ಆಸ್ಟ್ರೇಲಿಯಾ ಭಾರತ ನಡುವಿನ ಟಿ20 ಸರಣಿಯಲ್ಲಿ 2-1 ಅಂತರದಿಂದ ಟೀಂ ಇಂಡಿಯಾ ಗೆದ್ದಾಗಿದೆ. ಇಂದಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದ ಬಳಿಕ ಟ್ರೋಫಿಯನ್ನು ನಾಯಕ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಕೈಗೆ ನೀಡಿದ್ದರು. ಈ ಸಂತೋಷದಲ್ಲಿದ್ದ ದಿನೇಶ್ ರನ್ನು ಹುಡುಗಿಯೊಬ್ಬಳು ಟಚ್ ಮಾಡಿದಕ್ಕೆ ಕೆಂಡಾಮಂಡಲವಾಗಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 World Cup : ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆ!


ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ಬಳಿಕ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸುತ್ತಿದ್ದ ಟೀಮ್ ಇಂಡಿಯಾ ಆಟಗಾರರ ಬಳಿ ಯುವತಿಯೊಬ್ಬಳು ಕಾಣಿಸಿಕೊಂಡಿದ್ದಾಳೆ. ಇನ್ನು ವಿಜಯೋತ್ಸವದ ಬಳಿಕ ಮೈದಾನದಿಂದ ಡ್ರೆಸ್ಸಿಂಗ್​ ರೂಮ್​ನತ್ತ ತೆರಳುತ್ತಿದ್ದ ದಿನೇಶ್ ಕಾರ್ತಿಕ್ ರನ್ನು ಆಕೆ ಜಸ್ಟ್ ಟಚ್ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಕಾರ್ತಿಕ್ ಯುವತಿಯನ್ನು ದಿಟ್ಟಿಸಿ ನೋಡಿದ್ದಾರೆ. ಅಷ್ಟೇ ಅಲ್ಲದೆ, ಮೈದಾನದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. 


ದೇವರನಾಡಲ್ಲಿ ಟೀಂ ಇಂಡಿಯಾ ಶಕ್ತಿ ಪ್ರದರ್ಶನ: ಹೇಗಿದೆ ಇಲ್ಲಿನ ಪಿಚ್! ಯಾವ ತಂಡಕ್ಕೆ ನೀಡಲಿದೆ ಬಲ?


ದಿನೇಶ್ ಕಾರ್ತಿಕ್ ಕೋಪಗೊಳ್ಳುತ್ತಿದ್ದಂತೆ ಮಧ್ಯೆ ಬಂದ ರವಿಚಂದ್ರನ್ ಅಶ್ವಿನ್ ಅವರನ್ನು ಸಮಾಧಾನಪಡಿಸಿದ್ದಾರೆ. ಈ ತೆರೆಮರೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.