SRH Owner Kavya maran: ಐಪಿಎಲ್ 2024 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು... ಈ ಪಂದ್ಯಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ತಂಡದ ಮಾಲೀಕ ಶಾರುಖ್ ಖಾನ್ ಹಾಗೂ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ನಿವ್ವಳ ಮೌಲ್ಯದ ಮಾಹಿತಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಕಾವ್ಯ ಮಾರನ್ ಯಾರು?
ಕಾವ್ಯಾ ಮಾರನ್ ಆಗಸ್ಟ್ 1992 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನಲ್ಲಿ ಪೂರ್ಣಗೊಳಿಸಿದರು. ನಂತರ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದದು, ಲಂಡನ್‌ಗೆ ಹೋಗಿ ಎಂಬಿಎ ಮುಗಿಸಿದರು. ಕಾವ್ಯಾ ಕುಟುಂಬ ರಾಜಕೀಯ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.


ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ ಸಂಸ್ಥಾಪಕರು. ರಾಜಕೀಯವಾಗಿ ಪ್ರಭಾವಿಯಾಗಿರುವ ಕಾವ್ಯಾ ಕುಟುಂಬದಲ್ಲಿ ಖ್ಯಾತ ರಾಜಕಾರಣಿಗಳೂ ಇದ್ದಾರೆ. ಕಾವ್ಯಾ ಅವರ ಅಜ್ಜ ಮುರಸೋಳಿ ಮಾರನ್ ಮತ್ತು ಚಿಕ್ಕಪ್ಪ ದಯಾನಿಧಿ ಮಾರನ್ ಇಬ್ಬರೂ ಮಾಜಿ ಕೇಂದ್ರ ಸಚಿವರು.


ಇದನ್ನೂ ಓದಿ-Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!


ಕಾವ್ಯ ಕಲಾನಿಧಿ ಮಾರನ್ ಅವರ ಒಬ್ಬಳೇ ಮಗಳು. ವರದಿಯ ಪ್ರಕಾರ, ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಲಾನಿಧಿ ಮಾರನ್ 82 ನೇ ಸ್ಥಾನದಲ್ಲಿದ್ದಾರೆ. ಅವರು ಸುಮಾರು 24,000 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ದೂರದರ್ಶನ ಚಾನೆಲ್‌ಗಳು, ಪತ್ರಿಕೆಗಳು, ವಾರಪತ್ರಿಕೆಗಳು, ಉಪಗ್ರಹ ಸೇವೆಗಳು, ಉತ್ಪಾದನಾ ಸೌಲಭ್ಯಗಳು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅವರು ಯಶಸ್ವಿ ಬ್ರ್ಯಾಂಡ್‌ಗಳನ್ನು ನಿರ್ಮಿಸಿದ್ದಾರೆ. ಕಲಾನಿಧಿ ಮಾರನ್ ಅವರು 2010 ರಿಂದ 2015 ರವರೆಗೆ ಸ್ಪೈಸ್‌ಜೆಟ್ ಏರ್‌ಲೈನ್ಸ್‌ನಲ್ಲಿ ಗಣನೀಯ ಪಾಲನ್ನು ಹೊಂದಿದ್ದರು.


ಕಾವ್ಯಾ ಮಾರನ್ ನಿವ್ವಳ ಮೌಲ್ಯ:
ಒಬ್ಬಳೇ ಮಗಳಾಗಿರುವ ಕಾರಣ ತಂದೆ ಕಲಾನಿಧಿಗೆ ಸೇರಿದ ಆಸ್ತಿಗಳೆಲ್ಲ ಕಾವ್ಯಾ ಅವರದ್ದೇ. ಹಾಗಾಗಿ ಕಾವ್ಯ ಮಾರನ್ ಸುಮಾರು 24,000 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಹೇಳಬಹುದು. 


ಶಾರುಖ್ ಖಾನ್ ಆಸ್ತಿ:
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡ ಕಮ್ಮಿ ಇಲ್ಲ. ಶಾರುಖ್ ಅವರನ್ನು ವಿಶ್ವದ ಶ್ರೇಷ್ಠ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಶಾರುಖ್ ಖಾನ್ ಅವರ ನಿವ್ವಳ ಮೌಲ್ಯ ಸುಮಾರು 6000 ಕೋಟಿ ರೂಪಾಯಿ ಎಂದು ಹೇಳಲಾಗಿದೆ. 


ಇದನ್ನೂ ಓದಿ-ಸ್ಟಾರ್‌ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದ ಖ್ಯಾತ ನಟಿ.. ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.