ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿಗೆ ಮುಂಚಿತವಾಗಿ ರಿಷಬ್ ಪಂತ್ ಅನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ. ಆದರೆ ರಿಷಬ್ ಪಂತ್ ಜೊತೆಗೆ ತಂಡವನ್ನು ಮುನ್ನಡೆಸುವ ನಿರ್ಧಾರವನ್ನು ಮ್ಯಾನೇಜ್‌ಮೆಂಟ್ ಕಾಯ್ದಿರಿಸಿತ್ತು. ರಿಷಬ್ ಪಂತ್ ನನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಹೀಗಾಗಿ ಮೆಗಾ ಹರಾಜಿನಲ್ಲಿ ಈ ಎಡಗೈ ಆಟಗಾರನನ್ನು ಲಕ್ನೋ ಸೂಪರ್ ಜೈಂಟ್ಸ್  27 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ರಿಷಬ್ ಪಂತ್ ಹೊರಹೊಮ್ಮಿದ್ದಾರೆ. 


COMMERCIAL BREAK
SCROLL TO CONTINUE READING

ದೂರವಾಗುವುದಕ್ಕೆ ಕಾರಣ ? : 
'ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ'ಗೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ , 'ಫ್ರಾಂಚೈಸ್‌ನ ಕಾರ್ಯಾಚರಣೆಯ ಬಗ್ಗೆ ನಾವು ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಪಂತ್ ತಂಡದಿಂದ ಬೇರ್ಪಡಲು  ಇದೇ ಕಾರಣವಾಯಿತು ಎಂದಿದ್ದಾರೆ. ಇದು ಬಿಟ್ಟು ಹಣದ ವಿಚಾರ ಕಾರಣವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ರಿಷಬ್ ಗಾಗಲೀ, ನಮಗಾಗಲಿ  ಹಣ ಯಾವತ್ತೂ ಸಮಸ್ಯೆಯಾಗಿರಲಿಲ್ಲಎನ್ನುವುದನ್ನು ಒತ್ತಿ  ಹೇಳಿದ್ದಾರೆ. ಆದರೆ ನಮ್ಮ ಆಲೋಚನೆ ಹೊಂದಾಣಿಕೆಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗನ ಪ್ರೀತಿಯಲ್ಲಿ ಬಿದ್ದ ಮತ್ತೊಬ್ಬ ಖ್ಯಾತ ನಟಿ..!


ಹೊರ ಬಿತ್ತು ಸತ್ಯ : 
ಅಂತಿಮವಾಗಿ ರಿಷಬ್ ಪಂತ್ ತಂಡದಿಂದ ಹೊರ ಯುವ ನಿರ್ಧಾರ ತೆಗೆದುಕೊಂಡರು. ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಎಲ್ಲಾ  ಪ್ರಯತ್ನವನ್ನು ನಾವು ಮಾಡಿದ್ದೇವೆ. ಆದರೆ ಅವರು ಮುಂದೆ ಸಾಗುವ  ಮನಸ್ಸು ಮಾಡಿಯಾಗಿತ್ತು ಎಂದು ಹೇಳಿದ್ದಾರೆ. ಇನ್ನು ಮನಸ್ತಾಪದ ಬಗ್ಗೆ ಮಾತನಾಡಿದ ಜಿಂದಾಲ್, ಇದು ಫ್ರಾಂಚೈಸಿಯ ಕಾರ್ಯಾಚರಣೆಗೆ ಸಂಬಂಧಿಸಿದ್ದಾಗಿದೆ.  ನಾವು ಅವರಿಂದ ಕೆಲವು ನಿರೀಕ್ಷೆಗಳನ್ನು ಹೊಂದಿದ್ದೆವು, ಹಾಗೆಯೇ ಅವರಿಗೂ ನಮ್ಮಿಂದ ಕೆಲವು ನಿರೀಕ್ಷೆಗಳಿತ್ತು. ಎಲ್ಲಾ ನಿರೀಕ್ಷೆಗಳು ಹೊಂದಿಕೊಳ್ಳುವುದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.  


ಕಷ್ಟ ಎನ್ನುವುದು ಮೊದಲೇ ತಿಳಿದಿತ್ತು : 
ಇನ್ನು ರಿಷಬ್ ಪಂತ್ ಅವರನ್ನು ಹರಾಜಿನಲ್ಲಿ ವಾಪಸ್ ಪಡೆದುಕೊಳ್ಳುವುದು  ಅಸಾಧ್ಯ ಎಂಬುದು ತಂಡದ ಆಡಳಿತ ಮಂಡಳಿಗೆ ಮೊದಲೇ ತಿಳಿದಿತ್ತು. ಅವರನ್ನು ರಿಟೆನ್ ಮಾಡಿಕೊಳ್ಳದ ಕ್ಷಣದಿಂದಲೇ ಈ ಸತ್ಯ ತನಗೆ ಅರ್ಥವಾಗಿತ್ತು ಎಂದು ಜಿಂದಾಲ್ ಹೇಳಿದ್ದಾರೆ. ಅದಕ್ಕಾಗಿ ನಾವು 20.25 (ಕೋಟಿ) ಗೆ 'ರೈಟ್-ಟು-ಮ್ಯಾಚ್' ಬಳಸಿದ್ದೇವೆ. ಆದರೆ ನಂತರ ಬಜೆಟ್ ಏರುತ್ತಾ ಹೋಯಿತು.  ನಾವದನ್ನು 22-23 ರೂ.ಗೆ (ಕೋಟಿ) ಹೆಚ್ಚಿಸಲು ಸಿದ್ಧರಿದ್ದೆವು ಎಂದು ಹೇಳಿದ್ದಾರೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ