IND vs PAK: ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕ್ರೇಜ್‌ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಈ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾದಾಗ, ಅಭಿಮಾನಿಗಳಿಗೆ ಹಬ್ಬದಂತೆ ಭಾಸವಾಗುತ್ತದೆ. ಆದರೆ ದುರದೃಷ್ಟವಶಾತ್, ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷ ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗಿದ್ದವು. ಇದೀಗ ಈ ಎರಡು ದೈತ್ಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದು ಲೋಟ ಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿದ ಅತಿಯಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!


ಮಸ್ಕತ್‌ನ ಓಮನ್ ಕ್ರಿಕೆಟ್ ಅಕಾಡೆಮಿಯಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯವು ಉದಯೋನ್ಮುಖ ಏಷ್ಯಾಕಪ್‌ ಆಗಿದ್ದು, ಭಾರತ ಎ ಮತ್ತು ಪಾಕಿಸ್ತಾನ ಎ ನಡುವೆ ನಡೆಯಲಿದೆ. ಈ ಪಂದ್ಯ ಟಿ20 ಮಾದರಿಯಲ್ಲಿ ನಡೆಯಲಿದ್ದು ಅಕ್ಟೋಬರ್ 19 ರಂದು ಎರಡೂ ತಂಡಗಳು ಮುಖಾಮುಖಿಯಾಗಲಿವೆ.


ಉದಯೋನ್ಮುಖ ಏಷ್ಯಾಕಪ್‌ನಲ್ಲಿ ಭಾರತದ ನಾಯಕರಾಗಿ ತಿಲಕ್ ವರ್ಮಾ ಆಯ್ಕೆಯಾಗಿದ್ದರೆ, ಅಭಿಷೇಕ್ ಶರ್ಮಾ ಉಪನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ರಾಹುಲ್ ಚಹಾರ್ ಕೂಡ ಈ ತಂಡದಲ್ಲಿದ್ದು, ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವವೂ ಇದೆ. ಮೂವರೂ ಆಟಗಾರರು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳ ಅನುಭವ ಹೊಂದಿದ್ದಾರೆ. ಮತ್ತೊಂದೆಡೆ, ತಂಡದ ಉಳಿದ ಆಟಗಾರರು ಐಪಿಎಲ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಹೀಗಾಗಿ ಭಾರತ ಬಲಿಷ್ಠ ತಂಡವಾಗಿ ಉದಯೋನ್ಮುಖ ಏಷ್ಯಾಕಪ್ ಪ್ರವೇಶಿಸಲಿದೆ.


ಐಪಿಎಲ್‌ನಲ್ಲಿ ಆಡಿದ ಆಟಗಾರರಲ್ಲಿ ಆಯುಷ್ ಬದೋನಿ, ರಮಣದೀಪ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ನೆಹಾಲ್ ವಾದ್ರಾ, ಅನುಜ್ ರಾವತ್, ಹೃತಿಕ್ ಶೌಕಿನ್, ಸಾಯಿ ಕಿಶೋರ್, ರಾಸಿಕ್ ಸಲಾಂ, ವೈಭವ್ ಅರೋರಾ, ಅಕಿಬ್ ಖಾನ್ ಸೇರಿದ್ದಾರೆ. ಉದಯೋನ್ಮುಖ ಏಷ್ಯಾಕಪ್ ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ನಡೆಯುತ್ತಿದ್ದು, ಹಿಂದಿನ 5 ಆವೃತ್ತಿಗಳಲ್ಲಿ ODI ಮಾದರಿಯನ್ನು ಆಡಲಾಗಿತ್ತು.


ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ‘ಎ’ ಗುಂಪಿನಲ್ಲಿವೆ. ಯುಎಇ ಮತ್ತು ಒಮಾನ್ ಕೂಡ ಈ ಗುಂಪಿನಲ್ಲಿ ಸೇರಿದೆ. ಅಂದಹಾಗೆ ಭಾರತವು 2013 ರಲ್ಲಿ ಉದಯೋನ್ಮುಖ ಏಷ್ಯಾ ಕಪ್ ಅನ್ನು ಗೆದ್ದುಕೊಂಡಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನವೇ ಪ್ರಾಬಲ್ಯ ತೋರುತ್ತಿದೆ.


ಟೀಮ್ ಇಂಡಿಯಾ:
ತಿಲಕ್ ವರ್ಮಾ (ನಾಯಕ), ವೈಭವ್ ಅರೋರಾ, ಆಯುಷ್ ಬದೋನಿ, ರಾಹುಲ್ ಚಾಹರ್, ಅಂಶುಲ್ ಕಾಂಬೋಜ್, ಸಾಯಿ ಕಿಶೋರ್, ಅಕಿಬ್ ಖಾನ್, ಅನುಜ್ ರಾವತ್ (ವಿಕೆಟ್ ಕೀಪರ್), ರಾಸಿಖ್ ಸಲಾಮ್, ನಿಶಾಂತ್ ಸಿಂಧು, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ರಮಣ್‌ದೀಪ್ ಶರ್ಮಾ ಸಿಂಗ್, ಶೋಕೆನ್, ಹೃತಿಕ್ ನೆಹಾಲ್ ವಧೇರಾ.


ಇದನ್ನೂ ಓದಿ: ಈ ತರಕಾರಿಯನ್ನು ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಬೋಳುತಲೆಯಲ್ಲೂ ದಷ್ಟಪುಷ್ಟವಾದ ಕಡುಕಪ್ಪು ಕೂದಲು ಬೆಳೆಯುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿ


ಪಾಕಿಸ್ತಾನ ತಂಡ:
ಮೊಹಮ್ಮದ್ ಹ್ಯಾರಿಸ್ (ನಾಯಕ), ಅಬ್ಬಾಸ್ ಅಫ್ರಿದಿ, ಖಾಸಿಮ್ ಅಕ್ರಮ್, ಅಹ್ಮದ್ ದಾನಿಯಾಲ್, ಶಹನವಾಜ್ ದಹಾನಿ, ಮೊಹಮ್ಮದ್ ಇಮ್ರಾನ್, ಹಸಿಬುಲ್ಲಾ ಖಾನ್, ಯಾಸಿರ್ ಖಾನ್, ಜಮಾನ್ ಖಾನ್, ಅರಾಫತ್ ಮಿನ್ಹಾಸ್, ಸುಫಿಯಾನ್ ಮೊಕಿಮ್, ಮೆಹ್ರಾನ್ ಮುಮ್ತಾಜ್, ಅಬ್ದುಲ್ ಸಮದ್, ಒಮೈರ್ ಯು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ