ಟೀಮ್ ಇಂಡಿಯಾದಲ್ಲಿ ಶಮಿಯ ಬೆಸ್ಟ್ ಫ್ರೆಂಡ್ಸ್ ಯಾರು ಗೊತ್ತಾ? ಬುಮ್ರಾ ಮತ್ತು ಸಿರಾಜ್ ಇಬ್ಬರೂ ಅಲ್ಲ..
Mohammed Shami: 2023ರ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪುವಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ.
Mohammed Shami Friends: 2023ರ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪುವಲ್ಲಿ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ತಮ್ಮ ಬೌಲಿಂಗ್ನಿಂದ ಎದುರಾಳಿಗಳ ಬೆನ್ನಿಗೆ ನಡುಕ ಹುಟ್ಟಿಸಿದರು. ಏಕದಿನ ವಿಶ್ವಕಪ್ನಲ್ಲಿ ಕೇವಲ ಏಳು ಪಂದ್ಯಗಳನ್ನು ಆಡಿರುವ ಶಮಿ 24 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಅಲ್ಲದೇ ಆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ವಿಶ್ವಕಪ್ ವೇಳೆ ಅವರು ಪಾದದ ಗಾಯಕ್ಕೆ ಒಳಗಾಗಿದ್ದು, ಗಾಯದ ಜೊತೆಗೆ ಪಂದ್ಯಗಳನ್ನು ಆಡಿದರು. ಏಕದಿನ ವಿಶ್ವಕಪ್ ಮುಗಿದ ನಂತರ ಅವರು ಆಟದಿಂದ ದೂರ ಉಳಿದಿದ್ದರು.
ಇದನ್ನೂ ಓದಿ-ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಹೊರಬಿತ್ತು ಬಿಗ್ ಅಪ್ಡೇಟ್: ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಈ ದಿಗ್ಗಜ ನೇಮಕ!
ಸದ್ಯ ಶಮಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಫಿಟ್ ಆಗುವ ಕೆಲಸದಲ್ಲಿರುವ ಶಮಿ ಇತ್ತೀಚೆಗೆ ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ-ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಇಂಥಾ ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ವನಿತಾ ಪಡೆ! ಅಷ್ಟಕ್ಕೂ ಏನದು?
ಅದರೊಂದಿಗೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ನನಗೆ ಇಬ್ಬರು ಬೆಸ್ಟ್ ಫ್ರೆಂಡ್ಸ್ ಇದ್ದಾರೆ ಎಂದು ಶಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರು ಬೇರೆ ಯಾರೂ ಅಲ್ಲ ವಿರಾಟ್ ಕೊಹ್ಲಿ ಮತ್ತು ಇಶಾಂತ್ ಶರ್ಮಾ.
'ಕೊಹ್ಲಿ ಮತ್ತು ಇಶಾಂತ್ ನನ್ನ ಉತ್ತಮ ಸ್ನೇಹಿತರು. ನನಗೆ ಗಾಯವಾದಾಗ, ಚೇತರಿಸಿಕೊಳ್ಳುತ್ತಿರುವಾಗ ನನಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವವರು’ ಎಂದು ಶಮಿ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.