ನವದೆಹಲಿ : ಐಪಿಎಲ್ ಮೆಗಾ ಹರಾಜಿನ (IPL Mega auction) ದಿನಾಂಕಗಳನ್ನು ಪ್ರಕಟಿಸಲಾಗಿದೆ. ಐಪಿಎಲ್ (IPL) ಅಭಿಮಾನಿಗಳು IPL 2022 ಮತ್ತು ಮೆಗಾ ಹರಾಜಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ IPL 2022 ರ ಮೇಲೆ ಇದೀಗ ಸಂಕಷ್ಟದ ಕಾರ್ಮೋಡಗಳು ಆವರಿಸಿವೆ. ಬಿಸಿಸಿಐ (BCCI) ಐಪಿಎಲ್ 2022 ಸೀಸನ್ ಕುರಿತು ಸಭೆ ನಡೆಸಿ ಚರ್ಚೆ ನಡೆಸಲಿದೆ.  


COMMERCIAL BREAK
SCROLL TO CONTINUE READING

ಬಿಸಿಸಿಐ ನಡೆಸಲಿದೆ ಸಭೆ : 
ಈ ಲೀಗ್‌ನ 2022 ರ ಸೀಸನ್ ಅನ್ನು ಆಯೋಜಿಸಲು ಪರ್ಯಾಯ ಯೋಜನೆಗಳನ್ನು ಚರ್ಚಿಸಲು BCCI ಮುಂದಿನ ತಿಂಗಳು ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತಂಡದ ಮಾಲೀಕರೊಂದಿಗೆ ಸಭೆ ನಡೆಸಬಹುದು. ಭಾರತದಲ್ಲಿ ಇತ್ತೀಚೆಗೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳ ಕಂಡು ಬಂದಿದೆ. 2022 ರಲ್ಲಿ ಐಪಿಎಲ್ ನಡೆಯಲಿದ್ದು, ಏಪ್ರಿಲ್/ಮೇ ತಿಂಗಳಲ್ಲಿ ದೇಶಾದ್ಯಂತ ಎದುರಾಗಬಹುದಾದ ಅಪಾಯಗಳ ಬಗ್ಗೆ ಮಂಡಳಿಯು ಸಾಕಷ್ಟು ಚಿಂತನೆ ನಡೆಸುತ್ತಿದೆ. ವರದಿಯ ಪ್ರಕಾರ, ಬಿಸಿಸಿಐ ಫ್ರಾಂಚೈಸಿ ಮಾಲೀಕರೊಂದಿಗೆ ಎಲ್ಲಾ ಸನ್ನಿವೇಶಗಳ ಕುರಿತು ಚರ್ಚೆ ನಡೆಸಬಹುದು. ಐಪಿಎಲ್ 2022 ಏಪ್ರಿಲ್ 2 ರಂದು ಚೆನ್ನೈನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. 


ಇದನ್ನೂ ಓದಿ : IPL 2022 Mega Auctionನಲ್ಲಿ ಈ ಆಟಗಾರರಿಗೆ ಖರೀದಿದಾರರೇ ಇಲ್ಲ, ಮುಗಿದೇ ಹೋಯಿತು ಇವರ ವೃತ್ತಿ ಜೀವನ


ಫೆಬ್ರವರಿ 7 ಮತ್ತು 8 ರಂದು ನಡೆಯಲಿದೆ  ಮೆಗಾ ಹರಾಜು :
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜನ್ನು (IPL Mega Auction) ಫೆಬ್ರವರಿ 7 ಮತ್ತು 8 ರಂದು ಬೆಂಗಳೂರಿನಲ್ಲಿ ಬಿಸಿಸಿಐ ಆಯೋಜಿಸಲಿದೆ. ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಈ ಮಾಹಿತಿ ನೀಡಿದ್ದಾರೆ. ಇದು ಐಪಿಎಲ್‌ನ ಕೊನೆಯ ಮೆಗಾ ಹರಾಜು ಆಗಿರಬಹುದು ಎನ್ನಲಾಗಿದೆ. ಏಕೆಂದರೆ ಹೆಚ್ಚಿನ ಮೂಲ ಐಪಿಎಲ್ ತಂಡಗಳು (IPL Teams) ಈಗ ಅದನ್ನು ರದ್ದುಗೊಳಿಸಲು ಬಯಸುತ್ತಿವೆ. ಈ ಹಿಂದೆ ಯುಎಇಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯಕ್ಕೆ ಬಿಸಿಸಿಐ (BCCI) ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ.


ಈ ಬಾರಿ ಕಣದಲ್ಲಿ ಹತ್ತುತಂಡಗಳು :
ಮೂಲಗಳ ಪ್ರಕಾರ, ಕರೋನಾ ವೈರಸ್‌ನ ಓಮಿಕ್ರಾನ್ (Omicron) ರೂಪಾಂತರದ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಿದೇಶಿ ಪ್ರಯಾಣದ ಮೇಲೆ ನಿರ್ಬಂಧಗಳಿರಬಹುದು. ಹೊಸ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್‌  ಸೇರ್ಪಡೆಯಿಂದ ಈ ವರ್ಷ ಐಪಿಎಲ್‌ನಲ್ಲಿ 10 ತಂಡಗಳು ಇರುತ್ತವೆ. ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ, ಭಾರತೀಯ ಯುವಕರು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತದ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಗಳಿಸುವ ಸಾಧ್ಯತೆಯೂ ಇದೆ.  


ಇದನ್ನೂ ಓದಿ : IND vs SA:ಆಟಗಾರರಿಗೆ ಕೊರೊನಾ ತಗುಲಿದಲ್ಲಿ ರದ್ದಾಗುತ್ತಾ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.