Matheesha Pathirana In CSK Replacement of Adam Milne : ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಅನಿಷ್ಟವಾಗಿ ಕಾಡುತ್ತಿದೆ. ರವೀಂದ್ರ ಜಡೇಜಾ ನಾಯಕತ್ವದಲ್ಲಿ, ಸಿಎಸ್‌ಕೆ ತಂಡವು ಐಪಿಎಲ್ 2022 ರ ಸೀಸನ್ ನ 6 ಪಂದ್ಯಗಳಲ್ಲಿ 5 ರಲ್ಲಿ ಸೋಲು ಅನುಭವಿಸದೆ. ಇಂದು (ಏಪ್ರಿಲ್ 21) ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ತಂಡದ ಸ್ಟಾರ್ ಬೌಲರ್‌ಗಳಾದ ದೀಪಕ್ ಚಹಾರ್ ಮತ್ತು ಆಡಮ್ ಮಿಲ್ನೆ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೀಗ ಆಡಮ್ ಮಿಲ್ನೆ ಬದಲು ಸ್ಟಾರ್ ಆಟಗಾರನೊಬ್ಬನಿಗೆ ತಂಡದಲ್ಲಿ ಚಾನ್ಸ್ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಈ ಆಟಗಾರನಿಗೆ ಸಿಕ್ಕಿತು ಚಾನ್ಸ್


ಚೆನ್ನೈ ಸೂಪರ್ ಕಿಂಗ್ಸ್ ಗಾಯಾಳು ಆಡಮ್ ಮಿಲ್ನೆ ಬದಲಿಗೆ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ ನಿಂದ ದೂರ ಉಳಿದ ಶ್ರೀಲಂಕಾದ ಯುವ ವೇಗದ ಬೌಲರ್ ಮಥೀಶ ಪತಿರಾನಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಮಾರ್ಚ್ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೂಪರ್ ಕಿಂಗ್ಸ್ ನ ಮೊದಲ ಪಂದ್ಯದ ವೇಳೆ ನ್ಯೂಜಿಲೆಂಡ್ ವೇಗದ ಬೌಲರ್ ಆಡಮ್ ಮಿಲ್ನೆ ಕಾಲಿನ ಸ್ನಾಯು ನೋವಿಗೆ ಒಳಗಾಗಿದ್ದರು. ಗಾಯಗೊಂಡ ಮೂರು ವಾರಗಳ ನಂತರ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.


ಇದನ್ನೂ ಓದಿ : MI vs CSK, IPL 2022: ಸತತ ಸೋಲು ಕಂಡ ಚಾಂಪಿಯನ್ಸ್ ಕಾಳಗದಲ್ಲಿ ಗೆಲುವು ಯಾರಿಗೆ..?


19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಶಕ್ತಿ ಪ್ರದರ್ಶಿಸಿದ್ದ


19 ವರ್ಷದ ವೇಗದ ಬೌಲರ್ ಮಥೀಶ ಪತಿರಾನ 2020 ಮತ್ತು 2022 ರಲ್ಲಿ ಶ್ರೀಲಂಕಾದ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ 20 ಲಕ್ಷ ರೂ.ಗೆ ಪತಿರಾನವನ್ನು ಖರೀದಿಸಿದ್ದು, ಸಧ್ಯ ಅವರನ್ನು ಕಣಕ್ಕಿಳಿಸಿದೆ. ಶ್ರೀಲಂಕಾದ ಬೌಲರ್ ಪತಿರಾನಾ ಚಿಕ್ಕ ವಯಸ್ಸಿನಲ್ಲೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಪತಿರಾನ ಬಿರುಸಿನ ಬೌಲಿಂಗ್ ಮಾಡಿದರು. ಪತಿರಾನ ಚೆನ್ನೈ ಸೂಪರ್ ಕಿಂಗ್ಸ್ (CSK) ಎಷ್ಟು ಲಾಭವಾಗಲಿದೆ ಅಂಬುವುದನ್ನ ಕಾಡು ನೋಡಬೇಕಾಗಿದೆ. 


ನಾಲ್ಕು ಬಾರಿ ಟ್ರೋಫಿ ಗೆದ್ದಿದೆ ಸಿಎಸ್‌ಕೆ 


ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ, ಆದರೆ ಐಪಿಎಲ್ 2022 ರ ಮೊದಲು, ಧೋನಿ ಸಿಎಸ್‌ಕೆ ನಾಯಕತ್ವವನ್ನು ತೊರೆದರು, ನಂತರ ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಬೌಲಿಂಗ್ ತುಂಬಾ ದುರ್ಬಲವಾಗಿದೆ. ತಂಡದ ಬೌಲರ್ ಗಳು ಎದುರಾಳಿ ತಂಡದ ವಿರುದ್ಧ ರನ್ ಮಳೆ ಸುರಿಸುತ್ತಿದ್ದಾರೆ. ಇಂದು (ಏಪ್ರಿಲ್ 21) ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.


ಇದನ್ನೂ ಓದಿ : David Warner : ಎಲ್ಲರನ್ನೂ ಹಿಂದಿಕ್ಕಿ ದಾಖಲೆ ಬರೆದ ವಾರ್ನರ್ : ಪಟ್ಟಿಯಲ್ಲಿ ಸ್ಥಾನ ಪಡೆದ ರೋಹಿತ್! 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.