ನವದೆಹಲಿ: ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಬ್ಯಾಟ್ ಮೌನವಾಗಿದೆ. ಕೊನೆಯ 2 ಪಂದ್ಯಗಳಲ್ಲಿ ರಾಹುಲ್ ಬ್ಯಾಟಿಂಗ್‍ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ. ಟೂರ್ನಿಯಲ್ಲಿ ರಾಹುಲ್ ಇದುವರೆಗೆ ಕೇವಲ 13 ರನ್ ಗಳಿಸಿದ್ದಾರೆ. ಇದೀಗ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ ಹಾದಿ ಅನುಸರಿಸಿದ್ದು, ಇದಕ್ಕಾಗಿ ಅನುಭವಿಗಳ ಸಹಾಯ ಕೋರಿದ್ದಾರೆ.


COMMERCIAL BREAK
SCROLL TO CONTINUE READING

2 ಪಂದ್ಯಗಳಲ್ಲಿ ಕೇವಲ 13 ರನ್‌ 


30ರ ಹರೆಯದ ಕೆ.ಎಲ್.ರಾಹುಲ್ ಫಾರ್ಮ್‍ನಲ್ಲಿಲ್ಲ. ಟಿ-20 ವಿಶ್ವಕಪ್‌ನ ಕೊನೆಯ 2 ಪಂದ್ಯಗಳಲ್ಲಿ ಅವರು ಒಟ್ಟು 13 ರನ್ ಗಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧ 4 ರನ್‌ಗಳಿಗೆ ಔಟಾದರೆ, ನೆದರ್‌ಲ್ಯಾಂಡ್ಸ್ ವಿರುದ್ಧ 9 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ರಾಹುಲ್ ದೊಡ್ಡ ಇನ್ನಿಂಗ್ಸ್‌ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾರೊಂದಿಗೆ ಆರಂಭಿಕರಾಗಿ ಬರುವ ರಾಹುಲ್ ಬಹುಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದು ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡುತ್ತಿದೆ. ಇತರ ಬ್ಯಾಟ್ಸ್‌ಮನ್‌ಗಳ ಮೇಲೂ ಇದು ಒತ್ತಡದ ಸಮಸ್ಯೆಯನ್ನುಂಟು ಮಾಡುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಹುಲ್ ಇದೀಗ ಟೀಂ ಇಂಡಿಯಾದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಸಹಾಯ ಕೋರಿದ್ದಾರೆ.


ಇದನ್ನೂ ಓದಿ: ICC Mens T20 World Cup 2022: ಪಾಕ್ ವಿರುದ್ಧ ಜಿಂಬಾಬ್ವೆಗೆ 1 ರನ್ ಗಳ ರೋಚಕ ಜಯ


ಸಹಾಯ ಕೋರಿದ ರಾಹುಲ್


ಪಂದ್ಯಾವಳಿಯ ಆರಂಭಕ್ಕೂ ಮುನ್ನ ಕೆ.ಎಲ್.ರಾಹುಲ್ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಸೂಪರ್-12 ಸುತ್ತಿನಲ್ಲಿ ಅವರ ಬ್ಯಾಟ್ ಮೌನವಾಗಿದೆ. ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಬಳಿಕ ರಾಹುಲ್ ಕೋಚಿಂಗ್ ಸಿಬ್ಬಂದಿಯೊಂದಿಗೆ ವಿಶೇಷ ನೆಟ್ ಸೆಷನ್‌ನಲ್ಲಿ ಭಾಗವಹಿಸಿದರು. ವರದಿಯೊಂದರ ಪ್ರಕಾರ ರಾಹುಲ್ ಇದೀಗ ಟೀಂ ಇಂಡಿಯಾದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಸಹಾಯ ಕೋರಿದ್ದಾರೆ. ಕೊಹ್ಲಿ ಕಳಪೆ ಫಾರ್ಮ್‌ನಿಂದ ಹೊರಬರಲು ಆಪ್ಟನ್ ಸಹಾಯ ಮಾಡಿದ್ದರಂತೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ರಾಹುಲ್ ಜೊತೆ ಆಪ್ಟನ್ ವಿಶೇಷ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.


ಅಂತಾರಾಷ್ಟ್ರೀಯ ಟಿ-20ಯಲ್ಲಿ 2 ಶತಕ  


ಬೆಂಗಳೂರಿನಲ್ಲಿ ನೆಲೆಸಿರುವ ಕೆ.ಎಲ್.ರಾಹುಲ್, ಟಿ-20 ಮಾದರಿಯ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ಇದುವರೆಗೆ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಶತಕ ಹಾಗೂ 20 ಅರ್ಧಶತಕ ಬಾರಿಸಿದ್ದಾರೆ. ಭಾರತದ ಪರ 68 ಟಿ-20 ಪಂದ್ಯಗಳಲ್ಲಿ 38.39 ಸರಾಸರಿಯಲ್ಲಿ ಒಟ್ಟು 2150 ರನ್ ಗಳಿಸಿದ್ದಾರೆ. ಒಟ್ಟಾರೆ 199 ಟಿ-20 ಪಂದ್ಯಗಳಲ್ಲಿ 6 ಶತಕ, 57 ಅರ್ಧಶತಕ ಸೇರಿದಂತೆ 6677 ರನ್ ಗಳಿಸಿದ್ದಾರೆ.


ಇದನ್ನೂ ಓದಿ: ಮುಂದಿನ ವಾರ ಟೀಮ್ ಇಂಡಿಯಾ ಮನೆಗೆ ಹೋಗುತ್ತೆ ಎಂದ ಶೋಯಬ್ ಅಖ್ತರ್..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ