MS Dhoni-Matheesha Pathirana Viral Video: ಕಳೆದ ದಿನ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಏಳನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ, ಗುಜರಾತ್ ಟೈಟಾನ್ಸ್ ವಿರುದ್ಧ 63 ರನ್‌’ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಚೆನ್ನೈ ಪಡೆ, ಪಾಯಿಂಟ್ ಟೇಬಲ್’ನಲ್ಲಿ ಅಗ್ರಸ್ಥಾನ ಪಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮದ್ವೆಗೂ ಮುನ್ನ 34 ಮಕ್ಕಳಿಗೆ ತಾಯಿಯಾದ ಈಕೆ ಇಂದು ಶ್ರೀಮಂತ IPL ತಂಡವೊಂದರ ಒಡತಿ! 49 ವರ್ಷ ವಯಸ್ಸಿನ ಆ ಬ್ಯೂಟಿ ಯಾರು ಗೊತ್ತಾ?


ಅಂದಹಾಗೆ ಈ ಪಂದ್ಯದಲ್ಲಿ ಬೌಲರ್’ಗಳು ಕೂಡ ಪ್ರಾಬಲ್ಯ ಮೆರೆದಿದ್ದು, ಅದರಲ್ಲಿ ಓರ್ವ ಆಟಗಾರ ಮಥೀಶ ಪತಿರಾಣ. ಇದೀಗ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಮಥೀಶ, ಎಂಎಸ್ ಧೋನಿ ಪಾದಗಳನ್ನು ಸ್ಪರ್ಶಿಸುತ್ತಿರುವಂತೆ ಕಂಡಿದೆ. ಅಷ್ಟಕ್ಕೂ ಈ ವಿಡಿಯೋದ ಅಸಲಿಯತ್ತೇನೆ ಎಂಬುದು ತಿಳಿಯೋಣ.


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿದರೆ, ಶ್ರೀಲಂಕಾದ ವೇಗಿ ಮಥೀಶ ಪತಿರಾಣ ಬೌಲಿಂಗ್ ಸ್ಪೆಲ್ ಪ್ರಾರಂಭಿಸುವ ಮೊದಲು ಎಂಎಸ್ ಧೋನಿ ಪಾದ ಸ್ಪರ್ಶಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಬೌಲಿಂಗ್ ಮಾರ್ಕರ್ ಅನ್ನು ಎತ್ತಿಕೊಳ್ಳುತ್ತಿರುವುದು ಕಾಣಿಸುತ್ತಿದೆ.


ಇದನ್ನೂ ಓದಿ: 6 ನಟಿಯರ ಜೊತೆ ಡೇಟ್ ಮಾಡಿದ್ರೂ ಅನುಷ್ಕಾಳನ್ನೇ ಮದ್ವೆಯಾಗಿದ್ದು ಇದೇ ಕಾರಣಕ್ಕೆ…! ವಿರಾಟ್ ಶಾಕಿಂಗ್ ಹೇಳಿಕೆ


ಕೆಲವರು ಈ ವಿಡಿಯೋ ಕಂಡು, “ಬೌಲಿಂಗ್ ಆರಂಭಿಸುವ ಮೊದಲು ಧೋನಿ ಆಶೀರ್ವಾದ ಪಡೆಯುತ್ತಿರುವ ಮಥೀಶಾ ಪತಿರಾಣ” ಎಂದು ಹೇಳುತ್ತಿದ್ದಾರೆ.


ವಿಡಿಯೋ ನೋಡಿ:


 


 

 

 

 



 

 

 

 

 

 

 

 

 

 

 

A post shared by div_yumm (@divtweets)


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ