IPL ಮೆಗಾ ಹರಾಜಿಗೂ ಮೊದಲೇ ಈ ತಂಡದ ಪಾಲಾದ KKR ನ ಈ ಆಟಗಾರ

ಬಿಗ್ ಬ್ಯಾಷ್ ಲೀಗ್  ತಂಡದ ಮೆಲ್ಬೋರ್ನ್ ಸ್ಟಾರ್ಸ್ ಬುಧವಾರ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಲೀಗ್‌ನ ಪ್ರಸಕ್ತ ಋತುವಿನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪ್ರಕಟಿಸಿದೆ.

Written by - Ranjitha R K | Last Updated : Dec 8, 2021, 03:38 PM IST
  • ಈ KKR ಆಟಗಾರನ ಅದೃಷ್ಟ
  • ದೊಡ್ಡ ಯಶಸ್ಸನ್ನು ಸಾಧಿಸಿದ ಆಟಗಾರ
  • ಈ ತಂಡವನ್ನು ಸೇರಿಕೊಂಡ ಆಲ್ ರೌಂಡರ್
IPL ಮೆಗಾ ಹರಾಜಿಗೂ ಮೊದಲೇ ಈ ತಂಡದ ಪಾಲಾದ KKR ನ ಈ ಆಟಗಾರ title=
ಈ KKR ಆಟಗಾರನ ಅದೃಷ್ಟ (file photo)

ನವದೆಹಲಿ : ಐಪಿಎಲ್ 2022 (IPL 2022) ಪ್ರಾರಂಭವಾಗುವ ಮೊದಲು ಮೆಗಾ ಹರಾಜು (IPL mega auction) ನಡೆಯಲಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ 8 ತಂಡಗಳು ತಮ್ಮ ಕೆಲ ಆಟಗಾರರನ್ನು ಉಳಿಸಿಕೊಂಡು, ರಿಲೀಸ್ ಮಾಡಿವೆ. ಇನ್ನು 10 ತಂಡಗಳು ಹರಾಜಿನಲ್ಲಿ ವಿಶ್ವದೆಲ್ಲೆಡೆಯ ಆಟಗಾರರಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಿವೆ. ಆದರೆ ಈ ನಡುವೆ ಕೆಕೆಆರ್‌ನ (KKR) ಆಟಗಾರರಬ್ಬರ ಅದೃಷ್ಟ ಖುಲಾಯಿಸಿದೆ. 

ಕೆಕೆಆರ್ ಆಟಗಾರನಿಗೆ ಖುಲಾಯಿಸಿದ ಅದೃಷ್ಟ : 
ಬಿಗ್ ಬ್ಯಾಷ್ ಲೀಗ್ (BBL) ತಂಡದ ಮೆಲ್ಬೋರ್ನ್ ಸ್ಟಾರ್ಸ್ (Melbourne Stars) ಬುಧವಾರ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ (Andre Russell) ಲೀಗ್‌ನ ಪ್ರಸಕ್ತ ಋತುವಿನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪ್ರಕಟಿಸಿದೆ. ರಸೆಲ್ ಐದು ಪಂದ್ಯಗಳನ್ನು ಆಡಲಿದ್ದಾರೆ. ಜೋ ಕ್ಲಾರ್ಕ್, ಸೈಯದ್ ಫರಿದೌನ್ ಮತ್ತು ಹ್ಯಾರಿಸ್ ರೌಫ್ ನಂತರ ಕೈಸ್ ಅಹ್ಮದ್ ಈ ಋತುವಿನಲ್ಲಿ 'ಸ್ಟಾರ್ಸ್' ಗೆ ಸಹಿ ಹಾಕುವ ಐದನೇ ಆಟಗಾರನಾಗಲಿದ್ದಾರೆ. ಶುಕ್ರವಾರ ಮೊದಲ ಪಂದ್ಯದಲ್ಲಿ ಅವರ ಹಿಂದಿನ ಬಿಬಿಎಲ್ (BBL) ಕ್ಲಬ್ ಸಿಡ್ನಿ ಥಂಡರ್ ವಿರುದ್ಧ ನಡೆಯಲಿದೆ ಎಂದು ಮುಖ್ಯ ತರಬೇತುದಾರ ಡೇವಿಡ್ ಹಸ್ಸಿ, ತಿಳಿಸಿದ್ದಾರೆ. 

ಇದನ್ನೂ ಓದಿ : ವಿರಾಟ್ ಕೊಹ್ಲಿ ಕೊನೆಯ ಚಾನ್ಸ್, ಟೀಂ ಇಂಡಿಯಾ ನಾಯಕನ ಪಟ್ಟಕ್ಕೆ ಏರಲಿದ್ದಾರೆ ಈ ಆಟಗಾರ..!

2014 ರಿಂದ 2017 ರವರೆಗಿನ ಮೂರು ಋತುಗಳಲ್ಲಿ ರಸೆಲ್ BBL ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರಸೆಲ್ ಥಂಡರ್‌ಗಾಗಿ ಮೂರು ಋತುಗಳಲ್ಲಿ 19 ಪಂದ್ಯಗಳನ್ನು ಆಡಿದ್ದಾರೆ. BBL ನಲ್ಲಿ ಅವರ ಕೊನೆಯ ಪಂದ್ಯವು ಜನವರಿ 2017 ರಲ್ಲಿ ಆಗಿತ್ತು. BBL ನಲ್ಲಿ, ಅವರು 17 ಇನ್ನಿಂಗ್ಸ್‌ಗಳಲ್ಲಿ 166.29 ಸ್ಟ್ರೈಕ್ ರೇಟ್‌ನಲ್ಲಿ 21 ಸಿಕ್ಸರ್‌ಗಳನ್ನು ಒಳಗೊಂಡಂತೆ 296 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಬೌಲಿಂಗ್ ಬಗ್ಗೆ ಹೇಳುವುದಾದರೆ, 23 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇನ್ನು 2022 ರ ಐಪಿಎಲ್ ಸೀಸನ್‌ಗೆ ಮುಂಚಿತವಾಗಿ ರಸೆಲ್ ಅವರನ್ನು ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಉಳಿಸಿಕೊಂಡಿದೆ.

IPL ಮೆಗಾ ಹರಾಜು ಯಾವಾಗ ನಡೆಯುತ್ತದೆ?
IPL 2022 Mega Auction ದಿನಾಂಕಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ, ಆದರೆ ಈ ಕಾರ್ಯಕ್ರಮವನ್ನು ಡಿಸೆಂಬರ್ 2021 ಅಥವಾ ಜನವರಿ 2022 ರಲ್ಲಿ ಆಯೋಜಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : MS Dhoni- ಬಹಳ ದಿನಗಳ ನಂತರ ಧೋನಿ-ಯುವರಾಜ್ ಕಂಡಿದ್ದು ಹೀಗೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News