Virat Kohli: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌’ನ ಅತ್ಯಂತ ಭಯಾನಕ ಬ್ಯಾಟ್ಸ್‌’ಮನ್‌’ಗಳಲ್ಲಿ ಒಬ್ಬರು. ಲೆಕ್ಕವಿಲ್ಲದಷ್ಟು ಪಂದ್ಯಾವಳಿಗಳಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದಿರುವ ಅವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ, ವಿರಾಟ್ ಅವರನ್ನು ಆಧುನಿಕ ಯುಗದ ಏಕದಿನ ಶ್ರೇಷ್ಠ ಆಟಗಾರ ಎಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: FD Rate: ಜಸ್ಟ್ 2 ದಿನದಲ್ಲಿ… 112 ವರ್ಷ ಹಳೆಯ ಈ ಬ್ಯಾಂಕ್’ನಿಂದ ಹಿರಿಯ ನಾಗರಿಕರಿಗೆ ಸಿಗಲಿದೆ ಊಹೆಗೂ ನಿಲುಕದ ಬೊಂಬಾಟ್ ಗಿಫ್ಟ್!


ಇನ್ನು ಕೊಹ್ಲಿ ಅವರ ಹಲವಾರು ದಾಖಲೆಗಳನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೊಂದಿಗಿನ ನಿರಂತರ ಹೋಲಿಕೆ ಮಾಡಲಾಗುತ್ತದೆ. ಇನ್ನು ಇವೆಲ್ಲದಕ್ಕೂ ಮೀರಿ, ಅವರ ಜೀವನದಲ್ಲಿ ಏರಿಳಿತಗಳು ಸಂಭವಿಸಿರುವುದು ಸುಳ್ಳಲ್ಲ.


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವಿವಾಹವಾದರು. ಬಳಿಕ ಈ ದಂಪತಿಗೆ ಜನವರಿ 11, 2021 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತು. ಈ ಕ್ಯೂಟ್ ಕಪಲ್  ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.


ಇನ್ನು ಮದುವೆಯ ನಂತರ, ಪ್ರತಿಯೊಬ್ಬರೂ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯ ವ್ಯಕ್ತಿತ್ವ ಮತ್ತು ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಯನ್ನು ಕಂಡಿದ್ದಾರೆ. ಕ್ರಿಕೆಟಿಗ ಕೂಡ ತನ್ನ ಅನೇಕ ಸಂದರ್ಶನಗಳಲ್ಲಿ ಅನುಷ್ಕಾ ಶರ್ಮಾ ಅವರೊಂದಿಗಿನ ಮದುವೆಯ ನಂತರ, ಅವರು ಹೆಚ್ಚು ಶಾಂತಿಯುತವಾಗಿದ್ದಾರೆ. ವಿಷಯಗಳನ್ನು ದೊಡ್ಡ ಮತ್ತು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ.


ಆದರೆ, ವಿರಾಟ್ ಕೊಹ್ಲಿಯಲ್ಲಿ ಎಲ್ಲರೂ ನೋಡಿದ ದೊಡ್ಡ ಬದಲಾವಣೆಯೆಂದರೆ ಅವರ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಮೇಲಿನ ಒಲವು. ಅನುಷ್ಕಾ ಶರ್ಮಾ ಜೊತೆ ಮದುವೆಗೂ ಮೊದಲು ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, “ನಾನು ಪ್ರಾರ್ಥನೆ ಮತ್ತು ಪೂಜೆ ಮಾಡುವ ರೀತಿಯ ವ್ಯಕ್ತಿಯಲ್ಲ” ಎಂದು ಹೇಳಿದ್ದರು.


ಇದನ್ನೂ ಓದಿ: Funny Video: ಬಾಳೆಹಣ್ಣು ಅಂತ ಯುವತಿಯ ಅಲ್ಲಿಗೆ ಕೈ ಹಾಕಿದ ಕೋತಿ… ಬಟ್ಟೆಯೊಳಗೆ ನುಗ್ಗಿ…! ವಿಡಿಯೋ ನೋಡಿ


ಆದರೆ ಅನುಷ್ಕಾ ಜೊತೆಗಿನ ಮದುವೆ ಬಳಿಕ ಕೊಹ್ಲಿ  ದೈವ ಭಕ್ತರಾಗಿದ್ದಾರೆ ಎನ್ನಬಹುದು, ಇತ್ತೀಚೆಗೆ ಈ ಜೋಡಿ ಉಜ್ಜೈನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿತ್ತು. ಅಷ್ಟೇ ಅಲ್ಲದೆ, ವಿರಾಟ್ ಮತ್ತು ಅನುಷ್ಕಾ ಅನೇಕ ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡುವುದನ್ನು ಕಾಣುತ್ತಿದ್ದೇವೆ. ಉತ್ತರಾಖಂಡದ ನೈನಿತಾಲ್‌ನಲ್ಲಿರುವ ನೀಮ್ ಕರೋಲಿ ಬಾಬಾ ಅವರ ಕೈಚಿ ಧಾಮ್‌’ಗೆ ಕೂಡ ವಿರುಷ್ಕಾ ಭೇಟಿ ನೀಡಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.