ನ್ಯಾಯಾಲಯದಿಂದ ಇನ್ನೂ ಯಾವುದೇ ಕ್ಲೀನ್ ಚಿಟ್ ಪಡೆದಿಲ್ಲ ಮತ್ತು ನನ್ನ ಮೇಲೆ ಆರೋಪ ಮಾಡಲಾಗಿಲ್ಲ. ಆದರೂ, ಪಕ್ಷಪಾತ ಮತ್ತು ನಿರ್ವಹಣಾ ಮಾಧ್ಯಮಗಳು ನ್ಯಾಯಾಧೀಶರ ಪಾತ್ರವನ್ನು ಮುಂದುವರೆಸುತ್ತಿವೆ. ಏಕಪಕ್ಷೀಯವಾಗಿ ನನ್ನನ್ನು ಅಪರಾಧಿ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿವೆ" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ