R Ashwin Statement: ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಎರಡು ವಿಕೆಟ್‌’ಗಳಿಂದ ಗೆದ್ದುಕೊಂಡಿದ್ದು, ಇಂದು ಎರಡನೇ ಪಂದ್ಯ ತಿರುವನಂತಪುರಂನ ಗ್ರೀನ್‌ ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ತಂಡದಲ್ಲಿ ವಿಶ್ವಕಪ್‌ನ ಭಾಗವಾಗಿದ್ದ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೋಪಿ ಧರಿಸಿ ತಾಯಿಯೊಂದಿಗೆ ನಿಂತಿರುವ ಈ ಬಾಲಕ ಭಾರತದ ಖ್ಯಾತ ಕ್ರಿಕೆಟಿಗ-ಸ್ಟಾರ್ ನಟನ ಅಳಿಯ! 99 ಕೋಟಿ ಒಡೆಯ ಈತ ಯಾರೆಂದು ಗೊತ್ತಾಯ್ತ?


ಸದ್ಯ ಮೊಹಮ್ಮದ್ ಶಮಿ ಕೂಡ ವಿಶ್ರಾಂತಿಯಲ್ಲಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾದ ಅತ್ಯುತ್ತಮ ಆಫ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಹೇಳಿಕೆಯೊಂದನ್ನು ನೀಡಿದ್ದಾರೆ. ಟೀಂ ಇಂಡಿಯಾದಲ್ಲಿರುವ ಓರ್ವ ಯುವ ವೇಗಿ 'ಜೂನಿಯರ್ ಶಮಿ' ಆಗಬಹುದು ಎಂದು ಹೇಳಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಮ್ಮ ನಿಯಂತ್ರಿತ ಬೌಲಿಂಗ್ ಮೂಲಕ ಎಲ್ಲರ ಮನಸೆಳೆದ ವೇಗಿ ಮುಖೇಶ್ ಕುಮಾರ್ ಟೀಂ ಇಂಡಿಯಾದ ಜೂನಿಯರ್ ಮೊಹಮ್ಮದ್ ಶಮಿ ಆಗಬಹುದು ಎಂದು ಭಾರತೀಯ ಸ್ಪಿನ್ನರ್ ಆರ್ ಅಶ್ವಿನ್ ನಂಬಿದ್ದಾರೆ.


ಅಶ್ವಿನ್ ತಮ್ಮ ಯೂಟ್ಯೂಬ್‌ ಚಾನೆಲ್’ನಲ್ಲಿ ಮಾತನಾಡಿದ್ದು “ಮೊಹಮ್ಮದ್ ಸಿರಾಜ್ ಜೂನಿಯರ್ ಶಮಿ ಆಗುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಈಗ ಆ ಸ್ಥಾನವನ್ನು ಮುಖೇಶ್ ಕುಮಾರ್ ತುಂಬಬಹುದು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: “ದೇವರಂತೆ ಬಂದ್ರಿ ಸಾರ್…”- ಕಾರು ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿಗೆ ಮರುಜೀವ ಕೊಟ್ಟ ಮೊಹಮ್ಮದ್ ಶಮಿ!


ಮುಖೇಶ್ ಕುಮಾರ್ 'ಜೂನಿಯರ್ ಶಮಿ' ಆಗಲು ಕಾರಣವೇನು ಎಂಬುದನ್ನೂ ಕೂಡ ಅಶ್ವಿನ್ ವಿವರಿಸಿದ್ದಾರೆ. “ಮುಖೇಶ್ ಕುಮಾರ್ ಅವರು ಶಮಿಯಂತೆ. ಅದೇ ಮೈಕಟ್ಟು, ಅದೇ ಎತ್ತರ, ಅದೇ ಮಣಿಕಟ್ಟಿನ ಸ್ಥಾನ ಕೂಡ. ಅವರು ಚೆಂಡನ್ನು ಹಿಡಿಯುವ ಕಲೆ ಮತ್ತು ಅತ್ಯುತ್ತಮ ಬ್ಯಾಕ್ ಸ್ಪಿನ್ ಹೊಂದಿದ್ದಾರೆ. ಬೌಲಿಂಗ್ ಮಾಡುವಾಗ ಅವರ ಕೈಗಳು ನೇರವಾಗಿರುತ್ತವೆ. ಅದು ಒಳ್ಳೆಯದು. ಅವರು ವೆಸ್ಟ್ ಇಂಡೀಸ್ ಸರಣಿಯಲ್ಲಿ ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದ್ದರು ಮತ್ತು ಬಾರ್ಬಡೋಸ್ನಲ್ಲಿ ಅಭ್ಯಾಸ ಆಟದಲ್ಲಿ ಅದ್ಭುತ ಪ್ರದರ್ಶನ ನೀಡಿದರು” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/-l9UZYUp33o?si=_K0khSS1BDeQ7ypt
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ