JioCinema and Captain Cool team up for TATA IPL 2024 AD :ಇದೇ ಮಾರ್ಚ್ 22 ರಂದು ಪ್ರಾರಂಭವಾಗಲಿರುವ ಟಾಟಾ ಐಪಿಎಲ್ 2024ರ ಮೊದಲ ಪಂದ್ಯ ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಕುತೂಹಲವನ್ನು ದುಪ್ಪಟ್ಟುಗೊಳಿಸುವ ಉದ್ದೇಶದಲ್ಲಿ ಜಿಯೋ ಸಿನಿಮಾ ಮತ್ತು ಎಂಎಸ್ ಧೋನಿಯ ಜಾಹೀರಾತೊಂದರಲ್ಲಿ ಕೈ ಜೋಡಿಸಿದ್ದು, ಕ್ಯಾಪ್ಟನ್ ಕೂಲ್ ವಿಶಿಷ್ಟ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲಾ ಮೂರು ಜಾಹೀರಾತ ಡಿಜಿಟಲ್‌ನಲ್ಲಿ ಟಾಟಾ ಐಪಿಎಲ್ ವೀಕ್ಷಣೆಗೆ ಸಮಗ್ರ ಉತ್ಸುಕತೆಯನ್ನು ಬಿಂಬಿಸುತ್ತವೆ. ಟಾಟಾ ಐಪಿಎಲ್ ಸೇರಿದಂತೆ ಇತರ ಡಿಜಿಟಲ್ ಮಾಧ್ಯಮದ ಮೂಲಕ ನೇರ ಕ್ರೀಡೆಯನ್ನು ವೀಕ್ಷಿಸಲು ಆಯ್ಕೆಯನ್ನು ಆರಿಸಿಕೊಳ್ಳುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಒಳಗೊಂಡಿದೆ. ಕಳೆದ ಸೀಸನ್‌ನಲ್ಲಿ ಜಿಯೋ ಸಿನಿಮಾ 449 ಮಿಲಿಯನ್ ಜನರನ್ನು ತಲುಪಿ ದಾಖಲೆ ನಿರ್ಮಿಸಿದೆ.
ಇದನ್ನು ಓದಿ : Koppal : ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಜಾಹೀರಾತು ದಿ ಸ್ಕ್ರಿಪ್ಟ್ ರೂಂನ ಪರಿಕಲ್ಪನೆಯಾಗಿದ್ದು ಮತ್ತು ಅರ್ಲಿ ಮ್ಯಾನ್ ಫಿಲ್ಮ್ಸ್ ಇದನ್ನು ನಿರ್ಮಿಸಿದೆ. ಇದರಲ್ಲಿ ಜಾಹೀರಾತಿನಲ್ಲಿ ಎಂಎಸ್ ಧೋನಿ ಅಜ್ಜ ಮತ್ತು ಮೊಮ್ಮಗನ ವಿಶಿಷ್ಟ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇದು ಒಂದು ಹಾಸ್ಯಮಯ ಜಾಹೀರಾತಾಗಿದ್ದು, ಇದು ಮೊಮ್ಮಗನು ತನ್ನ ಫೋನ್ ಪರದೆಯಲ್ಲಿ ಟಾಟಾ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ದೃಶ್ಯದೊಂದಿಗೆ ಆರಂಭಗೊಳ್ಳುತ್ತದೆ, ನಂತರ ತಾತ ಕೂಡ ತನ್ನ ಫೋನ್‌ನಲ್ಲಿ ಅದೇ ಪಂದ್ಯವನ್ನು ನೋಡುವುದರಲ್ಲಿ ಆಳವಾಗಿ ತಲ್ಲೀನನಾಗಿರುವುದನ್ನು ತೋರಿಸುತ್ತದೆ. ನಂತರ ಹಠಾತ್ ತಾತನಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆಂಬ್ಯುಲೆನ್ಸ್ ಅನ್ನು ಕರೆಸಲಾಗುತ್ತದೆ, ಆಂಬ್ಯುಲೆನ್ಸ್ ಆಸ್ಪತ್ರೆ ಕಡೆಗೆ ಸಾಗಿದಾಗ ದಾರಿಯಲ್ಲಿ ಅದರಲ್ಲಿನ ಮೆಡಿಕಲ್ ಅಟೆಂಡೆಂಟ್ ಕೂಡ ತನ್ನ ಫೋನ್‌ನಲ್ಲಿ ಪಂದ್ಯ ವೀಕ್ಷಿಸುತ್ತಿರುವುದು ಕಾಣಿಸುತ್ತದೆ. ತಾತ ಮತ್ತು ಮೊಮ್ಮಗ ಹಾಸ್ಯಮಯವಾಗಿ ವ್ಯಾನ್‌ನ ಹಿಂಭಾಗದಲ್ಲಿ ಆರಾಮದಾಯಕವಾಗಿರುತ್ತಾರೆ. ನಂತರ ತಾತ ಒಮ್ಮೆ ತೇಗುತ್ತಾನೆ ಮತ್ತು ಅದು ಎದೆನೋವು ಅಲ್ಲ ಕೇವಲ ಗ್ಯಾಸ್ ಸಮಸ್ಯೆ ಎಂದು ಹೇಳುವಲ್ಲಿ ಕಥೆಯು ತಿರುವು ಪಡೆದುಕೊಳ್ಳುತ್ತದೆ. ಅಷ್ಟರಲ್ಲಿ ಪಂದ್ಯದಲ್ಲಿ ಸಿಕ್ಸರ್ ಹೊಡೆಯುತ್ತಾರೆ ಮತ್ತು ಇದು ಮೂವರನ್ನು ಹುರಿದುಂಬಿಸುತ್ತದೆ. ಜಾಹೀರಾತು ಇಲ್ಲಿಗೆ ಅಂತ್ಯಗೊಳ್ಳುತ್ತದೆ. ಈ ಜಾಹೀರಾತು ಟಿವಿ, ಡಿಜಿಟಲ್, ಸಾಮಾಜಿಕ ಜಾಲತಾಣ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ.
Thala bhi, unke Dadaji bhi
Cricket ke stans bhi
Cricketers ke fans bhi
JioCinema pe TATA IPL sab dekhenge
Kahin bhi, kaise bhi!#SabYahaanAurKahaan#IPLonJioCinema, streaming FREE from March 22!#IPL2024 #TATAIPL pic.twitter.com/Su1SWlmRcD— JioCinema (@JioCinema) March 6, 2024
ಜಿಯೋಸಿನೆಮಾದ ಕ್ರಿಯೇಟೀವ್ ಮಾರ್ಕೆಟಿಂಗ್ ಮುಖ್ಯಸ್ಥರಾದ ಶಗುಣ್ ಸೇದಾ ಈ ಕುರಿತು ಹೇಳಿಕೆ ನೀಡಿದ್ದು, “ಈ ಕ್ಯಾಂಪೇನ್ ಇತ್ತೀಚಿನ ಸಮಯದಲ್ಲಿ ಜನರು ಪ್ರತಿನಿತ್ಯ ನೇರ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಾಗಿ ಡಿಜಿಟಲ್ ಮಾಧ್ಯಮಗಳತ್ತ ಆಕರ್ಷಿತರಾಗುತ್ತಿರುವಂತಹ ಅತಿ ದೊಡ್ಡ ಬಳಕೆಯ ಬದಲಾವಣೆಯ ಆಧಾರದ ಮೇಲೆ ಈ ಜಾಹೀರಾತಿನ ಪರಿಕಲ್ಪನೆ ಮಾಡಲಾಗಿದೆ. ಇದರ ಟ್ಯಾಗ್‌ಲೈನ್ ಆಗಿರುವ “ಸಬ್ ಯಹಾಂ ಔರ್ ಕಹನ್!” (ಎಲ್ಲಾವು ಇಲ್ಲಿಯೇ ಬೇರೆಡೆ ಯಾಕೆ!) ಎಂಬುದು ಜನರು ಡಿಜಿಟಲ್‌ನಲ್ಲಿ ಟಾಟಾ ಐಪಿಎಲ್ ವೀಕ್ಷಿಸಲು ಬಯಸುತ್ತಿದ್ದಾರೆ ಮತ್ತು ಜಿಯೋ ಸಿನಿಮಾ ಯಾವುದೇ ಲಭ್ಯತೆ, ದರ ಮತ್ತು ಭಾಷೆಯ ಅಡೆತಡೆಗಳಿಲ್ಲದೆ ವಿಶ್ವದ ಬಹುದೊಡ್ಡ ಟಿ20 ಟೂರ್ನಮೆಂಟ್ ಅನ್ನು ಜನರಿಗೆ ತಲುಪಿಸುವುದನ್ನು ಮುಂದುವರಿಸಲಿದೆ ಎಂಬುದನ್ನು ತೋರಿಸುತ್ತದೆ. ಸೃಜನಾತ್ಮಕವಾಗಿ ನಾವು ಎಂ.ಎಸ್. ಧೋನಿ ಅವರ ಪ್ರತಿ ಕ್ರಿಯೆಯನ್ನು ಅವರ ಅಭಿಮಾನಿಗಳು ಪ್ರತಿಕ್ಷಣ ಆನಂದಿಸುವಂತೆ ಇದನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದೇವೆ” ಎಂದಿದ್ದಾರೆ.
ಇದನ್ನು ಓದಿ : ESCOM : ಮಾರ್ಚ್ 10ರಿಂದ ಎಸ್ಕಾಂ ಆನಲೈನ್ ಸೇವೆ ಲಭ್ಯವಿಲ್ಲ, ಮತ್ತೆ ಯಾವಾಗ ಆರಂಭ? ಮಾಹಿತಿ ಇಲ್ಲಿದೆ
ದಿ ಸ್ಕ್ರಿಪ್ಟ್ ರೂಂನ ಸ್ಥಾಪಕರಾದ ಅಯ್ಯಪ್ಪನ್, “ಇದು ಕೇವಲ ಒಂದು ಕ್ಯಾಂಪೇನ್ ಅಲ್ಲ. ಇದು ದೊಡ್ಡ ಏಜೆನ್ಸಿಗಳು ಮುಖ್ಯಸ್ಥರು ಹೇಳುವಂತೆ "ಮ್ಯಾಂಡೇಟ್” ಆಗಿದೆ. “ಸಬ್ ಯಹಾಂ ಔರ್ ಕಹನ್!” (ಎಲ್ಲಾವು ಇಲ್ಲಿಯೇ ಬೇರೆಡೆ ಯಾಕೆ!) ಎಂಬ ಕೇಂದ್ರೀಕೃತ ಐಡಿಯಾದೊಂದಿಗೆ ಹಲವು ಚಲನಚಿತ್ರಗಳ ಸಂಕಲನ ಬರೆಯುವುದು, ಪ್ರೊಡಕ್ಷನ್ ತಂಡದೊಂದಿಗೆ ಕೆಲಸ ಮಾಡುವುದು ಸೇರಿದಂತೆ ಜಿಯೋಸಿನೆಮಾದೊಂದಿಗೆ ನಿಕಟವಾಗಿ ಕೆಲಸ ಮಾಡಿರುವುದು ಒಂದು ಒತ್ತಡದ ಹಾಗೂ ಭಾವನಾತ್ಮಕವಾಗಿ ತೃಪ್ತಿ ನೀಡಿದಂತಹ ಪಯಣವಾಗಿತ್ತು. ನಮ್ಮ ಮೇಲೆ ನಂಬಿಕೆ ಇರಿಸಿದಕ್ಕಾಗಿ ಜಿಯೋಸಿನೆಮಾಗೆ ಧನ್ಯವಾದಗಳು. ಇದು ನಮ್ಮ ನಿರೀಕ್ಷೆಗಿಂತ ಉತ್ತಮವಾಗಿದೆ. ಈ ಪ್ರಯತ್ನದಿಂದ ನಮಗೆ ಅತ್ಯುತ್ತಮ ಸೃಜನಾತ್ಮಕ ಫಲಿತಾಂಶ ದೊರೆತಿರುವುದು ತುಂಬಾ ಸಂತಸ ನೀಡಿದೆ. ನಮ್ಮ ಕೆಲಸ ನಮಗೆ ಸಂತೋಷ ತಂದಿದೆ, ಎಲ್ಲರೂ ಅದನ್ನು ಆನಂದಿಸುತ್ತಾರೆ ಎಂದು ಬಯಸುತ್ತೇನೆ” ಎಂದಿದ್ದಾರೆ.
2024 ರ ಮಾರ್ಚ್ 22 ರಂದು ಎಂ.ಎಸ್. ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಮುಖಾಮುಖಿಯಾಗಲಿದೆ. ಇದರೊಂದಿಗೆ ಜಿಯೋಸಿನೆಮಾದಲ್ಲಿ ದಕ್ಷಿಣದ ಡರ್ಬಿಯೊಂದಿಗೆ ಟಾಟಾ ಐಪಿಎಲ್ 2024ಪ್ರಾರಂಭವಾಗುತ್ತದೆ. ವೀಕ್ಷಕರು 12 ಭಾಷೆಗಳಲ್ಲಿ ಹೊಸ ಸೀಸನ್ ಅನ್ನು 4K ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಹರಿಯಾಣ ಭಾಷೆಯನ್ನು ಕೂಡ ಪರಿಚಯಿಸಲಾಗುತ್ತಿದೆ. ಇದು ಬಹು-ಹೈಪ್ಡ್ ಹೀರೋ ಕ್ಯಾಮ್ ಸೇರಿದಂತೆ ಬಹು-ಕ್ಯಾಮ್ ಆಯ್ಕೆಗಳು ಮತ್ತು ಜೀತೋ ಧನ್ ಧನಾ ಧನ್ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ವೀಕ್ಷಕರು ಜಿಯೋಸಿನೆಮಾ (iOS & Android) ಡೌನ್‌ಲೋಡ್ ಮಾಡುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳ ವೀಕ್ಷಣೆಯನ್ನು ಮುಂದುವರಿಸಬಹುದು. ಇತ್ತೀಚಿನ ಅಪ್‌ಡೇಟ್‌ಗಳು, ಸುದ್ದಿಗಳು, ಸ್ಕೋರ್‌ಗಳು ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು Facebook, Instagram, Twitter, YouTube, ಮತ್ತು WhatsApp ಮತ್ತು Sports18 ಅನ್ನು Facebook, Instagram, Twitter, ಮತ್ತು YouTube ನಲ್ಲಿ JioCinema ಅನ್ನು ಫಾಲೋ ಮಾಡಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.