Viral Video: ಕ್ರಿಕೆಟ್ ಮೈದಾನದಲ್ಲೇ ಶಾಹಿದ್ ಅಫ್ರಿದಿ vs ಎಂ.ಎಸ್.ಧೋನಿ ನಡುವೆ ಕಿತ್ತಾಟ!

India vs Pakistan: ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಣಸಾಟದ ಸಮಯದಲ್ಲಿ ಹೆಚ್ಚು ಚರ್ಚೆಯಾದ ವಿವಾದವೆಂದರೆ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ. 2005ರಲ್ಲಿ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ ವಿವಾದ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. 

Written by - Puttaraj K Alur | Last Updated : Sep 16, 2024, 02:51 PM IST
  • 2005ರಲ್ಲಿ ಶಾಹಿದ್ ಅಫ್ರಿದಿ & ಎಂ.ಎಸ್.ಧೋನಿ ವಿವಾದ ಎಲ್ಲರನ್ನೂ ಅಚ್ಚರಿಗೊಳಿಸಿತ್ತು
  • ಪಾಕಿಸ್ತಾನದ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಶತಕ ಸಿಡಿಸಿದ್ದ ಎಂ.ಎಸ್.ಧೋನಿ
  • ಪಂದ್ಯದ ವೇಳೆ ಧೋನಿ ಸ್ಫೋಟಕ ಆಟಕ್ಕೆ ಕಂಗಾಲಾಗಿ ನಿಂದಿಸಿದ್ದ ಶಾಹಿದ್ ಅಫ್ರಿದಿ
Viral Video: ಕ್ರಿಕೆಟ್ ಮೈದಾನದಲ್ಲೇ ಶಾಹಿದ್ ಅಫ್ರಿದಿ vs ಎಂ.ಎಸ್.ಧೋನಿ ನಡುವೆ ಕಿತ್ತಾಟ! title=
ಭಾರತ vs ಪಾಕಿಸ್ತಾನ

India vs Pakistan: ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಣಸಾಟದ ಸಮಯದಲ್ಲಿ ಹೆಚ್ಚು ಚರ್ಚೆಯಾದ ವಿವಾದವೆಂದರೆ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ. 2005ರಲ್ಲಿ ಅಫ್ರಿದಿ ಮತ್ತು ಧೋನಿ ವಿವಾದ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಭಾರತ-ಪಾಕಿಸ್ತಾನ ಮುಖಾಮುಖಿ ವೇಳೆ ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿರುತ್ತದೆ. ಕಳೆದ ಹಲವು ವರ್ಷಗಳಿಂದ ಈ ಎರಡು ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಸಾಕಷ್ಟು ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿದ್ದ ಸಮಯವಿತ್ತು, ಈ ವೇಳೆ ಅನೇಕ ಬಾರಿ ಎರಡೂ ತಂಡಗಳ ಆಟಗಾರರು ಪರಸ್ಪರ ಮೈದಾನದಲ್ಲಿಯೇ ಕಿತ್ತಾಡಿಕೊಂಡು ವಿವಾದ ಸೃಷ್ಟಿಸಿಕೊಂಡಿದ್ದರು. 

ಅಫ್ರಿದಿ ಮತ್ತು ಧೋನಿ ನಡುವೆ ದೊಡ್ಡ ವಿವಾದ!

2005ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಾಗ 6 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆದಿತ್ತು. ಈ ಪಂದ್ಯದ ವೇಳೆ ಶಾಹಿದ್ ಅಫ್ರಿದಿ ಅವರು ಎಂ.ಎಸ್.ಧೋನಿಯನ್ನು ಸಾಕಷ್ಟು ನಿಂದಿಸಿದ್ದರು. 5 ಏಪ್ರಿಲ್ 2005ರಂದು ವಿಶಾಖಪಟ್ಟಣಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ 2ನೇ ODI ಪಂದ್ಯ ನಡೆಯುತ್ತಿತ್ತು. ಇದು ಧೋನಿ ವೃತ್ತಿ ಜೀವನದ 5ನೇ ಏಕದಿನ ಪಂದ್ಯವಾಗಿತ್ತು. ಈ ವೇಳೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಮಹಿ ಪಾಕ್ ಬೌಲರ್‌ಗಳನ್ನು ಸರಿಯಾಗಿ ಬೆಂಡೆತ್ತಿದ್ದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ 123 ಎಸೆತಗಳಲ್ಲಿ 148 ರನ್ ಚಚ್ಚಿದ್ದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿಯ ಮೊದಲ ಶತಕವಾಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಧೋನಿ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಇದನ್ನೂ ಓದಿ: Most Triple Hundreds: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಟ್ರಿಪಲ್ ಶತಕ ಗಳಿಸಿದ ಐವರು ಬ್ಯಾಟ್ಸ್‌ಮನ್‌ಗಳು

ಧೋನಿಗೆ ನಿಂದಿಸಿದ್ದ ಆಫ್ರಿದಿ

ಪಂದ್ಯದ ವೇಳೆ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಧೋನಿಯವರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಶಾಹಿದ್ ಅಫ್ರಿದಿ ನಿಂದಿಸಿದ್ದರು. ಧೋನಿ ಮೇಲೆ ಒತ್ತಡ ಹೇರಲು ಅಫ್ರಿದಿ ನಕಲಿ LBWಗೆ ಮನವಿ ಮಾಡಿದ್ದರು. ಭಾರತೀಯ ಇನ್ನಿಂಗ್ಸ್‌ನ ೯ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತ್ತು. ಅಂಪೈರ್ ಕೂಡ ಅಫ್ರಿದಿ ಮನವಿಯನ್ನು ತಿರಸ್ಕರಿಸಿದ್ದರು. ಇದಾದ ನಂತರ ಧೋನಿ ಅವರು ಎಕ್ಸ್‌ಟ್ರಾ ಕವರ್‌ನಲ್ಲಿ ಶಾಹಿದ್ ಅಫ್ರಿದಿಗೆ ಎಸೆತಕ್ಕೆ ಭರ್ಜರಿ ಬೌಂಡರಿ ಬಾರಿಸಿದರು. ಇದರಿಂದ ತೀವ್ರ ನೊಂದ ಅಫ್ರಿದಿ, ಧೋನಿಯನ್ನು ನಿಂದಿಸಿದ್ದರು.

ಅಫ್ರಿದಿ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದ ಧೋನಿ!  

ಇದಾದ ನಂತರ ಯಾವುದೇ ಪ್ರತಿಕ್ರಿಯೆ ನೀಡದ ಧೋನಿಯವರು ಆಫ್ರಿದಿ ಅವರ ಆಕ್ಷನ್‌ಗೆ ಸಿಕ್ಸರ್ ಮೂಲಕ ಉತ್ತರಿಸಿದ್ದರು. ಅಫ್ರಿದಿ ಅವರ ಓವರ್‌ನ ೫ನೇ ಎಸೆತದಲ್ಲಿ ಧೋನಿ ಎಕ್ಸ್‌ಟ್ರಾ ಕವರ್ ಮತ್ತು ಮಿಡ್ ಆಫ್ ನಡುವೆ ಸಿಕ್ಸರ್ ಬಾರಿಸಿದರು. ಇದರ ನಂತರ ಮಾತು ನಿಲ್ಲಿಸಿದ ಅಫ್ರಿದಿ ಮುಖವೂ ಬಿಳುಚಿಕೊಂಡಿತ್ತು. ಧೋನಿ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ ನಿಗದಿತ ೫೦ ಓವರ್‌ನಲ್ಲಿ 356 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ನಂತರ ಭಾರತದ ಬೌಲರ್‌ಗಳು ಪಾಕಿಸ್ತಾನವನ್ನು 44.1 ಓವರ್‌ಗಳಲ್ಲಿ 298 ರನ್‌ಗಳಿಗೆ ಆಲೌಟ್ ಮಾಡಿದರು. ವಿಶಾಖಪಟ್ಟಣಂ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 58 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಗುಡ್‌ ನ್ಯೂಸ್‌! ದಿನೇಶ್‌ ಕಾರ್ತಿಕ್‌ ಸ್ಥಾನ ತುಂಬಲಿದ್ದಾರೆ ʻಈʼ ಸ್ಟಾರ್‌ ಪ್ಲೇಯರ್‌?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News