David Warner in Pushpa 2: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸೆನ್ಸೇಷನಲ್ ಡೈರೆಕ್ಟರ್ ಸುಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ʼಪುಷ್ಪʼ ಸಿನಿಮಾದ ಮುಂದುವರಿದ ಭಾಗ ʼಪುಷ್ಪಾ- 2: ದಿ ರೂಲ್ʼ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಇನ್ನು ಈ ಸಿನಿಮಾ ಡಿಸೆಂಬರ್ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?


ಈ ಎಲ್ಲದರ ನಡುವೆ ಬಹುನಿರೀಕ್ಷಿತ ಚಿತ್ರದಿಂದ ಒಂದು ಕ್ರೇಜಿ ನ್ಯೂಸ್ ಬಂದಿದೆ. ಈ ಸಿನಿಮಾದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ನಟಿಸಲಿದ್ದು, ಅದೂ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.


ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬಗ್ಗೆ ತಿಳಿಯದ ಕ್ರಿಕೆಟ್ ಪ್ರೇಮಿಯೇ ಇಲ್ಲ. ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ವಿಧ್ವಂಸಕತೆ ಸೃಷ್ಟಿಸುವ ವಾರ್ನರ್‌, ಬಿಡುವಿನ ವೇಳೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುತ್ತಾ ಸದ್ದು ಮಾಡುತ್ತಾರೆ.


ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಪ್ರಿನ್ಸ್ ಮಹೇಶ್ ಬಾಬು, ಪವರ್ ಸ್ಟಾರ್ ಪವನ್ ಕಲ್ಯಾಣ್, ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾಗಳ ಡೈಲಾಗ್‌ಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹೇಳುತ್ತಾ ತೆಲುಗು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ವಾರ್ನರ್.‌  


ಈ ಮಧ್ಯೆ, ಡೇವಿಡ್ ವಾರ್ನರ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ಫೋಟೋದಲ್ಲಿ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಒಂದು ಕೈಯಲ್ಲಿ ಗನ್ ಇದೆ. ಜೊತೆಗೆ ಸುತ್ತಲೂ ಬಾಡಿಗಾರ್ಡ್ಸ್‌ ಇರುವುದನ್ನು ಕೂಡ ಕಾಣಬಹುದು. ಸದ್ಯ ಈ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ:  ಬಾಹುಬಲಿ ನಟ ಪ್ರಭಾಸ್ ನಿಜವಾದ ಹೆಸರೇನು ಗೊತ್ತಾ? ಸಿಕ್ಕಾಪಟ್ಟೆ ದೊಡ್ಡದಾಗಿ ಇವರ ಅಸಲಿ ನಾಮ!!


ಈ ಸುದ್ದಿ ನಿಜವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕೆಲವರ ಪ್ರಕಾರ, ಈ ಸಿನಿಮಾದಲ್ಲಿ ವಾರ್ನರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ