ಕಾಮನ್‍ ವೆಲ್ತ್‍ ಗೇಮ್ಸ್‍ನಲ್ಲಿ ಭಾರತದ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಕ್ವಾಷ್‌ನಲ್ಲಿ, ಭಾರತದ ಸ್ಟಾರ್ ಆಟಗಾರರಾದ ಸೌರವ್ ಘೋಸಾಲ್ ಮತ್ತು ದೀಪಿಕಾ ಪಲ್ಲಿಕಲ್ ಕಂಚಿನ ಪದಕ ಗೆದ್ದಿದ್ದಾರೆ. ಈ ಪಂದ್ಯದಲ್ಲಿ ಅವರು ಆಸ್ಟ್ರೇಲಿಯನ್ ಜೋಡಿಯನ್ನು ಬಿರುಸಿನ ರೀತಿಯಲ್ಲಿ ಸೋಲಿಸಿದರು. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್ ಪದಕ ಗೆದ್ದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಂಟ್!‌


ಸ್ಕ್ವಾಷ್‌ನಲ್ಲಿ ಪದಕ ಗೆದ್ದ ದೀಪಿಕಾ-ಘೋಸಲ್‍


ಸ್ಕ್ವಾಷ್‌ನ ಮಿಶ್ರ ಡಬಲ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಸೌರವ್ ಘೋಸಲ್ ಜೋಡಿ ಕಂಚಿನ ಪದಕ ಗೆದ್ದುಕೊಂಡಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಲೊಬ್ಬನ್ ಡೊನ್ನಾ ಮತ್ತು ಪೀಲೆ ಕ್ಯಾಮರೂನ್ ಅವರನ್ನು 2–0 ಅಂತರದಿಂದ ಸೋಲಿಸಿದರು. ದೀಪಿಕಾ ಮತ್ತು ಸೌರವ್ ಅವರಿಗೆ ಸಾಕಷ್ಟು ಅನುಭವವಿದೆ. ಇದರ ಲಾಭವನ್ನು ಅವರು ಪಂದ್ಯದಲ್ಲಿ ಪಡೆದರು. ಅವರು ಆಸ್ಟ್ರೇಲಿಯನ್ ಜೋಡಿಯನ್ನು 11-8, 11-4 ರಿಂದ ಸೋಲಿಸಿದರು. ಇನ್ನು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇಬ್ಬರೂ ಬೆಳ್ಳಿ ಪದಕ ಗೆದ್ದಿದ್ದಾರೆ.


ದಿನೇಶ್ ಕಾರ್ತಿಕ್ 2015 ರಲ್ಲಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು. ಇಬ್ಬರೂ ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಇದೀಗ ಪತ್ನಿ ದೀಪಿಕಾ ಪದಕ ಗೆದ್ದ ತಕ್ಷಣ ಕಾರ್ತಿಕ್ ಟ್ವಿಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ, 'ನಿಮ್ಮ ಶ್ರಮಕ್ಕೆ ಫಲ ಸಿಕ್ಕಿದೆ. ನಿಮ್ಮಿಬ್ಬರ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಿದೆ” ಎಂದು ಹೇಳಿಕೊಂಡಿದ್ದಾರೆ.


ರಾಷ್ಟ್ರಪತಿಗಳಿಂದ ಅಭಿನಂದನೆ:


ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಸೌರವ್ ಘೋಸಲ್ ಮತ್ತು ದೀಪಿಕಾ ಪಳ್ಳಿಕಲ್ ಅವರನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ಅಭಿನಂದಿಸಿದ್ದಾರೆ. ಅಧ್ಯಕ್ಷೆ ದ್ರೌಪದಿ ಮುರ್ಮು ಟ್ವೀಟ್ ಮಾಡಿ, "ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಕ್ವಾಷ್ ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಷಾಲ್ ಅವರಿಗೆ ಅಭಿನಂದನೆಗಳು. ನಿಮ್ಮ ಪೋಡಿಯಂ ಫಿನಿಶ್ ಭಾರತದಲ್ಲಿನ ಸ್ಕ್ವ್ಯಾಷ್ ಪ್ರಿಯರಿಗೆ ಸ್ಫೂರ್ತಿಯಾಗಿದೆ. ಇಂತಹ ವಿಜಯಗಳು ನಮ್ಮ ದೇಶದಲ್ಲಿ ಕ್ರೀಡೆಯ ಜನಪ್ರಿಯತೆಯನ್ನು ಹೆಚ್ಚಿಸುತ್ತವೆ” ಹೇಳಿದ್ದಾರೆ.


ಇದನ್ನೂ ಓದಿ: ಎಸ್ ಪಿ ಜಿಲ್ಲಾಧ್ಯಕ್ಷರ ಕಾರನ್ನು 500 ಮೀ ದೂರಕ್ಕೆ ಎಳೆದೊಯ್ದ ಟ್ರಕ್‍: ಭಯಾನಕ ವಿಡಿಯೋ ವೈರಲ್


ಸ್ಕ್ವಾಷ್‌ನಲ್ಲಿ ಭಾರತಕ್ಕೆ ಎರಡನೇ ಪದಕ:


ಸೌರವ್ ಘೋಸಲ್ ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ. ಸ್ಕ್ವಾಷ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ. ಪ್ರಸಕ್ತ ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.