MS Dhoni: ಟೀಂ ಇಂಡಿಯಾದ ಮಾಜಿ ಅನುಭವಿ ಆಟಗಾರ ಮತ್ತು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ನಾಯಕತ್ವದಲ್ಲಿ ಭಾರತಕ್ಕೆ ಎರಡನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶವಿತ್ತು. ಅಷ್ಟೇ ಅಲ್ಲದೆ, ಮೂರು ಪ್ರಮುಖ ಐಸಿಸಿ ಪಂದ್ಯಾವಳಿಗಳಲ್ಲಿ ತನ್ನ ತಂಡವನ್ನು ಚಾಂಪಿಯನ್ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ನಾಯಕ ಧೋನಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ದೇವರಂತೆ ಬಂದ್ರಿ ಸಾರ್…”- ಕಾರು ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿಗೆ ಮರುಜೀವ ಕೊಟ್ಟ ಮೊಹಮ್ಮದ್ ಶಮಿ!


ಅವರ ನಾಯಕತ್ವದಲ್ಲಿ, ಭಾರತವು 2011 ರಲ್ಲಿ ODI ವಿಶ್ವಕಪ್ ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಲ್ಲದೆ, ಧೋನಿಯ ನಾಯಕತ್ವದಲ್ಲಿ ಭಾರತವು 2007 ರಲ್ಲಿ ತಮ್ಮ ಮೊದಲ T20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಇಷ್ಟು ಯಶಸ್ವಿ ನಾಯಕ ಮತ್ತು ಆಟಗಾರನಾದರೂ ಧೋನಿ ಅವರಿಗೆ ಲೆಜೆಂಡ್ಸ್ ಲೀಗ್‌’ನಲ್ಲಿ ಕ್ರಿಕೆಟ್ ಆಡಲು ಏಕೆ ಅವಕಾಶ ನೀಡಲಿಲ್ಲ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.


ಇದನ್ನೂ ಓದಿ: 700 ವರ್ಷಗಳ ಬಳಿಕ 5 ರಾಜಯೋಗ: ಈ ರಾಶಿಯ ಜನರ ಬಾಳಲ್ಲಿ ಬಂಪರ್ ಲಾಭ.. ಬಹುದೊಡ್ಡ ಆಸೆ ಈಡೇರುತ್ತೆ


BCCI ನಿಯಮಗಳ ಪ್ರಕಾರ, ಯಾವುದೇ ಆಟಗಾರನು BCCI ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವವರೆಗೆ  ವಿದೇಶಿ ಲೀಗ್ ಅಥವಾ ಫ್ರಾಂಚೈಸ್ ಲೀಗ್‌ನಲ್ಲಿ (ಐಪಿಎಲ್ ಹೊರತುಪಡಿಸಿ) ಆಡುವಂತಿಲ್ಲ. ವಿದೇಶಿ ಲೀಗ್ ಅಥವಾ ಫ್ರಾಂಚೈಸಿ ಲೀಗ್‌’ನಲ್ಲಿ ಆಡಲು, ಆಟಗಾರನು ಬಿಸಿಸಿಐನಿಂದ ಅನುಮತಿ ಪಡೆಯಬೇಕು. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿಯಾಗಿದ್ದರೂ ಸಹ ಇನ್ನೂ ಕೂಡ ಐಪಿಎಲ್ ಆಡುತ್ತಿದ್ದಾರೆ. ಅಂದರೆ, ಐಪಿಎಲ್’ನಿಂದಲೂ ನಿವೃತ್ತಿಯಾದಲ್ಲಿ ಲೆಜೆಂಡ್ಸ್ ಲೀಗ್’ನಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಬಹುದು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ