Green Sky: ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ಆಕಾಶ

ಪ್ರಕೃತಿಯು ಅನೇಕ ನಿಗೂಢಗಳಿಂದ ತುಂಬಿದೆ. ಪ್ರಕೃತಿಯ ಆ ನಿಗೂಢಗಳೂ ಆಗಾಗ ನಮ್ಮ ಮುಂದೆ ಬರುತ್ತವೆ. ಇವುಗಳಲ್ಲಿ ಕೆಲವನ್ನು ತಿಳಿದ ನಂತರ ಜನರು ಸಾಕಷ್ಟು ಆಶ್ಚರ್ಯಪಡುತ್ತಾರೆ. ಅಮೆರಿಕದ ಸೌತ್ ಡಕೋಟಾದಲ್ಲಿ ಈ ವಾರದ ಆರಂಭದಲ್ಲಿ ಇದೇ ರೀತಿಯ ವಿಚಿತ್ರ ದೃಶ್ಯ ಕಂಡುಬಂದಿದೆ. 

Written by - Chetana Devarmani | Last Updated : Jul 9, 2022, 04:57 PM IST
  • ಪ್ರಕೃತಿಯು ಅನೇಕ ನಿಗೂಢಗಳಿಂದ ತುಂಬಿದೆ
  • ಪ್ರಕೃತಿಯ ಆ ನಿಗೂಢಗಳೂ ಆಗಾಗ ನಮ್ಮ ಮುಂದೆ ಬರುತ್ತವೆ.
  • ಅಮೆರಿಕದ ಸೌತ್ ಡಕೋಟಾದ ವಿಚಿತ್ರ ದೃಶ್ಯ ಕಂಡುಬಂದಿದೆ
Green Sky: ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ಆಕಾಶ title=
ಹಸಿರು ಬಣ್ಣಕ್ಕೆ ತಿರುಗಿದ ಆಕಾಶ

ಪ್ರಕೃತಿಯು ಅನೇಕ ನಿಗೂಢಗಳಿಂದ ತುಂಬಿದೆ. ಪ್ರಕೃತಿಯ ಆ ನಿಗೂಢಗಳೂ ಆಗಾಗ ನಮ್ಮ ಮುಂದೆ ಬರುತ್ತವೆ. ಇವುಗಳಲ್ಲಿ ಕೆಲವನ್ನು ತಿಳಿದ ನಂತರ ಜನರು ಸಾಕಷ್ಟು ಆಶ್ಚರ್ಯಪಡುತ್ತಾರೆ. ಅಮೆರಿಕದ ಸೌತ್ ಡಕೋಟಾದಲ್ಲಿ ಈ ವಾರದ ಆರಂಭದಲ್ಲಿ ಇದೇ ರೀತಿಯ ವಿಚಿತ್ರ ದೃಶ್ಯ ಕಂಡುಬಂದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜುಲೈ 5, 2022 ರಂದು, ಆಕಾಶವು ಇದ್ದಕ್ಕಿದ್ದಂತೆ ಇಲ್ಲಿ ಹಸಿರು ಬಣ್ಣಕ್ಕೆ ತಿರುಗಿತು. ಹಸಿರು ಬಣ್ಣದ ಆಕಾಶ ನೋಡಿದ ಜನರು ಅದರ ಫೋಟೋಗಳನ್ನು ತೆಗೆಯಲು ಪ್ರಾರಂಭಿಸಿದರು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

 

 

ಇದನ್ನೂ ಓದಿ: Shinzo Abe declared dead; ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ, ಅಧಿಕಾರಿಗಳಿಂದ ಘೋಷಣೆ

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಆಕಾಶವು ಹಸಿರು ಬಣ್ಣಕ್ಕೆ ತಿರುಗುವ ಮೊದಲು, ಈ ಪ್ರದೇಶದಲ್ಲಿ ಗಂಟೆಗೆ 160 ಕಿಮೀ ವೇಗದಲ್ಲಿ ಗಾಳಿ ಬೀಸಿತು. ಆಕಾಶವೇ ಹಸಿರು ಬಣ್ಣಕ್ಕೆ ತಿರುಗುತ್ತಿರುವ ಈ ಘಟನೆ ಸಂಚಾರ ವಿಭಾಗದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಇದೀಗ ಜನರು ಈ ಘಟನೆಯ ವಿಭಿನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಈ ಘಟನೆಯಿಂದ ಕೆಲವರಲ್ಲಿ ಭಯ ಕೂಡ ಬಂದಿದೆ. ಆದರೆ, ಮುಂದಿನ ದಿನಗಳಲ್ಲಿಯೂ ಈ ಘಟನೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯಲಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

 

 

ಬಣ್ಣ ಬದಲಾಗಲು ಕಾರಣವೇನು?

ಹವಾಮಾನಶಾಸ್ತ್ರಜ್ಞರ ಪ್ರಕಾರ, ದಕ್ಷಿಣ ಡಕೋಟಾದಲ್ಲಿ ಆಕಾಶದ ಹಠಾತ್ ಬಣ್ಣ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಚಂಡಮಾರುತ, ಇದನ್ನು ಡೆರೆಕೊ ಎಂದು ಕರೆಯಲಾಗುತ್ತದೆ. ಹವಾಮಾನಶಾಸ್ತ್ರಜ್ಞ ಪೀಟರ್ ರೋಜರ್ಸ್ ನ್ಯೂಯಾರ್ಕ್ ಟೈಮ್ಸ್‌ಗೆ ಈ ಬಗ್ಗೆ ತಿಳಿಸಿದ್ದು, ವಾತಾವರಣದಲ್ಲಿ ಸೂರ್ಯನ ಬೆಳಕು ಹೇಗೆ ಹರಡುತ್ತದೆ ಎಂಬುದರ ಆಧಾರದ ಮೇಲೆ ಚಂಡಮಾರುತದ ಮೊದಲು ಅಥವಾ ಆ ಸಮಯದಲ್ಲಿ ಆಕಾಶವು ಅಸಾಮಾನ್ಯ ಬಣ್ಣವನ್ನು ತೆಗೆದುಕೊಳ್ಳಬಹುದು. ಹಗಲಿನಲ್ಲಿ ಆಕಾಶವು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಅಥವಾ ಚಂಡಮಾರುತದ ಸಮಯದಲ್ಲಿ ನೇರಳೆ ಬಣ್ಣಕ್ಕೆ ತಿರುಗುತ್ತದೆ. ವರದಿಯ ಪ್ರಕಾರ, ಡೆರೆಕೊದ ತೀವ್ರತೆಯು ಹವಾಮಾನ ಬದಲಾವಣೆಗೆ ಸಂಬಂಧಿಸಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ.

ಇದನ್ನೂ ಓದಿ: Watch: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ, ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News