Ravindra Jadeja Out From Playing 11 : ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ಲೇ ಆಫ್‌ ಹೋಗಲು ಹೆಣಗಾಡುತ್ತಿದೆ. ಇದಕ್ಕಾಗಿ ಟೀಂ ನಲ್ಲಿ ಬದಲಾವಣೆ ಮಾಡಿದೆ. ಐಪಿಎಲ್ 2022 ರಲ್ಲಿ ಸಿಎಸ್ ಕೆ ತಂಡವು ಕೇವಲ ಮೂರು ಗೆಲುವುಗಳನ್ನು ಗಳಿಸಿದೆ. ಐಪಿಎಲ್ 2022 ರ 55 ನೇ ಪಂದ್ಯದಲ್ಲಿ, ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ, ಮಹೇಂದ್ರ ಸಿಂಗ್ ಧೋನಿ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರದಿಂದ ಆಟಗಾರನನ್ನು ತಂಡದಿಂದ ಹೊರಗಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಈ ಆಟಗಾರನನ್ನು ಹೊರಹಾಕಿದ ಧೋನಿ


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಂಡ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾಗೆ ಪ್ಲೇಯಿಂಗ್ XI ನಿಂದ ಕೈ ಬಿಟ್ಟಿದ್ದಾರೆ. ಜಡೇಜಾ ಬಹಳ ದಿನಗಳಿಂದ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದರು. ಹೀಗಾಗಿ ಜಡೇಜಾ ತಂಡಕ್ಕೆ ದೊಡ್ಡ ಹೊರೆಯಾಗಿ ಕಾಣುತ್ತಿದ್ದರು. ಅವರು ಐಪಿಎಲ್ 2022 ರ 10 ಪಂದ್ಯಗಳಲ್ಲಿ 116 ರನ್ ಮತ್ತು 5 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಶಿವಂ ದುಬೆಗೆ ಅವಕಾಶ ನೀಡಿದ್ದಾರೆ.


ಇದನ್ನೂ ಓದಿ : Punjab Kings : ಈ ವ್ಯಕ್ತಿಯ ಹಣೆಬರಹವನ್ನೆ ಬದಲಿಸಿದ IPL 2022 : ಚಿಟಿಕೆಯಲ್ಲಿ ₹2 ಕೋಟಿ ಗಳಿಸಿದ


ಐಪಿಎಲ್‌ ಮಧ್ಯದಲ್ಲಿ ನಾಯಕತ್ವ ತೊರೆದ


ಐಪಿಎಲ್‌ 2022 ರ ಮೊದಲು ರವೀಂದ್ರ ಜಡೇಜಾನನ್ನ ಚೆನ್ನೈ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಯಿತು, ಆದರೆ ಇವರ ನಾಯಕತ್ವದಲ್ಲಿ, ಚೆನ್ನೈ ತಂಡವು ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ. ಈ ಕಾರಣಕ್ಕಾಗಿ, ಜಡೇಜಾ ಐಪಿಎಲ್‌ನ ಮಧ್ಯದಲ್ಲಿ ನಾಯಕತ್ವವನ್ನು ತೊರೆದರು. ಜಡೇಜಾ ನಾಯಕತ್ವದಲ್ಲಿ ಸಿಎಸ್‌ಕೆ ಕೇವಲ 2 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು.


ಧೋನಿಯ ವಿಶೇಷ ಆಟಗಾರರಲ್ಲಿ ಒಬ್ಬರು


ಮಹೇಂದ್ರ ಸಿಂಗ್ ಧೋನಿ ಅವರ ವಿಶೇಷ ಆಟಗಾರರಲ್ಲಿ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಪರಿಗಣಿಸಲಾಗಿದೆ, ಆದರೆ ಜಡೇಜಾ ಅವರನ್ನು ಹೊರಹಾಕುವ ಮೂಲಕ ಧೋನಿ ಆಘಾತಕಾರಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಐಪಿಎಲ್ 2022 ರಲ್ಲಿ, ಜಡೇಜಾ ಬಾಲ್ ಮತ್ತು ಬ್ಯಾಟ್‌ನೊಂದಿಗೆ ವಿಫಲರಾದರು ಮತ್ತು ಅವರು ತುಂಬಾ ಕಳಪೆಯಾಗಿ ಫೀಲ್ಡಿಂಗ್ ಮಾಡಿದರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ, ಆದರೆ ಐಪಿಎಲ್ 2022 ರಲ್ಲಿ, ಸಿಎಸ್‌ಕೆ ತಂಡವು ಪ್ಲೇಆಫ್‌ಗೆ ಹೋಗಲು ಹೆಣಗಾಡುತ್ತಿದೆ.


ಇದನ್ನೂ ಓದಿ : RCB vs SRH : ಡಕ್ ಔಟ್ ಆದ ವಿರಾಟ್ ಕೊಹ್ಲಿ : ಕೋಪಗೊಂಡ ಫ್ಯಾನ್ಸ್ ಹೇಳಿದ್ದು ಹೀಗೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.