ನವದೆಹಲಿ: ನಾಳೆಯಿಂದ ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಟೂರ್ನಿ(Indian Premier League 2022) ಪ್ರಾರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ತಂಡವನ್ನು ರವೀಂದ್ರ ಜಡೇಜಾ ಮುನ್ನೆಡೆಸಲಿದ್ದಾರೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಸಿಎಸ್ಕೆ ತಂಡದ ನಾಯಕತ್ವವನ್ನು ದೊರೆದಿರುವ ಧೋನಿ(MS Dhoni) ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಎಂ.ಎಸ್.ಧೋನಿ(MS Dhoni)ಯವರ ಈ ನಿರ್ಧಾರದಿಂದ ಅವರ ಕೋಟ್ಯಂತರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಆದರೆ ಧೊನಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆಂದು ಕ್ರಿಕೆಟ್ ತಜ್ಞರು ಮತ್ತು ಹಿರಿಯ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಧೋನಿ ಟೀಂ ಇಂಡಿಯಾದ ನಾಯಕತ್ವಕ್ಕೆ ದಿಢೀರ್ ಆಗಿ ಗುಡ್ ಬೈ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ: ಈ ಮೂರು ಕಾರಣಗಳಿಂದ CSK IPL 2022 ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ..!
ವಿಶ್ವದ ಶ್ರೇಷ್ಠ ಆಲ್ರೌಂಡರ್ ರವೀಂದ್ರ ಜಡೇಜಾಗೆ ನಾಯಕತ್ವ(CSK Captaincy) ಹಸ್ತಾಂತರಿಸುವ ಧೋನಿ ತಂಡದ ಆಟಗಾರನಾಗಿ ಮುಂದುವರಿಯಲಿದ್ದಾರೆ. ಈ ಬಾರಿಯೂ ಅವರೇ ಚೆನ್ನೈ ತಂಡದ ನಾಯಕತ್ವ ವಹಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ 13ನೇ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ನಿರ್ಗಮಿಸಿದ್ದ ಚೆನ್ನೈ ಧೋನಿ ನಾಯಕತ್ವದಲ್ಲಿಯೇ ಕಳೆದ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದು ವಿಶ್ವ ಕಂಡ ಸರ್ವಶ್ರೇಷ್ಠ ನಾಯಕ ಧೋನಿ ಮ್ಯಾಜಿಕ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಈ ಬಾರಿಯೂ ಅವರು ಚೆನ್ನೈ ತಂಡ ನಾಯಕತ್ವ ವಹಿಸಿ ಚುಟುಕು ಕ್ರಿಕೆಟ್ ಗೆ ವಿದಾಯ ಹೇಳುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಧೋನಿ ಎಲ್ಲರಿಗೂ ಶಾಕ್ ನೀಡುವ ಮೂಲಕ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
Whist7⃣ePodu 💛 Whist8⃣ePodu@msdhoni @imjadeja pic.twitter.com/TtE0tJdwnp
— Chennai Super Kings (@ChennaiIPL) March 24, 2022
ಧೋನಿ ನಾಯಕತ್ವ ತ್ಯಜಿಸಲು ಕಾರಣವೇನು..?
ಧೋನಿ ಚೆನ್ನೈ ತಂಡದ ನಾಯಕತ್ವ(Chennai Super Kings) ತ್ಯಜಿಸಿರುವುದು ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದೆ. ನಾಯಕತ್ವ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿರಬೇಕು. ಜಡೇಜಾರಿಗೆ ಕ್ಯಾಪ್ಟನ್ ಪಟ್ಟ ವಹಿಸಲು ಇದೇ ಸೂಕ್ತ ಸಮಯವೆಂದು ಧೋನಿ ಭಾವಿಸಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: IPL 2022: 4 ವರ್ಷಗಳ ನಂತರ ಐಪಿಎಲ್ಗೆ ಸೂಪರ್ಸ್ಟಾರ್ ಆಟಗಾರನ ಪ್ರವೇಶ
ನಾಯಕತ್ವ ತ್ಯಜಿಸಲು ಧೋನಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದರು. ವೃತ್ತಿ ಜೀವನದ ಉತ್ತುಂಗದಲ್ಲಿರುವ ಜಡೇಜಾ(Ravindra Jadeja)ರಿಗೆ ನಾಯಕತ್ವ ವರ್ಗಾಯಿಸಲು ಇದೇ ಸೂಕ್ತ ಸಮಯವೆಂದು ಭಾವಿಸಿದ್ದರು. ಇಲ್ಲಿ CSK ಫ್ರಾಂಚೈಸಿಯ ಹಿತದೃಷ್ಟಿ ಕೂಡ ಇತ್ತು ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.