IND vs AUS 2023 ODI Series: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ODI ಸರಣಿ ನಾಳೆಯಿಂದ ಅಂದರೆ ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ವಿಶ್ವಕಪ್‌’ಗೂ ಮುನ್ನ ಭಾರತಕ್ಕೆ ಇದೊಂದು ಮಹತ್ವದ ಸರಣಿ ಎಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಕ್ರಿಕೆಟ್ ತಜ್ಞರ ಪ್ರಕಾರ, ಈ ಸರಣಿಯನ್ನು ಗೆದ್ದ ತಂಡವು ಹೆಚ್ಚಿನ ಭರವಸೆಯೊಂದಿಗೆ ವಿಶ್ವಕಪ್‌’ಗೆ ಪ್ರವೇಶಿಸುತ್ತದೆ. ಅಷ್ಟೇ ಅಲ್ಲದೆ, ಅದರ ಪರಿಣಾಮವು ಗೆಲುವಿನ ಅಭಿಯಾನದ ಮೇಲೂ ಗೋಚರಿಸುತ್ತದೆ.


ಇದನ್ನೂ ಓದಿ: ಕುಟುಂಬ ಪೋಷಣೆಗೆ ಕಸ ಹೆಕ್ಕುತ್ತಿದ್ದ ಆತ ಇಂದು ‘ವಿಶ್ವ ಕ್ರಿಕೆಟ್’ನ ಬಾಸ್!


ಕ್ರಿಕೆಟ್ ತಜ್ಞರ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು (ಭಾರತ vs ಆಸ್ಟ್ರೇಲಿಯಾ ODI ದಾಖಲೆಗಳು) ಇದುವರೆಗೆ ಏಕದಿನ ಪಂದ್ಯಗಳಲ್ಲಿ 146 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 54 ಪಂದ್ಯಗಳನ್ನು ಗೆದ್ದಿದ್ದು, ಆಸ್ಟ್ರೇಲಿಯಾ 82 ಪಂದ್ಯಗಳನ್ನು ಗೆದ್ದಿದೆ. 10 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದೆ. ಹೀಗಾಗಿ ದಾಖಲೆ ನೋಡಿದರೆ ಆಸ್ಟ್ರೇಲಿಯಾ ಬಲಿಷ್ಠವಾಗಿ ಕಾಣುತ್ತದೆ. ಆದರೆ ಈ ಆಧಾರದ ಮೇಲೆ ಸಂಪೂರ್ಣ ಪಂದ್ಯದ ಚಿತ್ರವನ್ನು ಊಹಿಸಲು ಸಾಧ್ಯವಿಲ್ಲ ಎಂಬುದು ಇಲ್ಲಿ ಗಮನಿಸಲೇಬೇಕಾದ ಸಂಗತಿ.


ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 14 ಏಕದಿನ ಸರಣಿಗಳು ನಡೆದಿವೆ. ಈ ಪೈಕಿ ಆಸ್ಟ್ರೇಲಿಯಾ 8 ಹಾಗೂ ಭಾರತ 6 ಏಕದಿನ ಸರಣಿ ಗೆದ್ದಿವೆ. ಇದರಲ್ಲಿ 11 ಸರಣಿಗಳು ಭಾರತದಲ್ಲಿ ನಡೆದಿದ್ದು, ಇದರಲ್ಲಿ ಆಸ್ಟ್ರೇಲಿಯಾ 6 ಮತ್ತು ಭಾರತ 5 ಸರಣಿಗಳನ್ನು ಗೆದ್ದಿವೆ. ಆಸ್ಟ್ರೇಲಿಯದಲ್ಲಿ ಆಡಿದ 3 ಏಕದಿನ ಸರಣಿಗಳಲ್ಲಿ ಭಾರತ ಒಂದನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 2 ಏಕದಿನ ಸರಣಿಯನ್ನು ಗೆದ್ದಿದೆ.


ಉಭಯ ದೇಶಗಳ ನಡುವಿನ ಮೊದಲ ODI ಸರಣಿ 1984 ರಲ್ಲಿ ನಡೆಯಿತು. ಇನ್ನು ಭಾರತದ ನೆಲದ ಬಗ್ಗೆ ಮಾತನಾಡುವುದಾದರೆ ಉಭಯ ದೇಶಗಳ ನಡುವೆ ಇದುವರೆಗೆ 67 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 30 ಹಾಗೂ ಆಸ್ಟ್ರೇಲಿಯಾ 32ರಲ್ಲಿ ಗೆಲುವು ಸಾಧಿಸಿದೆ. 5 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.


ಇದನ್ನೂ ಓದಿ: ಫಿಟ್ನೆಸ್ ಟೆಸ್ಟ್ ಫೇಲ್: ವಿಶ್ವಕಪ್ ತಂಡದಿಂದ ಹೊರಬಿದ್ದ ಇಬ್ಬರು ಸ್ಟಾರ್ ಪ್ಲೇಯರ್ಸ್!


ಆತಂಕದ ವಿಷಯವೆಂದರೆ ಉಭಯ ತಂಡಗಳ ನಡುವೆ ಆಡಿದ ಕೊನೆಯ 4 ಸರಣಿಗಳಲ್ಲಿ 3 ರಲ್ಲಿ ಭಾರತ ಸೋತಿದೆ. ಭಾರತ ತಂಡವು 2020ರಿಂದ ಆಸ್ಟ್ರೇಲಿಯಾ ವಿರುದ್ಧ ಯಾವುದೇ ಏಕದಿನ ಸರಣಿಯನ್ನು ಗೆದ್ದಿಲ್ಲ. ಇದರ ಹೊರತಾಗಿಯೂ, ಭಾರತ ತಂಡವು ಸಾಮಾನ್ಯವಾಗಿ ಸ್ಥಳೀಯ ಪಿಚ್‌’ಗಳಲ್ಲಿ ಮೇಲುಗೈ ಸಾಧಿಸಿದೆ. ಈ ಬಾರಿಯೂ ಅಂತಹದ್ದೇ ದೊಡ್ಡ ಸಂಚಲನವನ್ನು ಸೃಷ್ಟಿಸಬಹುದು ಎಂಬ ಭರವಸೆ ಭಾರತೀಯ ಅಭಿಮಾನಿಗಳಲ್ಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.