IND vs AUS T20I Match: ವಿಶ್ವಕಪ್ ಸೋಲಿನ ನಿರಾಸೆಯ ನಡುವೆಯೇ ಇದೀಗ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಮತ್ತು ಆಸಿಸ್ ನಡುವಿನ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಕಾತುರರಾಗಿ ಕಾಯುತ್ತಿದ್ದಾರೆ. ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಮಾರಣಾಂತಿಕ ಬ್ಯಾಟ್ಸ್‌ಮನ್ ಓಪನರ್ ಆಗಿ ಎಂಟ್ರಿ ನೀಡಲಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಾರಣಾಂತಿಕ ಬ್ಯಾಟ್ಸ್‌ಮನ್ ಸೇರ್ಪಡೆಯಾಗಲಿದ್ದಾರೆ. ಇವರು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲರು ಎಂದು ಹೇಳಲಾಗುತ್ತಿದೆ.
ಭಾರತದ ಪರವಾಗಿ ಕೇವಲ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಈ ಯುವ ಎಡಗೈ ಬ್ಯಾಟ್ಸ್‌ಮನ್ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಪ್ರಾಬಲ್ಯವನ್ನು ಕಂಡಿರುವ ಕ್ರಿಕೆಟ್ ಅಭಿಮಾನಿಗಳು ಈತ ಏಕಾಂಗಿಯಾಗಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಬ್ಯಾಟ್ಸ್‌ಮನ್ ಎಂದು ಭರವಸೆಯಿಂದ ಹೇಳುತ್ತಾರೆ. ಆತ ಬೇರಾರೂ ಅಲ್ಲ ಅವರೇ ಯಶಸ್ವಿ ಜೈಸ್ವಾಲ್.
ಇದನ್ನೂ ಓದಿ- IND vs AUS: ಟಿ20ಗೂ ಮೊದಲೇ ಈ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ಬ್ಯಾಟ್ಸ್‌ಮನ್ ಸರಣಿಯಿಂದ ಔಟ್
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಯುವ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಓಪನಿಂಗ್ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಗಮನಾರ್ಹವಾಗಿ, ವೇಗದ ಬ್ಯಾಟಿಂಗ್‌ನಲ್ಲಿ ನೈಪುಣ್ಯತೆ ಹೊಂದಿರುವ ಯಶಸ್ವಿ ಜೈಸ್ವಾಲ್ ಭಾರತ ಪರ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 167.57 ಸ್ಟ್ರೈಕ್ ರೇಟ್‌ನಲ್ಲಿ 1 ಶತಕ ಮತ್ತು 1 ಅರ್ಧಶತಕವನ್ನು ಒಳಗೊಂಡಂತೆ 248 ರನ್ ಗಳಿಸಿದ್ದಾರೆ. ಇದಲ್ಲದೆ, ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರ 14 ಪಂದ್ಯಗಳಲ್ಲಿ 163.61 ಸ್ಟ್ರೈಕ್ ರೇಟ್‌ನಲ್ಲಿ 82 ಬೌಂಡರಿ ಮತ್ತು 26 ಸಿಕ್ಸರ್‌ಗಳನ್ನು ಒಳಗೊಂಡಂತೆ 625 ರನ್ ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ ಯಶಸ್ವಿ ಜೈಸ್ವಾಲ್ 124 ರನ್
ಗಳ ಅತ್ಯುತ್ತಮ ಸ್ಕೋರ್ ಹೊಂದಿದ್ದಾರೆ.
ಇದನ್ನೂ ಓದಿ- ಸೋಲಿನ ನೋವಲ್ಲಿ ಮಾತನಾಡಲು ನಿರಾಕರಿಸಿದ ವಿರಾಟ್! ಪರಿಸ್ಥಿತಿ ಅರಿತ ರವಿಶಾಸ್ತ್ರಿ ತಕ್ಷಣವೇ ಏನು ಮಾಡಿದ್ರು ನೋಡಿ
ಟೀಂ ಇಂಡಿಯಾ vs ಆಸಿಸ್ ಟಿ20 ಸರಣಿಯ ವೇಳಾಪಟ್ಟಿ:
1ನೇ ಟಿ20 - 23 ನವೆಂಬರ್ (ವಿಶಾಖಪಟ್ಟಣಂ)
2ನೇ ಟಿ20 - 26 ನವೆಂಬರ್ (ತಿರುವನಂತಪುರಂ)
3ನೇ ಟಿ20 - 28 ನವೆಂಬರ್ (ಗುವಾಹಟಿ)
4ನೇ ಟಿ20 - 1 ಡಿಸೆಂಬರ್ (ನಾಗ್ಪುರ)
5ನೇ ಟಿ20 - 3 ಡಿಸೆಂಬರ್ (ಹೈದರಾಬಾದ್)
ಈ ಎಲ್ಲಾ ಪಂದ್ಯಗಳು ಸಂಜೆ 7ಗಂಟೆಗೆ ನಡೆಯಲಿವೆ.
ಟೀಂ ಇಂಡಿಯಾ vs ಆಸಿಸ್ ಟಿ20 ಸರಣಿಗಾಗಿ ಉಭಯ ತಂಡಗಳು ಈ ಕೆಳಕಂದಂತಿವೆ:
ಟೀಂ ಇಂಡಿಯಾ:
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ರಿತುರಾಜ್ ಗಾಯಕ್ವಾಡ್ (ವೈಸ್ ಕ್ಯಾಪ್ಟನ್), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಅವೇಶ್ ಖಾನ್., ಮುಖೇಶ್ ಕುಮಾರ್.
ಆಸ್ಟ್ರೇಲಿಯಾ:
ಮ್ಯಾಥ್ಯೂ ವೇಡ್ (ಕ್ಯಾಪ್ಟನ್), ಮ್ಯಾಥ್ಯೂ ಶಾರ್ಟ್, ಟಿಮ್ ಡೇವಿಡ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಆರನ್ ಹಾರ್ಡಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಜೋಶ್ ಇಂಗ್ಲಿಸ್, ತನ್ವಿರ್ ಸಂಘ, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆಂಡಾರ್ಫ್, ಸ್ಪೆನ್ಸರ್ ಜಾನ್ಸನ್, ಆಡಮ್ ಝಂಪಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.