PAK vs NED T20 Series Postponed: ಇಂದಿನಿಂದ (ನವೆಂಬರ್ 23) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ದಿನಗಳ ಟಿ20 ಸರಣಿಯನ್ನು ಆಯೋಜಿಸಲಾಗಿದ್ದು, ಈ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದಿದೆ. ಮೇ 2024 ರಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಟಿ20 ಸರಣಿಯನ್ನು ಮುಂದೂಡಲಾಗಿದೆ.  ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಯು ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿ‌ಸಿ‌ಬಿ) ವಿನಂತಿ ಸ್ವೀಕರಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಪಾಕಿಸ್ತಾನ ಕ್ರಿಕೆಟ್ ತಂಡ ಮುಂದಿನ ವರ್ಷ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.  ಇದಕ್ಕೂ ಮೊದಲು,  ಪಾಕಿಸ್ತಾನ ಮಂಡಳಿಯು ನೆದರ್ಲೆಂಡ್ಸ್‌ನೊಂದಿಗೆ 3 ಪಂದ್ಯಗಳ ಟಿ 20 ಸರಣಿಯ ವೇಳಾಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೀಗ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸರಣಿಯನ್ನು ಮುಂದೂಡಬೇಕಾಗಿದೆ. ಪಿಸಿಬಿಯ ಕೋರಿಕೆಯ ಮೇರೆಗೆ 2024 ರಲ್ಲಿ ಪಾಕಿಸ್ತಾನದ ನೆದರ್ಲ್ಯಾಂಡ್ಸ್ ಪ್ರವಾಸವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- IND vs AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಾರಣಾಂತಿಕ ಬ್ಯಾಟ್ಸ್‌ಮನ್ ಎಂಟ್ರಿ


ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಟಿ20 ಸರಣಿ ಮುಂದೂಡಿಕೆ ಬಗ್ಗೆ ವರದಿ ಮಾಡಿರುವ Cricbuzz, ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಯು ಪಿ‌ಸಿ‌ಬಿಯಿಂದ ಸರಣಿಯನ್ನು ಮುಂದೂಡಲು ವಿನಂತಿಯನ್ನು ಸ್ವೀಕರಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಎರಡೂ ಮಂಡಳಿಗಳು ಈಗ ಸರಣಿಯನ್ನು ಮರುಹೊಂದಿಸಲು ಆಯ್ಕೆಗಳನ್ನು ಅನ್ವೇಷಿಸುತ್ತಿವೆ ಎಂದು ವರದಿಯಾಗಿದೆ.


ವಾಸ್ತವವಾಗಿ, ಪಾಕಿಸ್ತಾನವು ಮೂರು ಟೆಸ್ಟ್ ಪಂದ್ಯಗಳಿಗಾಗಿ ಮುಂದಿನ ಆಸ್ಟ್ರೇಲಿಯಾ ಪ್ರವಾಸವನ್ನು ನಿಗದಿಪಡಿಸಿದೆ ಮತ್ತು ನಂತರ ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಈ ಮಧ್ಯೆ ಪಾಕ್ ತಂಡ ತಮ್ಮದೇ ಆದ ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ಹೊಂದಿದ್ದು ಪಾಕ್ ತಂಡದ ಪ್ರಮುಖ ಆಟಗಾರರು ಈ ಎಲ್ಲಾ ಸರಣಿಗಳು ಮತ್ತು ಲೀಗ್‌ಗಳಲ್ಲಿ ಆಡುತ್ತಾರೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಈ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿಶ್ರಾಂತಿ ನೀಡುವ ನಿಟ್ಟಿನಲ್ಲಿ ಮೇ 2024 ರಲ್ಲಿ ನಡೆಯಬೇಕಿದ್ದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ಐ ಸರಣಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- ಆಸ್ಟ್ರೇಲಿಯಾ 2023ರ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು ಕರ್ನಾಟಕದ ಈ ಮಹಿಳೆ! ಮಂಗಳೂರಿನ ಆ ನಾರಿ ಯಾರು ಗೊತ್ತೇ?


ಪಾಕಿಸ್ತಾನದ ಅಂತಾರಾಷ್ಟ್ರೀಯ ವೇಳಾಪಟ್ಟಿ ಈ ಕೆಳಕಂಡಂತಿದೆ:
* ಡಿಸೆಂಬರ್ 6 ರಿಂದ ಜನವರಿ 7 ರವರೆಗೆ ಆಸ್ಟ್ರೇಲಿಯಾ ಪ್ರವಾಸ - 3 ಟೆಸ್ಟ್ ಪಂದ್ಯಗಳು
* ಜನವರಿ 12 ರಿಂದ ಜನವರಿ 21 ರವರೆಗೆ ನ್ಯೂಜಿಲೆಂಡ್ ಪ್ರವಾಸ - 5 ಟಿ20ಐಗಳು
* ಏಪ್ರಿಲ್‌ನಲ್ಲಿ ಪಾಕಿಸ್ತಾನದ ನ್ಯೂಜಿಲೆಂಡ್ ಪ್ರವಾಸ - 5 ಟಿ20ಐಗಳು
* ಮೇ 22 ರಿಂದ ಮೇ 30 ರವರೆಗೆ ಇಂಗ್ಲೆಂಡ್ ಪ್ರವಾಸ - 4 ಟಿ20ಐಗಳು
* 2024 ಜೂನ್‌ನಲ್ಲಿ ಟಿ20 ವಿಶ್ವಕಪ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.