Knowledge Story: ಬೆಕ್ಕುಗಳು ‘ಮಿಯಾಂವ್’ ಅನ್ನುತ್ತಲ್ಲಾ… ಅದರ ಅರ್ಥವೇನು ಗೊತ್ತಾ? ಏನಕ್ಕೆ ಹಾಗೆ ಕರೆಯುತ್ತೆ?

meaning of cat’s meow Sound: ಬೆಕ್ಕಿನ ಮಿಯಾಂವ್ ಪದವನ್ನು ಕೇವಲ ಶಬ್ದ ಎಂದು ಮನುಷ್ಯರು ಭಾವಿಸುತ್ತಾರೆ. ಆದರೆ ವಿಜ್ಞಾನವು ಅದರ ಅರ್ಥವನ್ನು ಕಂಡುಹಿಡಿದಿದೆ. ಬೆಕ್ಕುಗಳ ಈ ಸದ್ದು ಕೇವಲ ಶಬ್ದವಲ್ಲ. ಇದು ಬಹಳ ಮುಖ್ಯವಾದ ಅರ್ಥವನ್ನು ಹೊಂದಿದೆ.

Written by - Bhavishya Shetty | Last Updated : Nov 28, 2023, 07:43 PM IST
    • ಪ್ರಾಣಿಗಳು ಮನುಷ್ಯರಂತೆ ಮಾತನಾಡಲಾರವು
    • ಬೆಕ್ಕುಗಳು ಮಿಯಾಂವ್ ಎಂದು ಕರೆಯುವುದೇಕೆ?
    • ಆ ಪದದ ಅರ್ಥವೇನು ಎಂಬುದರ ಬಗ್ಗೆ ಮಾಹಿತಿ
Knowledge Story: ಬೆಕ್ಕುಗಳು ‘ಮಿಯಾಂವ್’ ಅನ್ನುತ್ತಲ್ಲಾ… ಅದರ ಅರ್ಥವೇನು ಗೊತ್ತಾ? ಏನಕ್ಕೆ ಹಾಗೆ ಕರೆಯುತ್ತೆ? title=
meaning of cat’s meow

meaning of cat’s meow Sound: ಮನುಷ್ಯರು ಪರಸ್ಪರ ಸಂವಹನ ನಡೆಸಲು ಪದಗಳನ್ನು ಬಳಸುತ್ತಾರೆ. ಈ ಪದಗಳ ಮೂಲಕ, ಜನರು ತಮ್ಮ ಭಾವನೆಗಳನ್ನು ಇತರ ವ್ಯಕ್ತಿಯೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಮನಸ್ಸಿನಲ್ಲಿ ಏನಿದೆಯೋ ಅದನ್ನು ಈ ಮಾತುಗಳ ಮೂಲಕ ಇತರರಿಗೆ ತಿಳಿಸುತ್ತಾರೆ. ಆದರೆ ಪ್ರಾಣಿಗಳು ಮನುಷ್ಯರಂತೆ ಮಾತನಾಡಲಾರವು. ಅವುಗಳಿಗೆ ನಿರ್ದಿಷ್ಟ ಪದಗಳು ಎನ್ನುವುದಿಲ್ಲ. ಹೀಗಾಗಿ ಕೆಲವು ವಿಶೇಷ ಶಬ್ದಗಳ ಮೂಲಕ ನಮ್ಮ ಜೊತೆ ಸಂವಹನ ಮಾಡುತ್ತವೆ.

ಇದನ್ನೂ ಓದಿ: ಸಾಕ್ಷಿ ಗೂ ಮುನ್ನ ಈ ನಟಿಯರೊಂದಿಗೆ ಡೇಟಿಂಗ್ ಮಾಡಿದ್ರು ಧೋನಿ! ಲಿಸ್ಟ್’ನಲ್ಲಿದ್ದಾಳೆ ಸೌತ್’ನ ಶ್ರೀಮಂತ ನಾಯಕಿ

ನಾವಿಂದು ಈ ವರದಿಯಲ್ಲಿ ಬೆಕ್ಕುಗಳು ಮಿಯಾಂವ್ ಎಂದು ಕರೆಯುವುದೇಕೆ? ಆ ಪದದ ಅರ್ಥವೇನು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಕ್ಕಿನ ಮಿಯಾಂವ್ ಪದವನ್ನು ಕೇವಲ ಶಬ್ದ ಎಂದು ಮನುಷ್ಯರು ಭಾವಿಸುತ್ತಾರೆ. ಆದರೆ ವಿಜ್ಞಾನವು ಅದರ ಅರ್ಥವನ್ನು ಕಂಡುಹಿಡಿದಿದೆ. ಬೆಕ್ಕುಗಳ ಈ ಸದ್ದು ಕೇವಲ ಶಬ್ದವಲ್ಲ. ಇದು ಬಹಳ ಮುಖ್ಯವಾದ ಅರ್ಥವನ್ನು ಹೊಂದಿದೆ. ವಿವಿಧ ಸಂದರ್ಭಗಳಲ್ಲಿ ಈ ಮಿಯಾಂವ್ ಶಬ್ದವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಮೂಲಕ ಬೆಕ್ಕು ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತದೆ.

ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಬೆಕ್ಕು ಇತರ ಬೆಕ್ಕುಗಳೊಂದಿಗೆ ಸಂವಹನ ನಡೆಸಲು ಮಿಯಾಂವ್ ಅನ್ನು ಬಳಸುವುದಿಲ್ಲ. ಅವುಗಳು ಕೇವಲ ಮನುಷ್ಯರೊಂದಿಗೆ ಸಂವಹನ ನಡೆಸಲು ಮಾತ್ರ ಮಿಯಾಂವ್ ಶಬ್ದಗಳನ್ನು ಬಳಸುತ್ತವೆ.

ಇದನ್ನೂ ಓದಿ: ದುಡ್ಡಿಗಾಗಿ ಕಸ ಗುಡಿಸುತ್ತಿದ್ದ ಈತ ಇಂದು ಕೋಟಿ ಕೋಟಿ ಸಂಪತ್ತಿನ ಒಡೆಯ: ಟೀಂ ಇಂಡಿಯಾದ ಜೂ.ಧೋನಿ

ಬೆಕ್ಕು ಅನೇಕ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಿಯಾವಿಂಗ್ ಶಬ್ದವನ್ನು ಮಾಡುತ್ತದೆ. ಇದರಲ್ಲಿ ಮುಖ್ಯವಾದದ್ದು ಬೆಕ್ಕಿನ ಹಸಿವು. ಹಸಿದ ಬೆಕ್ಕು ಜೋರಾಗಿ ಮಿಯಾಂವ್ ಮಾಡುತ್ತದೆ. ಇದಲ್ಲದೆ, ಬೆಕ್ಕು ಗಮನ ಸೆಳೆಯಲು ಬಯಸಿದಾಗ ಕೂಡ ಮಿಯಾಂವ್ ಎನ್ನುತ್ತದೆ. ಇದಾದ ಬಳಿಕ ಬೆಕ್ಕು ತನ್ನ ಆಸೆಯನ್ನು ಪೂರೈಸಿದೆ ಅಥವಾ ಈಡೇರಲಿದೆ ಎಂದು ಭಾವಿಸಿದಾಗ, ಅದರ ಮಿಯಾಂವ್ ಧ್ವನಿಯು ನಿಧಾನಗೊಳ್ಳುತ್ತದೆ. ಒಂದು ವೇಳೆ ಬೆಕ್ಕು ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದರ ಮಿಯಾಂವ್ನ ಧ್ವನಿಯು ನೋವಿನಿಂದ ಕೂಡಿರುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News