India vs Australia 2nd ODI Match: ಭಾರತ ಕ್ರಿಕೆಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ODI ಸರಣಿಯನ್ನು ಆಡುತ್ತಿದೆ. ಸರಣಿಯ ಎರಡನೇ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ ಮುಂದುವರಿದಿದೆ. ಈ ಪಂದ್ಯದಲ್ಲಿ, ಭಾರತೀಯ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ. ಕೇವಲ 26 ಓವರ್‌ಗಳಲ್ಲಿ 117 ರನ್ ಗಳಿಸಿ ಆಲೌಟ್ ಆಗಿದೆ. ಇದಕ್ಕೂ ಮೊದಲು ಭಾರತ ತಂಡ ಮೊದಲ ಏಕದಿನ ಪಂದ್ಯವನ್ನು ಗೆದ್ದುಕೊಂಡಿತ್ತು. ಆದರೆ ವಿಶಾಖಪಟ್ಟಣದಲ್ಲಿ ನಡೆದ ಬ್ಯಾಟಿಂಗ್ ನೋಡಿ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs AUS : ಟೀಂಗೆ ಎಂಟ್ರಿಯಾಗುತ್ತಿದಂತೆ ಈ ಆಟಗಾರನನ್ನು ಕೈಬಿಟ್ಟ ಕ್ಯಾಪ್ಟನ್ ರೋಹಿತ್!


ವಿಶಾಖಪಟ್ಟಣಂನಲ್ಲಿ ನಡೆದ ಈ ಪಂದ್ಯದಲ್ಲಿ ನಿಯಮಿತ ನಾಯಕ ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಸರಣಿಯ ಮೊದಲ ಏಕದಿನ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾದ ಪ್ಲೇಯಿಂಗ್-11 ರಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿತ್ತು. ಆರಂಭಿಕ ಇಶಾನ್ ಕಿಶನ್ ಸ್ಥಾನವನ್ನು ರೋಹಿತ್ ಪಡೆದರು ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟ ನಂತರ ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲಾಯಿತು.


ಮೊದಲನೆಯದಾಗಿ, ಅದೃಷ್ಟ ರೋಹಿತ್ ಶರ್ಮಾಗೆ ಬೆಂಬಲ ನೀಡಲಿಲ್ಲ, ಅವರು ಟಾಸ್ ಸೋತರು. ಟಾಸ್ ಗೆದ್ದ ಬಳಿಕ ಆಸೀಸ್ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಭಾರತದ ಆರಂಭ ತುಂಬಾ ಕೆಟ್ಟದಾಗಿತ್ತು, ಅರ್ಧದಷ್ಟು ತಂಡವು ಕೇವಲ 49 ರನ್‌ ಒಳಗೆಯೇ ಪೆವಿಲಿಯನ್‌ಗೆ ಮರಳಿತು. ಇದಾದ ಬಳಿಕವೂ ವಿಕೆಟ್ ಪತನದ ಪ್ರಕ್ರಿಯೆ ಮುಂದುವರಿದಿದ್ದು, 117 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಆಲೌಟ್ ಆಯಿತು.


ಟೀಂ ಇಂಡಿಯಾದ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಹತ್ತರ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಯಿತು. ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದರು. 35 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 31 ರನ್ ಗಳಿಸಿದರು. ಇವರಲ್ಲದೆ ಅಕ್ಷರ್ ಪಟೇಲ್ ಔಟಾಗದೆ 29 ರನ್ ಗಳಿಸಿದರು. 29 ಎಸೆತಗಳನ್ನು ಎದುರಿಸಿದ ಅವರು ಒಂದು ಬೌಂಡರಿ, 2 ಸಿಕ್ಸರ್ ಬಾರಿಸಿದರು. ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿದರೆ, ರವೀಂದ್ರ ಜಡೇಜಾ 39 ​​ಎಸೆತಗಳಲ್ಲಿ 16 ರನ್ ಗಳಿಸಿದರು.


ಇದನ್ನೂ ಓದಿ: WPL 2023, RCB Vs GG: ಸೋಫಿ ಡಿವೈನ್ ಅಬ್ಬರ! ಆರ್​ಸಿಬಿಗೆ ಮತ್ತೊಂದು ಭರ್ಜರಿ ಜಯ


ಭಾರತದ ಬ್ಯಾಟಿಂಗ್ ವಿಫಲವಾಗಿತ್ತು. ಪಿಚ್ ನೋಡಿದ್ದರೂ ಸಹ ರೋಹಿತ್ ದೊಡ್ಡ ತಪ್ಪು ಮಾಡಿದ್ದಾರೆ. ಅವರು ತಂಡದಲ್ಲಿ ಯಾವುದೇ ಹೆಚ್ಚುವರಿ ವೇಗದ ಬೌಲರ್ ಅನ್ನು ಆಯ್ಕೆ ಮಾಡಲಿಲ್ಲ. ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯ ಪರ ಅತಿ ಹೆಚ್ಚು 5 ವಿಕೆಟ್ ಪಡೆದರು. ಈ ಪಿಚ್‌ನಿಂದ ವೇಗದ ಬೌಲರ್‌ಗಳಿಗೆ ಸಾಕಷ್ಟು ನೆರವು ಸಿಕ್ಕಿದೆ ಎಂದು ತಿಳಿದುಬಂದಿದೆ. ಬಲಗೈ ಮಧ್ಯಮ ವೇಗಿ ಸೀನ್ ಅಬಾಟ್ ಕೂಡ 3 ವಿಕೆಟ್ ಪಡೆದರು. ನಾಥನ್ ಎಲ್ಲಿಸ್ 2 ವಿಕೆಟ್ ಪಡೆದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.