ನವದೆಹಲಿ: ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ 2020 ಫೈನಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್‌ಗಳ ಸುಲಭ ಜಯ ದಾಖಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಐದನೇ ಐಪಿಎಲ್ ಪ್ರಶಸ್ತಿಯನ್ನು ಪಡೆದ ನಂತರ ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಮುಂಬೈ ಇಂಡಿಯನ್ಸ್ ವಿಶ್ವದ ಅತ್ಯುತ್ತಮ ಟಿ 20 ತಂಡಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದರು.


ವಿರಾಟ್ ಕೊಹ್ಲಿ ದ್ವಿಮುಖ ವ್ಯಕ್ತಿತ್ವದ ಬಗ್ಗೆ ಆಸ್ಟ್ರೇಲಿಯಾದ ಆಡಂ ಜಂಪಾ ಹೇಳಿದ್ದೇನು?


COMMERCIAL BREAK
SCROLL TO CONTINUE READING

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಾರೆ ಎಬಿ ಡಿವಿಲಿಯರ್ಸ್ ಕೂಡ ಮುಂಬೈ ಇಂಡಿಯನ್ಸ್ ಅನ್ನು ಐಪಿಎಲ್ 2020 ರ ಅತ್ಯುತ್ತಮ ತಂಡ ಎಂದು ಕರೆದಿದ್ದಾರೆ. ನಿಸ್ಸಂದೇಹವಾಗಿ ಮುಂಬೈ ಇಂಡಿಯನ್ಸ್  ಈ ವರ್ಷದ ಅತ್ಯುತ್ತಮ ತಂಡ ಎಂದು ಡಿವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ.


IPL 2020: ಈ ಐಪಿಎಲ್ ನ ಟಾಪ್ 5 ವಿವಾದಗಳು ಇಲ್ಲಿವೆ


ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ತಲುಪುವ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿತ್ತು ಆದರೆ, ಪ್ಲೇ ಆಫ್ ಹಂತದಲ್ಲಿ ಸೋಲನ್ನು ಅನುಭವಿಸುವ ಮೂಲಕ ಅದು ನಿರಾಸೆಯನ್ನು ಅನುಭವಿಸಿತು.