ನೀವು ಆಟವನ್ನು ಗೆಲ್ಲಲು ಆಡುತ್ತೀರೋ ಅಥವಾ 5 ದಿನಗಳ ವರೆಗೆ ತಗೆದುಕೊಂಡು ಹೋಗುತ್ತಿರೋ?
ಅಹಮದಾಬಾದ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ತೀವ್ರ ಚರ್ಚೆ ನಡೆದಿರುವ ಬೆನ್ನಲ್ಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತೀರುಗೇಟು ನೀಡಿದ್ದಾರೆ.
ನವದೆಹಲಿ: ಅಹಮದಾಬಾದ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ತೀವ್ರ ಚರ್ಚೆ ನಡೆದಿರುವ ಬೆನ್ನಲ್ಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತೀರುಗೇಟು ನೀಡಿದ್ದಾರೆ.
ಎರಡು-ಮೂರು ದಿನಗಳಲ್ಲಿ ಟೆಸ್ಟ್ ಪಂದ್ಯಗಳು ಮುಗಿಯದಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂದು ಕೊಹ್ಲಿ ಅವರನ್ನು ಕೇಳಲಾಯಿತು ಆಗ ಉತ್ತರಿಸಿದ ಅವರು "ನೀವು ಅದನ್ನು ಗೆಲ್ಲಲು ಆಟವನ್ನು ಆಡುತ್ತೀರಾ? ಅಥವಾ ಅದು ಐದು ದಿನಗಳವರೆಗೆ ಹೋಗುವ ಮೂಲ ಮನರಂಜನೆ ಇದೆ ಎಂದು ಖಚಿತಪಡಿಸಿಕೊಳ್ಳುತ್ತಿರಾ ಎಂದು ಕೊಹ್ಲಿ (Virat Kohli) ವ್ಯಂಗ್ಯವಾಡಿದರು.
ಇದನ್ನೂ ಓದಿ: Instagram ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ 'ಶತಕ'
ಬ್ಯಾಟ್ಸ್‌ಮನ್‌ಗಳ ಕೌಶಲ್ಯವನ್ನು ಪರಿಸ್ಥಿತಿಗಳಿಗಿಂತ ಹೆಚ್ಚಾಗಿ ನೋಡಬೇಕು ಎಂದು ಕೊಹ್ಲಿ ಸಮರ್ಥಿಸಿಕೊಂಡರು ಮತ್ತು ವಿದೇಶದಲ್ಲಿ ಸೀಮಿಂಗ್ ಟ್ರ್ಯಾಕ್‌ಗಳಲ್ಲಿ ಆಡುವಾಗ ತಮ್ಮ ತಂಡವು ಎಂದಿಗೂ ಈ ಬಗ್ಗೆ ಚಕಾರವೆತ್ತಲಿಲ್ಲ ಎಂದು ಹೇಳಿದರು.
ಸ್ಪಿನ್ನಿಂಗ್ ಟ್ರ್ಯಾಕ್ಗಳ ಬಗ್ಗೆ ಹೆಚ್ಚಿನ ಮಾತುಗಳು ಕೇಳಿಬರುತ್ತಿದೆ ಎಂದು ನಾನು ನಂಬುತ್ತೇನೆ.ಒಂದು ತಂಡವಾಗಿ ನಮ್ಮ ಯಶಸ್ಸಿನ ಹಿಂದಿನ ಕಾರಣವೆಂದರೆ, ನಾವು ಆಡಿದ ಯಾವುದೇ ಮೇಲ್ಮೈಯ ಬಗ್ಗೆ ನಾವು ಚಕಾರವೆತ್ತಿಲ್ಲ.ನಾವು ಯಾವಾಗಲೂ ಸುಧಾರಿಸಲು ಪ್ರಯತ್ನಿಸಿದ್ದೇವೆ" ಎಂದು ಅವರು ಹೇಳಿದರು.
ಇದನ್ನೂ ಓದಿ: 'ಭಾರತ ತಂಡವು ಇಂಗ್ಲೆಂಡ್ ತಂಡದ ಸ್ಪಿನ್ ದೌರ್ಬಲ್ಯವನ್ನು ಸರಿಯಾಗಿ ಲೆಕ್ಕ ಹಾಕಿದೆ'
'ಆದರೆ ದುರದೃಷ್ಟಕರ ಸಂಗತಿಯೆಂದರೆ ಪ್ರತಿಯೊಬ್ಬರೂ ಆ ನಿರೂಪಣೆಯೊಂದಿಗೆ ಆಡುತ್ತಾರೆ ಮತ್ತು ಅದು ಪ್ರಸ್ತುತವಾಗುವವರೆಗೂ ಅದನ್ನು ಸುದ್ದಿಯನ್ನಾಗಿ ಮಾಡುತ್ತಾರೆ.ತದನಂತರ ಟೆಸ್ಟ್ ಪಂದ್ಯ ನಡೆಯುತ್ತದೆ, ನೀವು 4 ಅಥವಾ 5 ನೇ ದಿನ ಗೆದ್ದರೆ, ಯಾರೂ ಏನನ್ನೂ ಹೇಳುವುದಿಲ್ಲ ಆದರೆ ಅದು ಎರಡರಲ್ಲಿ ಮುಗಿದರೆ ಎಲ್ಲರೂ ಒಂದೇ ವಿಷಯದ ಬಗ್ಗೆ ಚಿಮ್ಮುತ್ತಾರೆ "ಎಂದು ಅವರು ಹೇಳಿದರು.
ನ್ಯೂಜಿಲೆಂಡ್ನಲ್ಲಿ ನಾವು ಮೂರು ದಿನಗಳಲ್ಲಿ ಸೋತಾಗ ನಮ್ಮ ಜನರು ಸಹ ಪಿಚ್ ಬಗ್ಗೆ ಬರೆದಿಲ್ಲ ಎಂದು ನನಗೆ ಖಾತ್ರಿಯಿದೆ" ಎಂದು ಕೊಹ್ಲಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.