ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು. ಆದರೆ ಅವರು 71 ನೇ ಅಂತಾರಾಷ್ಟ್ರೀಯ ಶತಕವನ್ನು ಗಳಿಸುವ ನಿರೀಕ್ಷೆಯಲ್ಲಿದ್ದಾಗ, ಕೇಶವ್ ಮಹಾರಾಜ್ ಅವರ ಇನ್ನಿಂಗ್ಸ್‌ಗೆ ಕೊನೆ ಹಾಡಿದರು.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಔಟಾಗುವುದಕ್ಕೂ ಮುಂಚೆ  84 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.


ಕೊಹ್ಲಿ ಅರ್ಧಶತಕ ಪೂರೈಸಿದಾಗ ಸಾಮಾನ್ಯವಾಗಿ ತಮ್ಮ ಬ್ಯಾಟ್ ಅನ್ನು ಎತ್ತುತ್ತಾರೆ, ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಇರುವ ಸ್ಟ್ಯಾಂಡ್‌ಗೆ ಸನ್ನೆ ಮಾಡಿದರು. ಇದು ವಮಿಕಾಗೆ ಅರ್ಧಶತಕವನ್ನು ಅರ್ಪಿಸಲು ಕೊಹ್ಲಿಯ ಮಾರ್ಗವಾಗಿತ್ತು.


ಇದನ್ನೂ ಓದಿ: ಮೂರನೇ ಕೊರೊನಾ ಅಲೆಯ ಗರಿಷ್ಠ ಮಟ್ಟ ಯಾವಾಗ ತಲುಪುತ್ತೆ? ತಜ್ಞರು ಹೇಳುವುದೇನು?


ಇದಕ್ಕೂ ಮೊದಲು, ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾತಂಡವು ಕ್ವಿಂಟನ್ ಡಿ ಕಾಕ್ ಅವರ ಶತಕ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ಅರ್ಧಶತಕದ ನೆರವಿನಿಂದ  287 ರನ್ ಗಳಿಸಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.