ಬೆಂಗಳೂರು: ಅರೇ ಏನಿದು ಡಿಂಗ್‌ ಡಾಂಗ್‌ ಅಂತೀರಾ? ಇಲ್ಲಿ ಡಿಂಗ್‌ ಡಾಂಗ್‌ ಅಂದ್ರೆ ಒಂದು ಕೋತಿ, ಕೋತಿ ಅಂದ್ರೆ ಅಂತಿಂಥಾ ಕೋತಿ ಅಲ್ಲ, ಇದು ಮಾತನಾಡೋ ಕೋತಿ. ಹಾಗಂತ ಈ ಕೋತಿಗೆ ಜೀವ ಇಲ್ಲ. ಆದ್ರೂ RCB ಮಾಜಿ ನಾಯಕನಿಗೆ ಈ ಡಿಂಗ್‌ ಡಾಂಗ್‌ ಆಲ್‌ ದಿ ಬೆಸ್ಟ್‌ ಹೇಳಿದೆ. 


COMMERCIAL BREAK
SCROLL TO CONTINUE READING

ಅಸಲಿಗೆ ಈ ಆಲ್‌ ದಿ ಬೆಸ್ಟ್‌ ಹೇಳಿರೋದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆದ್ರೋಡಿಯ ಸ್ಮಿತಾ, ಪ್ರಸ್ತುತ ಮೈಸೂರು ಮಾನಸ ಗಂಗೋತ್ರಿಯಲ್ಲಿ ಪ್ರಥಮ ಎಂಎಸ್‌ಡಬ್ಲೂ ವ್ಯಾಸಂಗ ಮಾಡುತ್ತಿರುವ ಇವರು ಹವ್ಯಾಸಿ ಪಪ್ಪೆಟ್ರಿ (puppetry) ಕಲಾವಿದೆ. ಅಪ್ಪಟ RCB ಅಭಿಮಾನಿಯಾಗಿರುವ ಇವರು ಕೊಹ್ಲಿ ಅಭಿಮಾನಿಯೂ ಹೌದು.


  IPL 2022: ಎಂ.ಎಸ್.ಧೋನಿ CSK ನಾಯಕತ್ವ ತೊರೆಯಲು ಕಾರಣವೇನು..? 


ಕಳೆದ ವರ್ಷ ಆರ್‌ಸಿಬಿ ಕ್ಯಾಪ್ಟನ್ಸಿ ತೊರೆದಿರುವ ಕೊಹ್ಲಿ ಈ ಬಾರಿಯ ಐಪಿಎಲ್‌ ಪಂದ್ಯದಲ್ಲಿ ಸಾಮಾನ್ಯ ಆಟಗಾರನಾಗಿ ಆಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಹ್ಲಿ (Virat Kohli) ಕ್ಯಾಪ್ಟನ್ಸಿಯನ್ನು ಅಸಂಖ್ಯಾತ ಕೊಹ್ಲಿ ಅಭಿಮಾನಿಗಳು ಮಿಸ್‌ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಈಗ ಸ್ಮಿತಾ ತನ್ನ ವಿಶೇಷ ಕಲೆಯ ಮೂಲಕ ಕೊಹ್ಲಿಗೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.