ಕ್ರಿಕೆಟ್ ಅಂಪೈರಿಂಗ್ನಲ್ಲಿ ಮಹಾಪ್ರಮಾದ... ಒಂದು ಓವರ್‌ನಲ್ಲಿ 6ರ ಬದಲಿಗೆ 5 ಎಸೆತವಷ್ಟೇ ಬೌಲಿಂಗ್! ಈ ದಿಗ್ಗಜ ಬೌಲರ್ಗೆ ಅಂಪೈರ್ನಿಂದಲೇ ಅನ್ಯಾಯ?
Cricket Unique Records: ಕ್ರಿಕೆಟ್ ನಿಯಮಗಳ ಪ್ರಕಾರ, ಒಂದು ಓವರ್‌ನಲ್ಲಿ 6 ಕಾನೂನುಬದ್ಧ ಚೆಂಡುಗಳನ್ನು ಎಸೆಯಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ಎಸೆತಗಳ ಓವರ್‌ಗಳನ್ನು ಬೌಲ್ ಮಾಡಿದ 3 ಬೌಲರ್‌ಗಳು ಇದ್ದಾರೆ. ಈ ದಾಖಲೆಯು ಬಹಳ ವಿಶಿಷ್ಟವಾಗಿದ್ದು, 5 ಎಸೆತಗಳ ಓವರ್ ಬೌಲ್ ಮಾಡಿದ ಆ 3 ಬೌಲರ್‌ಗಳನ್ನು ನೋಡೋಣ.
Cricket Unique Records: ಕ್ರಿಕೆಟ್ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಕೆಲವು ದಾಖಲೆಗಳು ತುಂಬಾ ಅಪರೂಪವಾಗಿದ್ದು ಅವುಗಳನ್ನು ಸುಲಭವಾಗಿ ನಂಬುವುದೂ ಸಹ ಕಷ್ಟವೇ. ಇನ್ನು ಕ್ರಿಕೆಟ್ ನಿಯಮಗಳ ಪ್ರಕಾರ, ಒಂದು ಓವರ್‌ನಲ್ಲಿ 6 ಕಾನೂನುಬದ್ಧ ಚೆಂಡುಗಳನ್ನು ಎಸೆಯಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ಎಸೆತಗಳ ಓವರ್‌ಗಳನ್ನು ಬೌಲ್ ಮಾಡಿದ 3 ಬೌಲರ್‌ಗಳು ಇದ್ದಾರೆ. ಈ ದಾಖಲೆಯು ಬಹಳ ವಿಶಿಷ್ಟವಾಗಿದ್ದು, 5 ಎಸೆತಗಳ ಓವರ್ ಬೌಲ್ ಮಾಡಿದ ಆ 3 ಬೌಲರ್‌ಗಳನ್ನು ನೋಡೋಣ.
ಇದನ್ನೂ ಓದಿ: ಕೂದಲಿನ ಎಲ್ಲಾ ಸಮಸ್ಯೆಗೆ ರಾಮಬಾಣ ʼಈʼ ಎಲೆ..! ಹೀಗೆ ಬಳಸಿದ್ರೆ ಮೊನಕಾಲುದ್ದ.. ದಷ್ಟಪುಷ್ಟ ಕೇಶರಾಶಿ ನಿಮ್ಮದಾಗುತ್ತೆ!!
ಲಸಿತ್ ಮಾಲಿಂಗ:
ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಭಾರತ ವಿರುದ್ಧದ ಏಕದಿನ ಪಂದ್ಯದ ವೇಳೆ 1 ಓವರ್‌ನಲ್ಲಿ 6 ಅಲ್ಲ 5 ಎಸೆತಗಳನ್ನು ಎಸೆದಿದ್ದರು. 2012ರಲ್ಲಿ ಭಾರತ ವಿರುದ್ಧ ನಡೆದ ತ್ರಿಕೋನ ಸರಣಿಯ ಏಕದಿನ ಪಂದ್ಯದಲ್ಲಿ ಲಸಿತ್ ಮಾಲಿಂಗ ಈ ರೀತಿ ಬೌಲಿಂಗ್ ಮಾಡಿದ್ದರು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಭಾರತ ಕೇವಲ ಒಂದು ಎಸೆತದಿಂದ ಗೆಲ್ಲಲು ವಿಫಲವಾಗಿತ್ತು.
ನವೀನ್ ಉಲ್ ಹಕ್:
ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ 2022 ಪಂದ್ಯದ ವೇಳೆ 1 ಓವರ್‌ನಲ್ಲಿ 6 ಅಲ್ಲ 5 ಎಸೆತಗಳನ್ನು ಬೌಲ್ ಮಾಡಿದ್ದರು. ಆನ್-ಫೀಲ್ಡ್ ಅಂಪೈರ್ ತಪ್ಪು ಮಾಡಿದ್ದ ಕಾರಣ ನವೀನ್ ಉಲ್ ಹಕ್ ಅವರ ಓವರ್‌ನಲ್ಲಿ 1 ಬಾಲ್ ಕಡಿಮೆಯಾಗಿತ್ತು.
ಮುಸ್ತಫಿಜುರ್ ರೆಹಮಾನ್:
2021ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ವೇಳೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ 1 ಓವರ್‌ನಲ್ಲಿ 6 ಅಲ್ಲ 5 ಎಸೆತಗಳನ್ನು ಬೌಲ್ ಮಾಡಿದ್ದರು. ಆನ್-ಫೀಲ್ಡ್ ಅಂಪೈರ್‌ನ ತಪ್ಪಿನಿಂದ ಈ ದೊಡ್ಡ ಪ್ರಮಾದ ಕಂಡುಬಂದಿತ್ತು. ಬಾಂಗ್ಲಾದೇಶದ ಆನ್-ಫೀಲ್ಡ್ ಅಂಪೈರ್ ಗಾಜಿ ಸೊಹೈಲ್ ಮುಸ್ತಫಿಜುರ್ ರೆಹಮಾನ್ ಅವರ ಓವರ್‌ನಲ್ಲಿ 1 ಎಸೆತವನ್ನು ಕಡಿಮೆ ಎಣಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews