Saurav Ganguly: ಪ್ರಮುಖ ಐಪಿಎಲ್ ತಂಡಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅದರ ಮುಖ್ಯ ಕೋಚ್ ಆದ ರಿಕಿ ಪಾಂಟಿಂಗ್ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿದೆ. ಇದರ ಹಿಂದೆ ತಂಡದ ಸಲಹೆಗಾರ ಸೌರವ್ ಗಂಗೂಲಿ ಅವರ ಕೈವಾಡವಿದೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. 


COMMERCIAL BREAK
SCROLL TO CONTINUE READING

ದೆಹಲಿ ಕ್ಯಾಪಿಟಲ್ಸ್ ತಂಡ ಕೋಚ್‌ ರಿಕಿ ಪಾಂಟಿಂಗ್ ಅವರನ್ನು ತರಬೇತುದಾರರಾಗಿ ವಜಾಗೊಳಿಸುವುದಾಗಿ ಸಾರ್ವಜನಿಕವಾಗಿ ಘೋಷಿಸುವ ಮೊದಲು ಸೌರವ್ ಗಂಗೂಲಿ ಅವರು ಪಶ್ಚಿಮ ಬಂಗಾಳದ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತ ಮಾಹಿತಿ ನೀಡಿದ್ದರು. ಸೌರವ್‌ ಗಂಗೂಲಿ ಆ ಹೇಳಿಕೆ ಕೊಡುತ್ತಿದ್ದ ಬೆನ್ನಲ್ಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಕಿ ಪಾಂಟಿಂಗ್ ಅವರನ್ನು ತಮ್ಮ ಕೋಚ್‌ ಸ್ಥಾನದಿಂದ ವಜಾ ಗೊಳಿಸಿದೆ.


ಸಂದರ್ಶನದಲ್ಲಿ ಸೌರನ್‌ ಗಂಗೂಲಿ ಕೊಟ್ಟಿರುವ ಹೇಳಿಕೆಗಳು, ಕೋಚ್  ರಿಕಿ ಪಾಂಟಿಂಗ್ ಅವರ ಪ್ರದರ್ಶನದ ಬಗ್ಗೆ ಕಾಮೆಂಟ್ಗಳು ಕೋಲಾಹಲವನ್ನು ಹುಟ್ಟುಹಾಕಿವೆ.  ರಿಕಿ ಪಾಂಟಿಂಗ್ ಸುಮಾರು 7 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಇದೇ ಅವಧಿಯಲ್ಲಿ ಸೌರವ್ ಗಂಗೂಲಿ ಸಹ ಸಲಹೆಗಾರರಾಗಿ ತಂಡದೊಂದಿಗೆ ಕಾರ್ಯ ನಿರ್ವಿಸಿದ್ದಾರೆ.


ಇದನ್ನೂ ಓದಿ: IND vs ZIM: ಜಿಂಬಾಬ್ವೆ ವಿರುದ್ಧ ಐದನೇ ಟಿ20 ಆಡಲಿರುವ ಅಂತಿಮ ಪ್ಲೇಯಿಂಗ್‌ XI


ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು ಮತ್ತು ನಂತರ ದೆಹಲಿ ಕ್ಯಾಪಿಟಲ್ಸ್‌ಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಅವರು ತಂಡವನ್ನು ಅಭಿವೃದ್ಧಿಪಡಿಸಲು ತರಬೇತುದಾರ ರಿಕಿ ಪಾಂಟಿಂಗ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.


"ಮುಂದಿನ ವರ್ಷದ ಐಪಿಎಲ್‌ಗೆ ನಾನು ಯೋಜನೆಗಳನ್ನು ರೂಪಿಸಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಮ್ಮೆಯಾದರೂ ಟ್ರೋಫಿ ಗೆಲ್ಲಬೇಕೆಂದು ನಾನು ಭಾವಿಸುತ್ತೇನೆ. ಮುಂದಿನ ವರ್ಷ ಮೆಗಾ ಹರಾಜು ಬರಲಿದೆ. ಹಾಗಾಗಿ, ಅದಕ್ಕಾಗಿ ನಾನು ಯೋಜನೆ ಪ್ರಾರಂಭಿಸಬೇಕಾಗಿದೆ. ರಿಕಿ ಪಾಂಟಿಂಗ್ ದೆಹಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗುವುದಿಲ್ಲ".


"ಕಳೆದ ಏಳು ವರ್ಷಗಳಲ್ಲಿ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಯಾವುದೇ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡಿಲ್ಲ. ನಾನು ಈ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಜೊತೆ ಮಾತನಾಡಬೇಕಾಗಿದೆ. ನಾನು ಭಾರತೀಯ ಕೋಚ್‌ಗಳನ್ನು ನೇಮಿಸುವಂತೆ ಕೇಳಲಿದ್ದೇನೆ. ನಾನು ನಾನು ಮುಖ್ಯ ತರಬೇತುದಾರನಾಗಿರಬಹುದು?" ಎಂದು ಗಂಗೂಲಿ ಆ ಸಂದರ್ಶನದಲ್ಲಿ ಹೇಳಿದರು.


ಇದನ್ನೂ ಓದಿ: ವಿಶ್ವಕಪ್‌ ಗೆಲುವಿನ ಸಂಭ್ರಮದಲ್ಲಿ ರೋಹಿತ್‌ ಧರಿಸಿದ್ದ ಕೈ ಗಡಿಯಾರದ ಬೆಲೆ ಎಷ್ಟು ಗೊತ್ತಾ..?


ಕಳೆದ ಏಳು ವರ್ಷಗಳಲ್ಲಿ ಡೆಲ್ಲಿ ತಂಡವನ್ನು ರಿಕಿ ಪಾಂಟಿಂಗ್ ಯಾವುದೇ ರೀತಿಯಲ್ಲಿ ಸುಧಾರಿಸಿಲ್ಲ ಎಂಬ ಗಂಗೂಲಿ ಹೇಳಿಕೆ ಐಪಿಎಲ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ರಿಕಿ ಪಾಂಟಿಂಗ್ ಅವರು ಐಪಿಎಲ್ 2020ರ ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೊಂಡ್ಯೊಯ್ದಿದ್ದರು. ಆದರೆ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಈ ಎರಡು ವರ್ಷಗಳಲ್ಲಿ ಪಾಂಟಿಂಗ್ ನಾಯಕತ್ವದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿತು.


ಹೀಗಿದ್ದರೂ ಗಂಗೂಲಿ ಪಾಂಟಿಂಗ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಹಾಗಾದರೆ, ರಿಕಿ ಪಾಂಟಿಂಗ್ ಮತ್ತು ಗಂಗೂಲಿ ನಡುವೆ ಬಿರುಕು ಮೂಡಿದೆಯೇ? ಎಂಬ ಅನುಮಾನವೂ ಇದೆ. ಗಂಗೂಲಿಯವರ ಆಘಾತಕಾರಿ ಸಂದರ್ಶನವು ವೈರಲ್ ಆದ ಕೆಲವೇ ಗಂಟೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಕಿ ಪಾಂಟಿಂಗ್ ಅವರಿಗೆ ಗುಡ್‌ ಬೈ ಹೇಳಿದೆ. ಈ ವರ್ಷ ಅವರ ಒಪ್ಪಂದವೂ ಮುಕ್ತಾಯವಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ಗಂಗೂಲಿ ನೇಮಕವಾಗುತ್ತಾರೆಯೇ? ಎಂಬ ಪ್ರಶ್ನೆ ಎದ್ದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ