IPL 2024, Rishabh Pant: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ರಿಷಬ್ ಪಂತ್ ಆಡುವ ವಿಶ್ವಾಸವಿದೆ. ಆದರೆ ಸದ್ಯಕ್ಕೆ ವಿಕೆಟ್ ಕೀಪಿಂಗ್‌’ನಿಂದ ದೂರ ಉಳಿಯಬಹುದು ಎಂದು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 2022ರಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದಾಗಿ ಅವರು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಬೇಕಾಯಿತು. ಪಂತ್ ಇತ್ತೀಚಿನ ದಿನಗಳಲ್ಲಿ ಕಠಿಣ ತರಬೇತಿಯನ್ನೂ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.


ಇದನ್ನೂ ಓದಿ: ICC Ranking: ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಿ ವಿಶ್ವದಾಖಲೆ ಬರೆದ ರ್ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ


ರಿಕಿ ಪಾಂಟಿಂಗ್ ESPN ಕ್ರಿಕ್‌ ಇನ್‌ಫೋದಲ್ಲಿ ಮಾತನಾಡುತ್ತಾ, “ರಿಷಭ್ ಅವರು ಪಂದ್ಯವನ್ನು ಆಡಲು ಫಿಟ್ ಆಗುತ್ತಾರೆ ಎಂಬ ವಿಶ್ವಾಸವಿದೆ. ಆದರೆ ತಂಡದಲ್ಲಿ ಯಾವ ಸಾಮರ್ಥ್ಯದಲ್ಲಿರುತ್ತಾರೆ ಎಂಬುದು ನಮಗೆ ಇನ್ನೂ ಸಂಪೂರ್ಣವಾಗಿ ಖಚಿತವಾಗಿಲ್ಲ. ನೀವು ಅವರಿಗೆ ಸಂಬಂಧಿಸಿದ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು, ಅವರು ಸಕ್ರಿಯರಾಗಿದ್ದಾರೆ ಮತ್ತು ಚೆನ್ನಾಗಿ ಆಡುತ್ತಿದ್ದಾರೆ. ಐಪಿಎಲ್ ಆರಂಭವಾಗಲು ಕೇವಲ ಆರು ವಾರಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಈ ವರ್ಷ ಅವರನ್ನು ವಿಕೆಟ್ ಕೀಪಿಂಗ್ ಮಾಡಿಸುವುದು ಕೊಂಚ ಕಷ್ಟವಾಗಬಹುದು” ಎಂದು ಹೇಳಿದ್ದಾರೆ.


“ಅವರು ಆಡಬಹುದು, ಆಡದೆಯೂ ಇರಬಹುದು. ಆದರೆ 14 ಲೀಗ್ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಆಡಿದರೆ ಅದು ತಂಡಕ್ಕೆ ಬೋನಸ್‌ ಇದ್ದಂತೆ. ಪಂತ್ ವಿಕೆಟ್ ಹಿಂದೆ ತನ್ನ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಬ್ಯಾಟ್ಸ್‌ಮನ್ ಆಗಿ ಆಡಬಹುದು ಅಥವಾ ಮುಂಬರುವ ಐಪಿಎಲ್‌’ನಲ್ಲಿ ಅವರನ್ನು ಇಂಪ್ಯಾಕ್ಸ್ ಆಟಗಾರನಾಗಿ ಬಳಸಬಹುದು” ಎಂದಿದ್ದಾರೆ.


ಇದನ್ನೂ ಓದಿ: ಭಾರತ 2ನೇ ಟೆಸ್ಟ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಈ ಪ್ಲೇಯರ್ 3ನೇ ಟೆಸ್ಟ್’ಗೆ ಅಲಭ್ಯ!


ಮಾಧ್ಯಮ ವರದಿಗಳ ಪ್ರಕಾರ, ಮುಂಬರುವ ಐಪಿಎಲ್ ಸೀಸನ್ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ