cricketers who got married with the wives of fellow teammate: ಕ್ರಿಕೆಟಿಗರ ಪತ್ನಿಯರು ಕೂಡ ಅನೇಕ ಕಾರಣಗಳಿಗಾಗಿ ಜನಮನದಲ್ಲಿ ಉಳಿಯುತ್ತಾರೆ. ಇದೀಗ ಗೆಳೆಯನ ಹೆಂಡತಿಯರನ್ನೇ ಮದುವೆಯಾದ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ..


COMMERCIAL BREAK
SCROLL TO CONTINUE READING

ಮುರಳಿ ವಿಜಯ್: ಈ ಪಟ್ಟಿಯಲ್ಲಿ ಮೊದಲ ಮತ್ತು ದೊಡ್ಡ ಹೆಸರು ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ ಅವರದು. ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ಬಂಜಾರಾ ಅವರನ್ನು ಮುರಳಿ ವಿವಾಹವಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳೂ ಇದ್ದಾರೆ.


ನಿಕಿತಾ ಬಂಜಾರ: ದಿನೇಶ್ ಕಾರ್ತಿಕ್ ಕೇವಲ 22 ನೇ ವಯಸ್ಸಿನಲ್ಲಿ ನಿಕಿತಾ ಬಂಜಾರಾ ಅವರನ್ನು ವಿವಾಹವಾದರು. ಆದರೆ, ಮದುವೆಯಾದ ಕೇವಲ 5 ವರ್ಷಗಳ ನಂತರ, ನಿಕಿತಾ ಮತ್ತು ಕಾರ್ತಿಕ್ ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದರು.. 


ದಿನೇಶ್ ಕಾರ್ತಿಕ್: ಕಾರ್ತಿಕ್ ಮತ್ತು ನಿಕಿತಾ ಬಂಜಾರಾ ನಡುವಿನ ವಿಚ್ಛೇದನಕ್ಕೆ ಪ್ರಮುಖ ಕಾರಣವೆಂದರೆ ನಿಕಿತಾ ಮತ್ತು ಮುರಳಿ ವಿಜಯ್ ನಡುವಿನ ಸಂಬಂಧ. ನಿಕಿತಾ ಕಾರ್ತಿಕ್‌ನಿಂದ ಬೇರ್ಪಟ್ಟು ಮುರಳಿ ವಿಜಯ್ ಅವರನ್ನು ವಿವಾಹವಾದರು. ಕಾರ್ತಿಕ್ ಕೂಡ ನಂತರ ದೀಪಿಕಾ ಪಳ್ಳಿಕಲ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು.. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.


ಯೋಗರಾಜ್ ಸಿಂಗ್: ಯೋಗರಾಜ್ ಸಿಂಗ್ ಈ ಹಿಂದೆ ಶಬ್ನಮ್ ಅವರನ್ನು ಮದುವೆಯಾಗಿದ್ದರು. ಆದರೆ ನಂತರ ಇಬ್ಬರೂ ಪರಸ್ಪರ ಬೇರ್ಪಟ್ಟರು. ಯೋಗರಾಜ್ ನಂತರ ಸತ್ವೀರ್ ಕೌರ್ ಅವರನ್ನು ವಿವಾಹವಾದರು.


ಇದನ್ನೂ ಓದಿ-ಧಿಡೀರ್‌ ಮುಂಬೈಗೆ ಬಂದಿಳಿದ ನಟಿ ಅನುಷ್ಕಾ ಶರ್ಮಾ.. ವಿರಾಟ್‌ ಪತ್ನಿಯ ಅವತಾರ ನೋಡಿ ʼಯೆಪ್ಪಾ ಹಿಂಗ್ಯಾಕಾಗಿದ್ದಾರೆ ಅತ್ತಿಗೆʼ ಎಂದ ಫ್ಯಾನ್ಸ್!!‌


ಉಪುಲ್ ತರಂಗ: ಈ ಪಟ್ಟಿಯಲ್ಲಿ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗ ಹೆಸರೂ ಸೇರಿದೆ. ತರಂಗ ಅವರು ತಮ್ಮ ಆರಂಭಿಕ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಅವರ ಪತ್ನಿ ನೀಲಂಕಾ ಅವರನ್ನು ವಿವಾಹವಾದರು.


ದಿಲ್ಶನ್ ಮತ್ತು ನೀಲಂಕಾ: ಮದುವೆಯಾದ ಕೆಲವೇ ದಿನಗಳಲ್ಲಿ ದಿಲ್ಶನ್ ಮತ್ತು ನೀಲಂಕಾ ನಡುವೆ ಬಿರುಕು ಶುರುವಾಗಿತ್ತು. ವರದಿಗಳ ಪ್ರಕಾರ, ತರಂಗಾ ಜೊತೆ ನೀಲಂಕಾಗೆ ಇದ್ದ ಸಂಬಂಧವೇ ಮನಸ್ತಾಪಕ್ಕೆ ಕಾರಣ. ಇದರಿಂದಾಗಿ ದಿಲ್ಶನ್ ನೀಲಂಕಾಗೆ ವಿಚ್ಛೇದನ ನೀಡಿದರು. ನೀಲಂಕಾಳ ವಿಚ್ಛೇದನದ ನಂತರ ತರಂಗ ಅವಳನ್ನು ಮದುವೆಯಾದರು..


ತಿಲಕರತ್ನೆ ದಿಲ್ಶನ್: ದಿಲ್ಶನ್ ಕೂಡ ತನ್ನ ಬಾಲ್ಯದ ಗೆಳತಿ ಮಂಜುಳಾಳನ್ನು ಎರಡನೇ ಮದುವೆಯಾದ. ಮಂಜುಳಾ ತೆಲುಗು ನಟಿ. ದಿಲ್ಶಾನ್ ದಂಪತಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ.


ಇದನ್ನೂ ಓದಿ-ಫಸ್ಟ್‌ ನೈಟ್‌ ಫೀಲ್‌ ಕೋಡೋ ಸಾಂಗ್‌ ಇದು..! ಇವತ್ತಿಗೂ ಈ ಹಾಡು ಕೇಳಿದ್ರೆ ಮೈ ಜುಮ್ ಅಂತದೆ..‌!! ನಿದ್ದೆನೂ ಬರಲ್ಲ ಗೊತ್ತಾ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.