Rohit Sharma Luxurious house: ರೋಹಿತ್ ಶರ್ಮಾ ಇತ್ತೀಚೆಗೆ ತಮ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 ಟ್ರೋಫಿ ಗೆಲ್ಲುವಂತೆ ಮಾಡಿದ್ದಾರೆ. 17 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡುವ ಮೂಲಕ ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಭಾರತವು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007 ರ ಟಿ20 ವಿಶ್ವಕಪ್‌ನ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ನಾವು ವಿಶ್ವಕಪ್ ಗೆಲ್ಲಲು ಈತ ಕಾರಣ”- ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಆಟಗಾರನಿಗೆ ನೀಡಿದ ವಿರಾಟ್


ಇನ್ನು ರೋಹಿತ್ ಶರ್ಮಾ ಕ್ರಿಕೆಟ್ ಮೈದಾನದಲ್ಲಿ ಅನೇಕ ದಾಖಲೆಗಳನ್ನು ಸಹ ಸೃಷ್ಟಿ ಮಾಡಿದ್ದಾರೆ. ವಿಶ್ವ ಕ್ರಿಕೆಟ್‌’ನಲ್ಲಿ 'ಹಿಟ್‌ಮ್ಯಾನ್' ಎಂದು ಕರೆಯಲ್ಪಡುವ ರೋಹಿತ್ ಶರ್ಮಾ ವೃತ್ತಿಜೀವನದ ಹೊರತಾಗಿ, ವೈಯಕ್ತಿಕ ಜೀವನವೂ ಅಷ್ಟೇ ಸುಂದರವಾಗಿದೆ.


ರೋಹಿತ್ ಶರ್ಮಾ ಮುಂಬೈನ ವರ್ಲಿಯಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದು, ಅಹುಜಾ ಅಪಾರ್ಟ್‌ಮೆಂಟ್‌’ನ 29 ನೇ ಮಹಡಿಯಲ್ಲಿದೆ. ಈ ಅಪಾರ್ಟ್ಮೆಂಟ್ ಅನ್ನು 6,000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.


ಇನ್ನು ಈ ಮನೆಯಲ್ಲಿ 4 ಕಿಂಗ್ ಸೈಜ್ ಬೆಡ್ ರೂಂ, ಹಾಲ್ ಮತ್ತು ಅಡುಗೆಮನೆ ಇದೆ. ರೋಹಿತ್ ಶರ್ಮಾ 2015 ರಲ್ಲಿ ತಮ್ಮ ನಿಶ್ಚಿತಾರ್ಥದ ನಂತರ ಈ ಮನೆಯನ್ನು 30 ಕೋಟಿ ರೂಪಾಯಿಗೆ ಖರೀದಿಸಿದ್ದರು.


ಅಂದಹಾಗೆ ರೋಹಿತ್ ಶರ್ಮಾ ಅವರ ಮನೆಯ ಬಾಲ್ಕನಿಯಿಂದ ಅರಬ್ಬಿ ಸಮುದ್ರದ ಸುಂದರ ನೋಟವು ಗೋಚರಿಸುತ್ತದೆ. ಈ ಮನೆಯ ನಾಮಫಲಕದಲ್ಲಿ ರೋಹಿತ್ ಶರ್ಮಾ ಜೊತೆಗೆ ಅವರ ಪತ್ನಿ ರಿತಿಕಾ ಮತ್ತು ಪುತ್ರಿ ಸಮೈರಾ ಅವರ ಹೆಸರನ್ನೂ ಬರೆಯಲಾಗಿದೆ.


ಇದನ್ನೂ ಓದಿ: 3000 ಕೋಟಿ ಆಸ್ತಿ, ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್! ಆದ್ರೆ ಈಗ್ಲೂ ತಂದೆಗೆ ಮುಖ ಕೊಟ್ಟು ಮಾತಾಡಲ್ವಂತೆ ಈ ನಟ


ಅಹುಜಾ ಅಪಾರ್ಟ್‌ಮೆಂಟ್‌’ನಲ್ಲಿರುವ ಐಷಾರಾಮಿ ಸೌಕರ್ಯಗಳು ಕ್ಲಬ್ ಹೌಸ್ ಮತ್ತು ಮನರಂಜನಾ ಪ್ರದೇಶವನ್ನು ಒಳಗೊಂಡಿವೆ. ಇದಲ್ಲದೆ, ಸ್ಪಾ, ಮಿನಿ ಥಿಯೇಟರ್, ಯೋಗ ಕೊಠಡಿ, ಸಿಗಾರ್ ಕೊಠಡಿ, ವೈನ್ ಸೆಲ್ಲಾರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ