ಸ್ಟಾರ್‌ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದ ಖ್ಯಾತ ನಟಿ.. ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತಾ?

Actress Jayasudha: ನಟಿ ಜಯಸುಧಾ ಅವರು ತಮ್ಮ ಹದಿಹರೆಯದಲ್ಲಿ ಸ್ಟಾರ್ ಕ್ರಿಕೆಟಿಗನ ಮೇಲೆ ಕ್ರಶ್ ಹೊಂದಿದ್ದರು. ಅವನನ್ನೇ ಮದುವೆಯಾಗುವ ಯೋಚನೆಯನ್ನೂ ಮಾಡಿದ್ದರೂ.. ಆದರೆ ಆತ ಸಲಿಂಗಾಮಿ ಎಂದು ತಿಳಿದಾಗ ನಟಿ ಮಾಡಿದ್ದೇನು ಗೊತ್ತಾ?.  

Written by - Savita M B | Last Updated : May 27, 2024, 07:37 AM IST
  • ಹಿರಿಯ ನಟಿ ಜಯಸುಧಾ ಮೊದಲ ತಲೆಮಾರಿನ ನಾಯಕರ ಜೊತೆ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ
  • ಸಹಜ ನಟಿಯಾಗಿ ಇಂದಿಗೂ ಮಿಂಚುತ್ತಿರುವ ಇವರು ಸದ್ಯ ತುಂಬಾ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ.
ಸ್ಟಾರ್‌ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದ ಖ್ಯಾತ ನಟಿ.. ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತಾ?  title=

Jayasudha: ಹಿರಿಯ ನಟಿ ಜಯಸುಧಾ ಮೊದಲ ತಲೆಮಾರಿನ ನಾಯಕರ ಜೊತೆ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ... ಸಹಜ ನಟಿಯಾಗಿ ಇಂದಿಗೂ ಮಿಂಚುತ್ತಿರುವ ಇವರು ಸದ್ಯ ತುಂಬಾ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ಹೀರೋಗಳ ತಾಯಿ ಮತ್ತು ಚಿಕ್ಕಮ್ಮನ ಪಾತ್ರಗಳಲ್ಲಿ ನಟಿಸಿ ಇಂಪ್ರೆಸ್ ಮಾಡುತ್ತಿದ್ದಾರೆ.. ಉತ್ತಮ ಕಂಟೆಂಟ್‌ ಸಿನಿಮಾಗಳಿಗೆ ಆದ್ಯತೆ ನೀಡುತ್ತಾ ಕಾಲ ಕಾಲಕ್ಕೆ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದಾರೆ..  

ಇತ್ತೀಚೆಗೆ ಸಾಲು ಸಾಲು ಸಂದರ್ಶನಗಳನ್ನು ನೀಡುತ್ತಿರುವ ನಟಿ ಜಯಸುಧಾ ತಮ್ಮ ಜೀವನದ ಕೆಲವು ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ.. ಜಯಸುಧಾ ಈಗಾಗಲೇ ಎರಡು ಮದುವೆಯಾಗಿದ್ದಾರೆ. ಆಕೆಯ ಎರಡನೇ ಪತಿ ನಿತಿನ್ ಕಪೂರ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. 

ಇದನ್ನೂ ಓದಿ-ಲಂಡನ್‌ನಲ್ಲಿ ಲುಂಗಿ ಧರಿಸಿ ತಿರುಗಿದ ಮಹಿಳೆ..! ನೋಡಿದವರು ಏನಂದ್ರು ಗೊತ್ತೆ..?

ಇತ್ತೀಚೆಗಷ್ಟೇ ಜಯಸುಧಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯರಾಗಿದ್ದು, ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಜಯಸುಧಾ ತಮ್ಮ ಮದುವೆಗೆ ಮುನ್ನ ನಡೆದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಾಯಕಿಯಾದ ಆರಂಭದ ದಿನಗಳಲ್ಲಿ ತನಗೆ ಯಾರ ಮೇಲೆ ಕ್ರಶ್ ಇತ್ತು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. 

ಇದನ್ನೂ ಓದಿ-ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!

ಈ ಬಗ್ಗೆ ಮಾತನಾಡಿದ ನಟಿ ಜಯಸುಧಾ "ವೆರಿ ಬಿಗಿನಿಂಗ್‌ನಲ್ಲಿ ತೆಲುಗು ಹೀರೋಗಳ ಮೇಲೆ ತನಗೆ ಸಣ್ಣ ಸೆಳೆತವಿತ್ತು.. ಆದರೆ ಅದು ಹೆಚ್ಚು ಸಮಯ ಉಳಿಯಲಿಲ್ಲ.. ನಿಜ ಹೇಳುಬೇಕೆಂದರೇ ನನಗೆ ಕ್ರಿಕೆಟಿಗರ ಮೇಲೆ ಹೆಚ್ಚು ಒಲವು ಇತ್ತು.. ಹೀಗಾಗಿಯೇ ಪಾಕಿಸ್ತಾನಿ ಕ್ರಿಕೆಟಿಗ ಇಮ್ರಾನ್ ಖಾನ್ ಗೆ ಅವರನ್ನು ನಾನು ಇಷ್ಟಪಟ್ಟಿದ್ದೆ.. ಮದುವೆಯಾಗಲೂ ಬಯಸಿದ್ದೆ" ಎಂದಿದ್ದಾರೆ.. 
 
ಇದೇ ವೇಳೆ ಶಾಕಿಂಗ್‌ ವಿಚಾರವೊಂದನ್ನು ಬಯಲು ಮಾಡಿದ ನಟಿ ಜಯಸುಧಾ "ನನಗೆ ಸಿಂಗರ್ಸ್‌ ಎಂದರೇ ತುಂಬಾ ಇಷ್ಟ ಇಮ್ರಾನ್ ಖಾನ್ ಅವರಂತೆ ಅವರನ್ನು ಮದುವೆಯಾಗುವ ಕನಸು ಕಂಡಿದ್ದೇ ಆದರೆ ಕೆಲವು ವರ್ಷಗಳ ನಂತರ ಅವರು ಸಲಿಂಗಕಾಮಿ ಎಂದು ತಿಳಿಯಿತು.. ಆಗ ನನಗೆ ಅನಿಸಿದ್ದು ಹೆಚ್ಚು ಯಾವುದನ್ನು ಬಯಸಬಾರದು" ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News