“ನನಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ನೀನು ಇನ್ನೂ...” ಪಂದ್ಯಕ್ಕೂ ಮುನ್ನ ವಿರಾಟ್ ಬಗ್ಗೆ ಇಂಗ್ಲೆಂಡ್ ಆಟಗಾರ ಹೀಗಂದಿದ್ದೇಕೆ?
Alex Statement About Virat Kohli: ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್’ನ ಜಾನಿ ಬೈರ್‌ಸ್ಟ್ರಾ ಬ್ಯಾಟಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಅವರನ್ನು ಪದೇ ಪದೇ ಸ್ಲೆಡ್ಜ್ ಮಾಡಿದ್ದರು. ಒತ್ತಡದ ನಡುವೆಯೂ ಜಾನಿ ಈ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಶತಕ ಬಾರಿಸಿದ್ದರು.
Alex Statement About Virat Kohli: 2022ರಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಯನ್ನು ಸ್ಲೆಡ್ಜ್ ಮಾಡಿರುವುದಾಗಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟಿಗ ಅಲೆಕ್ಸ್ ಬಹಿರಂಗಪಡಿಸಿದ್ದಾರೆ. ಈ ಟೆಸ್ಟ್ ಪಂದ್ಯವನ್ನು ಎಡ್ಜ್’ಬಾಸ್ಟನ್’ನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯದ ವೇಳೆ, “ನನಗೆ ಇಬ್ಬರು ಮಕ್ಕಳಿದ್ದಾರೆ ಆದರೆ ನೀನು ಇನ್ನೂ ಶತಕ ಗಳಿಸಿಲ್ಲ” ಎಂದು ಅಲೆಕ್ಸ್ ಹೇಳಿದ್ದರೆಂದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಮದರ್ ತೆರೇಸಾಗೂ ಚಿಕಿತ್ಸೆ ನೀಡಿದ್ದ ಇವರು ದೇಶದ ಶ್ರೀಮಂತ ವೈದ್ಯ! ಈ ಕನ್ನಡಿಗನ ಆಸ್ತಿ 9 ಸಾವಿರ ಕೋಟಿ-ಯಾರು ಗೊತ್ತಾ ವ್ಯಕ್ತಿ?
ಆ ಸಮಯದಲ್ಲಿ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಕಠಿಣ ಸಮಯವನ್ನು ಎದುರಿಸುತ್ತಿದ್ದರು. ಕಳಪೆ ಫಾರ್ಮ್’ನಿಂದ ಹೋರಾಡುತ್ತಿದ್ದ ಶತಕಗಳ ರಾಜ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, 2019ರ ನವೆಂಬರ್’ನಿಂದ ಒಂದೇ ಒಂದು ಶತಕ ಸಿಡಿಸಿರಲಿಲ್ಲ.
ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್’ನ ಜಾನಿ ಬೈರ್‌ಸ್ಟ್ರಾ ಬ್ಯಾಟಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಅವರನ್ನು ಪದೇ ಪದೇ ಸ್ಲೆಡ್ಜ್ ಮಾಡಿದ್ದರು. ಒತ್ತಡದ ನಡುವೆಯೂ ಜಾನಿ ಈ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಶತಕ ಬಾರಿಸಿದ್ದರು.
"ನಾನು ಬ್ಯಾಟಿಂಗ್ ಮಾಡುವಾಗ, ವಿರಾಟ್ ತುಂಬಾ ಸ್ಲೆಡ್ಜಿಂಗ್ ಮಾಡುತ್ತಿದ್ದನು, ಕ್ರಿಕೆಟ್’ನಲ್ಲಿ ಯಾರು ಯಾವ ಸ್ಥಾನವನ್ನು ಹೊಂದಿದ್ದರೂ ನಾನು ಹೆದರುವುದಿಲ್ಲ, ಮೈದಾನದಲ್ಲಿ ನೀವೆಲ್ಲರೂ ಸಮಾನರು, ಯಾರಾದರೂ ನನ್ನನ್ನು ಚುಡಾಯಿಸಿದಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವನು ಅದ್ಭುತ ಆಟಗಾರ, ಆದರೆ ಆ ಸಮಯದಲ್ಲಿ ಅವರು ಕೇವಲ ಮೂರ್ಖರಾಗಿದ್ದರು" ಎಂದು ಅಲೆಕ್ಸ್ ಹೇಳಿದ್ದಾರೆ. ನಂತರ ಅಲೆಕ್ಸ್ ವಿರಾಟ್ ಕಡೆಗೆ ನೋಡಿ, "ನೀವು ಕಳೆದ ಶತಕ ಬಾರಿಸಿದಾಗಿನಿಂದ ನನಗೆ ಇಬ್ಬರು ಮಕ್ಕಳಿದ್ದಾರೆ" ಎಂದು ಹೇಳಿದ್ದರಂತೆ.
ಇದನ್ನೂ ಓದಿ: ಲಂಕಾ ದಿಗ್ಗಜ ಕುಮಾರ್ ಸಂಗಕ್ಕಾರರ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ
ಈ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 11 ಮತ್ತು 20 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 378 ರನ್’ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಈ ಪಂದ್ಯದಲ್ಲಿ ಭಾರತವನ್ನು ಸೋಲಿಸಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ