Dinesh Karthik: ಸ್ಟಾರ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಐಪಿಎಲ್ 2024ನಲ್ಲಿ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್‌ ಆಟಗಾರ ಕಾರ್ತಿಕ್ ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. 38 ವರ್ಷದ ಆಟಗಾರ ದಿನೇಶ್‌ ಅವರದ್ದು ಇದೇ ಕೊನೆಯ ಐಪಿಎಲ್ ಎಂದು ವರದಿಗಳು ಹೇಳುತ್ತಿವೆ. ಅಂದರೇ ಅವರು ಐಪಿಎಲ್ ನಂತರ ಆವೃತ್ತಿಯನ್ನು  ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ..


COMMERCIAL BREAK
SCROLL TO CONTINUE READING

ಇದನ್ನೂ ಓದಿ-TATA IPL 2024ರ ಜಾಹೀರಾತಿಗಾಗಿ ಜೊತೆಗೂಡಿದ ಜಿಯೋಸಿನೆಮಾ ಮತ್ತು ಕ್ಯಾಪ್ಟನ್‌ ಕೂಲ್‌, ವಿಶಿಷ್ಟ ದ್ವಿಪಾತ್ರದಲ್ಲಿ ಧೋನಿ


ಈ ಬಲಗೈ ಬ್ಯಾಟ್ಸ್‌ಮನ್ 2008 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಮೊದಲ ಸೀಸನ್‌ನಿಂದ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಆಡುತ್ತಿರುವ ಆಯ್ಕೆಯಾದ ಆಟಗಾರರಲ್ಲಿ ಅವರ ಹೆಸರೂ ಇದೆ.. ಕಾರ್ತಿಕ್ ಹೊರತುಪಡಿಸಿ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ಇದುವರೆಗೆ ಪ್ರತಿ ಐಪಿಎಲ್ ಸೀಸನ್‌ನಲ್ಲಿಯೂ ಆಡಿದ್ದಾರೆ.


ಇದನ್ನೂ ಓದಿ-IPL 2024ರಲ್ಲಿ ವಿರಾಟ್’ಗಿಂತ ಹೆಚ್ಚು ಸಂಭಾವನೆ ಪಡೀತಾರೆ ಈ ಮೂವರು ಆಟಗಾರರು: ಒಬ್ಬ ಕೊಹ್ಲಿಯ ನೆಚ್ಚಿನ ಗೆಳೆಯನೇ…!!


ದಿನೇಶ್ 2022 ರಿಂದ RCB ತಂಡದ ಭಾಗವಾಗಿದ್ದಾರೆ.. ಅವರನ್ನು 5.5 ಕೋಟಿ ರೂ.ಗೆ ಫ್ರಾಂಚೈಸಿ ಖರೀದಿಸಿತ್ತು. ಅವರು 2022 ರ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.. ಈ ವಿಕೆಟ್‌ಕೀಪರ್ 16 ಪಂದ್ಯಗಳಲ್ಲಿ 55 ಸರಾಸರಿಯಲ್ಲಿ ಮತ್ತು 183.33 ಸ್ಟ್ರೈಕ್ ರೇಟ್‌ನಲ್ಲಿ 330 ರನ್ ಗಳಿಸಿ.. ಆರ್‌ಸಿಬಿಯನ್ನು ಪ್ಲೇ ಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಆಧಾರದ ಮೇಲೆ ಅವರು ಟೀಂ ಇಂಡಿಯಾಗೆ ಮರಳಿದರು, ಆದರೆ ದಿನೇಶ್ 2023 ರಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.