ನವದೆಹಲಿ:  ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಸ್ಟೀವ್ ಸ್ಮಿತ್ ನಿಸ್ಸಂದೇಹವಾಗಿ ಇಬ್ಬರು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಮತ್ತು ಹಲವಾರು ಸಂದರ್ಭಗಳಲ್ಲಿ ಅಭಿಮಾನಿಗಳು ಮತ್ತು  ಕ್ರಿಕೆಟ್ ಪಂಡಿತರು ಆಗಾಗ ಈ ಇಬ್ಬರು ಆಟಗಾರರ ನಡುವೆ ಹೋಲಿಕೆ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಈಗ ವಿರಾಟ್ ಕೊಹ್ಲಿ ವಿಚಾರವಾಗಿ ಮಾತನಾಡಿರುವ ಸ್ಟೀವ್ ಸ್ಮಿತ್ ' ನಾನು ವಿರಾಟ್ ಅವರನ್ನು ತುಂಬಾ ಮೆಚ್ಚುತ್ತೇನೆ, ಅವನು ಅದ್ಭುತ ಆಟಗಾರ. ನೀವು ಈಗ ಅವರ ದಾಖಲೆಯನ್ನು ನೋಡುತ್ತೀರಿ, ನಿಜಕ್ಕೂ ಊಹಿಸಲಸಾಧ್ಯವಾಗಿದೆ. ಅವರು ಭಾರತೀಯ ಕ್ರಿಕೆಟ್‌ಗೂ ತುಂಬಾ ಕೊಡುಗೆ ನೀಡಿದ್ದಾರೆ. ಅವರು ಈಗ ಆಟವನ್ನು ಆಡುವ ರೀತಿ, ಇದೆಲ್ಲವೂ ಅವರು ಭಾರತೀಯ ಕ್ರಿಕೆಟ್ ಗಾಗಿ ಪಡೆದಿರುವ ಉತ್ಸಾಹ ಎಂದು ಸ್ಟೀವ್ ಸ್ಮಿತ್ ಸೋನಿ ಟೆನ್ ಪಿಟ್‌ಸ್ಟಾಪ್‌ನಲ್ಲಿ ತಮ್ಮ ಸಂವಾದದ ಸಂದರ್ಭದಲ್ಲಿ ಹೇಳಿದರು.


"ಸುಧಾರಿಸುವುದು ಮತ್ತು ಉತ್ತಮಪಡಿಸಿಕೊಳ್ಳುವುದು ಅವರ ಪರಮ ಇಚ್ಚೆಯಾಗಿದೆ.ಮತ್ತು ಕಾಲಾನಂತರದಲ್ಲಿ ಅವರ ದೇಹವು ಒಂದು ರೀತಿಯ ರೂಪಾಂತರವನ್ನು ಹೊಂದಿರುವುದನ್ನು ನೀವು ನೋಡಬಹುದು. ಅವರು ಈಗ ತುಂಬಾ ಸದೃಢ ಮತ್ತು ಬಲಶಾಲಿ ಮತ್ತು ಶಕ್ತಿಯುತ. ನಾನು ಅವರ ಬಗ್ಗೆ ಕೆಟ್ಟ ಮಾತು ಹೇಳಲು ಸಾಧ್ಯವಿಲ್ಲ, ಕ್ರಿಕೆಟ್‌ಗೆ ಕೊಹ್ಲಿಯೊಬ್ಬ ಅದ್ಭುತ ವ್ಯಕ್ತಿ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಸ್ವಲ್ಪ ಮುಂದಿರುವ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಅಗ್ರಸ್ತಾನವನ್ನು ಕಾಯ್ದುಕೊಂಡಿದ್ದಾರೆ. ಇದನ್ನು ಸ್ವತಃ ಸ್ಮಿತ್ ಕೂಡ ಒಪ್ಪಿಕೊಂಡಿದ್ದಾರೆ.


'ನಾನು ಅವರ ಬಗ್ಗೆ ಹೆಚ್ಚು ಮೆಚ್ಚುವ ವಿಷಯವೆಂದರೆ ವೈಟ್ ಬಾಲ್ ನಲ್ಲಿ ಅವರು ಬೆನ್ನಟ್ಟುವ ರೀತಿ. ಏಕದಿನ ಪಂದ್ಯಗಳಲ್ಲಿ ಚೇಸ್‌ಗಳನ್ನು ಗೆಲ್ಲುವಲ್ಲಿ ನೀವು ಅವರ ಸರಾಸರಿಯನ್ನು ನೀವು ನೋಡುತ್ತೀರಿ ಮತ್ತು ಇದು ಅದ್ಭುತ. ಅವರು ಒತ್ತಡದಲ್ಲಿದ್ದು ಅಂತಹ ಕೆಲಸವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಆದ್ದರಿಂದ ಅಂತಹ ವ್ಯಕ್ತಿಯನ್ನು ನೀವು ಮೆಚ್ಚಲೇ ಬೇಕು ಎಂದು ಅವರು ಹೇಳಿದರು.