`ಎಲ್ಲವೂ ಸರಿಯಾಗಿದೆ`: ಜಡೇಜಾ ನಡೆಗೆ ಸ್ಪಷ್ಟನೆ ನೀಡಿದ ಸಿಎಸ್‌ಕೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಈ ನಡೆ ಅನೇಕ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ಸಿಎಸ್‌ಕೆ ಫ್ರಾಂಚೈಸಿ ಮತ್ತು ರವೀಂದ್ರ ಜಡೇಜಾ ಮಧ್ಯೆ ಒಳಜಗಳಗಳು ಇವೆ ಎಂದು ಹೇಳಲಾಗಿತ್ತು. ಇವೆಲ್ಲದರ ಬೆನ್ನಲ್ಲೇ ಸಿಎಸ್‌ಕೆ ಅಧಿಕೃತ ಮೂಲಗಳು ಹೇಳಿದ್ದು ಹೀಗೆ;
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿರುವ ಯಶಸ್ವಿ ತಂಡಗಳಲ್ಲಿ ಒಂದು. ಆದರೆ ಈ ತಂಡದಲ್ಲಿ ಹೆಸರು ಮಾಡಿದ್ದ ರವೀಂದ್ರ ಜಡೇಜಾ ಕಳೆದ ಕೆಲ ದಿನಗಳ ಹಿಂದೆ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಈ ನಡೆ ಗಂಭೀರತೆಯನ್ನು ಪಡೆದುಕೊಂಡಿದ್ದು, ಇನ್ನು ಮುಂದೆ ಸಿಎಸ್‌ಕೆ ಪರವಾಗಿ ಜಡೇಜಾ ಆಡುವುದಿಲ್ಲವೇ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಮೂಲಗಳಿಂದ ಪ್ರತಿಕ್ರಿಯೆ ಬಂದಿದೆ.
ಇದನ್ನೂ ಓದಿ: Green Sky: ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ಆಕಾಶ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಈ ನಡೆ ಅನೇಕ ಊಹಾಪೋಹಗಳನ್ನು ಸೃಷ್ಟಿ ಮಾಡಿತ್ತು. ಸಿಎಸ್‌ಕೆ ಫ್ರಾಂಚೈಸಿ ಮತ್ತು ರವೀಂದ್ರ ಜಡೇಜಾ ಮಧ್ಯೆ ಒಳಜಗಳಗಳು ಇವೆ ಎಂದು ಹೇಳಲಾಗಿತ್ತು. ಇವೆಲ್ಲದರ ಬೆನ್ನಲ್ಲೇ ಸಿಎಸ್‌ಕೆ ಅಧಿಕೃತ ಮೂಲಗಳು ಹೇಳಿದ್ದು ಹೀಗೆ;
“ಇದು ರವೀಂದ್ರ ಜಡೇಜಾ ಅವರ ವೈಯಕ್ತಿಕ ನಿರ್ಧಾರ. ಅವರು ತಮ್ಮ ಅಧಿಕೃತ ಖಾತೆ ಇನ್‌ಸ್ಟಾಗ್ರಾಂನಿಂದ ಸಿಎಸ್‌ಕೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಮಗೆ ತಿಳಿದಿಲ್ಲ. ಅವರು ಮತ್ತು ನಮ್ಮ ನಡುವೆ ಎಲ್ಲವೂ ಸರಿಯಾಗಿದೆ” ಎಂದು ಸಿಎಸ್‌ಕೆ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ! ಜೆಪಿ ನಡ್ಡಾ ಭೇಟಿ ಮಾಡಿದ ಸಿಎಂ, ಡಿಸಿ ಎಂ
ಪೋಸ್ಟ್ ಡಿಲೀಟ್ ಮಾಡಿದ ಜಡೇಜಾ:
ರವೀಂದ್ರ ಜಡೇಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ 2021 ಮತ್ತು 2022ರ ಐಪಿಎಲ್ ಸೀಸನ್‌ಗಳಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಜಡೇಜಾ ಅವರ ಈ ನಡೆ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಐಪಿಎಲ್ 2023ರಲ್ಲಿ ಜಡೇಜಾ ಸಿಎಸ್‌ಕೆ ಪರ ಆಡುವುದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯ ಇವೆಲ್ಲದಕ್ಕೂ ಪ್ರತಿಕ್ರಿಯೆ ನೀಡಿರುವ ಸಿಎಸ್‌ಕೆ ಅಧಿಕಾರಿ, ನಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ. ಆದರೆ ಜಡೇಜಾ ಮಾತ್ರ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.