IPL 2024ರಲ್ಲಿ ಇದುವರೆಗೆ ಧೋನಿ ಯಾಕೆ ಬ್ಯಾಟಿಂಗ್ ಮಾಡಿಲ್ಲ…? ಅಸಲಿ ಕಾರಣ ತಿಳಿಸಿದ ಕೋಚ್ ಹಸ್ಸಿ

Coach Mike Hussey on MS Dhoni Batting: ಕಳೆದ ದಿನ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 20 ಓವರ್‌’ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 206 ರನ್‌ ಗಳಿಸಿತು. ಇದರಲ್ಲಿ ಶಿವಂ ದುಬೆ ಅಬ್ಬರದ ಅರ್ಧಶತಕ ಮತ್ತು ರಚಿನ್ ರವೀಂದ್ರ-ಋತುರಾಜ್ ಗಾಯಕ್ವಾಡ್ ಅವರ 46 ರನ್‌ಗಳ ಇನ್ನಿಂಗ್ಸ್ ಕೂಡ ಸೇರಿದೆ.

Written by - Bhavishya Shetty | Last Updated : Mar 27, 2024, 05:53 PM IST
    • ಐಪಿಎಲ್ 2024ರಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಮಾಡಿಲ್ಲ
    • ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ
    • ಆರ್ ಸಿ ಬಿ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿಗಿಂತ ರವೀಂದ್ರ ಜಡೇಜಾಗೆ ಆದ್ಯತೆ
IPL 2024ರಲ್ಲಿ ಇದುವರೆಗೆ ಧೋನಿ ಯಾಕೆ ಬ್ಯಾಟಿಂಗ್ ಮಾಡಿಲ್ಲ…? ಅಸಲಿ ಕಾರಣ ತಿಳಿಸಿದ ಕೋಚ್ ಹಸ್ಸಿ  title=
MS Dhoni

Coach Mike Hussey on MS Dhoni Batting: ಐಪಿಎಲ್ 2024ರಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಮಾಡಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಬಹಿರಂಗಗೊಳಿಸಿದ್ದಾರೆ. ಅಂದಹಾಗೆ ಕಳೆದ ದಿನ ನಡೆದ ಐಪಿಎಲ್ 2024ರ ಏಳನೇ ಪಂದ್ಯದಲ್ಲಿ, ಎಂಎಸ್ ಧೋನಿಗಿಂತ CSK ಸಮೀರ್ ರಿಜ್ವಿಗೆ ಆದ್ಯತೆ ನೀಡಿದ್ದು ಕಂಡುಬಂದಿದೆ.

ಇದನ್ನೂ ಓದಿ: ಸೋನಿಯಾ, ರಾಹುಲ್ ಬೇಲ್ ಮೇಲೆ ಹೊರಗಿದ್ದಾರೆ ನೆನಪಿಡಿ: ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ

ಕಳೆದ ದಿನ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 20 ಓವರ್‌’ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 206 ರನ್‌ ಗಳಿಸಿತು. ಇದರಲ್ಲಿ ಶಿವಂ ದುಬೆ ಅಬ್ಬರದ ಅರ್ಧಶತಕ ಮತ್ತು ರಚಿನ್ ರವೀಂದ್ರ-ಋತುರಾಜ್ ಗಾಯಕ್ವಾಡ್ ಅವರ 46 ರನ್‌ಗಳ ಇನ್ನಿಂಗ್ಸ್ ಕೂಡ ಸೇರಿದೆ. ಈ ಸಂದರ್ಭದಲ್ಲಿ ಎಂಎಸ್ ಧೋನಿ ಬ್ಯಾಟಿಂಗ್‌’ಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು, ಆದರೆ ಆ ಆಸೆ ಈಡೇರಲಿಲ್ಲ.

ಅಂದಹಾಗೆ ಆರ್ ಸಿ ಬಿ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಎಂಎಸ್ ಧೋನಿಗಿಂತ ರವೀಂದ್ರ ಜಡೇಜಾಗೆ ಆದ್ಯತೆ ನೀಡಲಾಗಿತ್ತು. ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಬ್ಯಾಟ್ಸ್‌ಮನ್‌ಗಳಿಗೆ ಆಟವನ್ನು ಮುಂದಕ್ಕೆ ಕೊಂಡೊಯ್ಯಲು ಸೂಚನೆ ನೀಡಿದ್ದಾರೆ ಎಂದು ಮೈಕ್ ಹಸ್ಸಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ತಂಡಗಳು ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬಲಪಡಿಸುವ ಅವಕಾಶವನ್ನು ಪಡೆದುಕೊಂಡಿದ್ದು, ಈ ಕಾರಣದಿಂದಾಗಿ ಎಂಎಸ್ ಧೋನಿ ತಡವಾಗಿ ಬರಲಿದ್ದಾರೆ ಎಂದು ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

“ಆಟವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪರಿಚಯದೊಂದಿಗೆ, ನಾವು ಹೆಚ್ಚುವರಿ ಬ್ಯಾಟ್ಸ್‌ಮನ್ ಮತ್ತು ಬೌಲರ್ ಅನ್ನು ಪಡೆಯುತ್ತೇವೆ. ಹೀಗಾಗಿ ನಮ್ಮ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ. ನಮ್ಮಲ್ಲಿ ಎಂಎಸ್ ಧೋನಿ 8ನೇ ಸ್ಥಾನದಲ್ಲಿದ್ದಾರೆ. ಅದು ಕೂಡ ಅದ್ಭುತ” ಎಂದು ಹೇಳಿದ್ದಾರೆ.

“ಅಗ್ರ ಕ್ರಮಾಂಕದ ಆಟಗಾರರು ಎರಡು ದಿಕ್ಕಿನಲ್ಲಿ ಯೋಚಿಸುತ್ತಿದ್ದರೆ, ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅವರಿಗೆ ಕೋಚ್ ಮತ್ತು ನಾಯಕನ ಬೆಂಬಲವೂ ಸಿಗಲಿದೆ. ಆಟಗಾರರು ತಾವಾಗಿಯೇ ಆಟವನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ನಮ್ಮ ಇಚ್ಛೆ. ಒಂದುವೇಳೆ ಸಾಕಾರವಾದಲ್ಲಿ ತಂಡಕ್ಕೆ ಅದು ಉತ್ತಮ” ಎಂದಿದ್ದಾರೆ.

ಇದನ್ನೂ ಓದಿ: 6 ನಟಿಯರ ಜೊತೆ ಡೇಟ್ ಮಾಡಿದ್ರೂ ಅನುಷ್ಕಾಳನ್ನೇ ಮದ್ವೆಯಾಗಿದ್ದು ಇದೇ ಕಾರಣಕ್ಕೆ…! ವಿರಾಟ್ ಶಾಕಿಂಗ್ ಹೇಳಿಕೆ

ಇನ್ನು CSK ತನ್ನ ಮುಂದಿನ ಪಂದ್ಯವನ್ನು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮಾರ್ಚ್ 31 ರಂದು ವಿಶಾಖಪಟ್ಟಣದಲ್ಲಿ ಆಡಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News