ನವದೆಹಲಿ: ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ಪಾಕಿಸ್ತಾನದ ಅನುಭವಿ ಮತ್ತು ಮಾಜಿ ನಾಯಕ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಪಾಕಿಸ್ತಾನ ಪರ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಶಾಹಿದ್ ಅಫ್ರಿದಿ, ‘ಪ್ರಸ್ತುತ ಪಾಕಿಸ್ತಾನ ತಂಡದಲ್ಲಿ ಹಾರ್ದಿಕ್ ಪಾಂಡ್ಯರಂತಹ ಫಿನಿಶರ್ ಕೊರತೆಯಿದೆ’ ಎಂದು ಹೇಳಿದ್ದಾರೆ. ಹಾರ್ಟ್ ಹಿಟ್ಟರ್ ಖ್ಯಾತಿಯ ಪಾಂಡ್ಯ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಪಾಕಿಸ್ತಾನದ ಪ್ರದರ್ಶನದ ಬಗ್ಗೆ ಕಳವಳ
ಏಷ್ಯಾಕಪ್-2022ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದರೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿತು. ಪಾಕಿಸ್ತಾನ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ-20 ಸರಣಿಯನ್ನು ತನ್ನ ಆತಿಥ್ಯದಲ್ಲಿ ಆಡುತ್ತಿದೆ. 4 ಪಂದ್ಯಗಳ ಬಳಿಕ ಸದ್ಯ ಸರಣಿ 2-2ರಲ್ಲಿ ಸಮಬಲಗೊಂಡಿದೆ. ಪಾಕಿಸ್ತಾನದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆಯಿದೆ ಎಂದು ಶಾಹಿದ್ ಆಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Team India: T20 ವಿಶ್ವಕಪ್‌ಗೂ ಮುನ್ನ ಭಾರತೀಯ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..!
‘ನಮ್ಮಲ್ಲಿ ಪಾಂಡ್ಯ ಇಲ್ಲ’
‘ನಮ್ಮಲ್ಲಿ ಹಾರ್ದಿಕ್ ಪಾಂಡ್ಯ ರೀತಿಯ ಫಿನಿಶರ್ ಇಲ್ಲ. ಆಸಿಫ್ ಅಲಿ ಮತ್ತು ಖುಷ್ದಿಲ್ ಪಾಂಡ್ಯರಂತೆ ಆಡಬಹುದೆಂದು ನಾವು ಭಾವಿಸಿದ್ದೆವು, ಆದರೆ ಅದು ಆಗಲಿಲ್ಲ. ನವಾಜ್ ಕೂಡ ಅಷ್ಟು ಸಮರ್ಥನಾಗಿಲ್ಲ ಮತ್ತು ಶಾದಾಬ್ ಖಾನ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಈ 4 ಆಟಗಾರರಲ್ಲಿ ಕನಿಷ್ಠ ಇಬ್ಬರ ಪ್ರದರ್ಶನದಲ್ಲಿ ಸ್ಥಿರತೆ ಇರಬೇಕು. ಶಾದಾಬ್ ಚೆಂಡಿನೊಂದಿಗೆ ಉತ್ತಮ ಆಟ ತೋರಿದ ದಿನ ತಂಡವೂ ಗೆಲ್ಲುತ್ತದೆ’ ಅಂತಾ ಆಫ್ರಿದಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಹಾರ್ದಿಕ್ ಮಿಂಚು
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದರು. ಮೊಹಾಲಿಯಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಅವರು ಅಜೇಯ 71 ರನ್ ಗಳಿಸಿದ್ದರು. 2ನೇ ಟಿ-20ಯಲ್ಲಿ ಅವರ ಬ್ಯಾಟ್‌ನಿಂದ ಕೇವಲ 9 ರನ್‌ಗಳು ಬಂದವು, ಆದರೆ 3ನೇ ಟಿ-20 ಪಂದ್ಯದಲ್ಲಿ ಅವರು 25 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಹೈದರಾಬಾದ್‌ನಲ್ಲಿ ನಡೆದ ಈ ಪಂದ್ಯದ ಗೆಲುವಿನೊಂದಿಗೆ ಭಾರತ ಟಿ-20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತು.
ಇದನ್ನೂ ಓದಿ: IND vs SA: ಹಿಂದೆಂದೂ ಮಾಡಿರದ ಸಾಧನೆ ಮಾಡುತ್ತಾ ಟೀಂ ಇಂಡಿಯಾ! ಏನದು ಗೊತ್ತಾ ಶ್ರೇಷ್ಠ ದಾಖಲೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.