ಬೆಂಗಳೂರು: ರಾಜ್ಯ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ನೀಡುವ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ವಿಜೇತರಿಗೆ ನಗದು ಪುರಸ್ಕಾರ ಹಾಗೂ 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.


COMMERCIAL BREAK
SCROLL TO CONTINUE READING

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯದ ಹಲವು ಕ್ರೀಡಾ ಸಾಧಕರು ಆಯ್ಕೆಯಾಗಿದ್ದಾರೆ. ಕ್ರೀಡಾ ಸಚಿವ ಡಾ.ಕೆ.ಸಿ ನಾರಾಯಣಗೌಡ ಅವರು ವಿಜೇತರ ಪಟ್ಟಿ ಪ್ರಕಟಿಸಿದ್ದಾರೆ. ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.


ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಹಣ ಪಾವತಿಗೆ ಒಪ್ಪಿಗೆ


2021ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರು


  1. ಚೇತನ್ ಬಿ - ಅಥ್ಲೇಟಿಕ್ಸ್

  2. ಶಿಖಾ ಗೌತಮ್ - ಬ್ಯಾಡ್ಮಿಂಟನ್

  3. ಕೀರ್ತಿ ರಂಗಸ್ವಾಮಿ - ಸೈಕ್ಲಿಂಗ್

  4. ಅದಿತ್ರಿ ವಿಕ್ರಾಂತ್ ಪಾಟೀಲ್ - ಫೆನ್ಸಿಂಗ್

  5. ಅಮೃತ್ ಮುದ್ರಾಬೆಟ್ - ಜಿಮ್ನಾಸ್ಟಿಕ್

  6. ಶೇಷೇಗೌಡ ಬಿ.ಎಂ - ಹಾಕಿ

  7.  ರೇಷ್ಮಾ ಮರೂರಿ - ಲಾನ್ ಟೆನ್ನಿಸ್

  8. ತನೀಷ್ ಜಾರ್ಜ್ ಮ್ಯಾಥ್ಯು - ಈಜು

  9. ಯಶಸ್ವಿನಿ ಘೋರ್ಪಡೆ - ಟೇಬಲ್ ಟೆನ್ನಿಸ್

  10. ಹರಿಪ್ರಸಾದ್ - ವಾಲಿಬಾಲ್

  11. ಸೂರಜ್ ಸಂಜು ಅಣ್ಣೀಕೇರಿ - ಕುಸ್ತಿ

  12. ಹೆಚ್.ಎಸ್.ಸಾಕ್ಷಾತ್ - ನೆಟ್ ಬಾಲ್

  13. ಮನೋಜ್ ಬಿ.ಎಂ - ಬಾಸ್ಕೆಟ್ ಬಾಲ್.

  14. ರಾಘವೇಂದ್ರ ಪಿ - ಪ್ಯಾರಾ ಅಥ್ಲೆಟಿಕ್ಸ್


ಏಕಲವ್ಯ ಪ್ರಶಸ್ತಿಯು ಏಕಲವ್ಯ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ, ಸಮವಸ್ತ್ರ, 2 ಲಕ್ಷ ರೂ. ನಗದು ಬಹುಮಾನ ಒಳಗೊಂಡಿರುತ್ತದೆ.


ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 5 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.  


ಗುಜರಾತ್ ಎಕ್ಸಿಟ್ ಪೋಲ್ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ : ಸಿಎಂ ಬೊಮ್ಮಾಯಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.