Virat Kohli World Record: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ವಿಶ್ವಕಪ್’ನಲ್ಲಿ ಅದ್ಭುತವಾಗಿ ಆಟವಾಡುತ್ತಿದ್ದಾರೆ. ಇನ್ನೇನು ಅಕ್ಟೋಬರ್ 29ರಂದು ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ವಿಶ್ವಕಪ್ 2023ರ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದ್ದಾರೆ,
ಈ ಪಂದ್ಯದಲ್ಲಿ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಅವರ ಶ್ರೇಷ್ಠ ದಾಖಲೆಯೊಂದನ್ನು ಮುರಿಯುವ ಸಿದ್ಧತೆಯಲ್ಲಿದ್ದಾರೆ ವಿರಾಟ್. ಒಂದು ವೇಳೆ ಆ ದಾಖಲೆಯನ್ನು ಬ್ರೇಕ್ ಮಾಡಿದಲ್ಲಿ, ವಿರಾಟ್ ಕೊಹ್ಲಿ ವಿಶೇಷ ಹಾಗೂ ಮಹತ್ವದ ಸಾಧನೆ ಮಾಡಿದಂತಾಗುತ್ತದೆ.
ಇದನ್ನೂ ಓದಿ: ಇಮ್ರಾನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಈ ಆಟಗಾರನನ್ನು ಹೊರಗಿಟ್ಟ ಟೀಂ!
ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ 149 ರನ್ ಗಳಿಸಿದರೆ, ಲಂಕಾ ದಿಗ್ಗಜ ಸಂಗಕ್ಕಾರ ದಾಖಲೆ ಬ್ರೇಕ್ ಮಾಡಿ, ಏಕದಿನ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಲಿದ್ದಾರೆ.
ವಿಶ್ವಕಪ್ 2023ರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವು ಅಕ್ಟೋಬರ್ 29ರ ಭಾನುವಾರದಂದು ಲಕ್ನೋದ ಎಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 149 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್’ನಲ್ಲಿ ತಮ್ಮ ಒಟ್ಟು 1533 ರನ್’ಗಳನ್ನು ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಏಕದಿನ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಲಿದ್ದಾರೆ.
ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ 2278 ರನ್ ಗಳಿಸಿದ್ದಾರೆ. ಪ್ರಸ್ತುತ, ಈ ಪಟ್ಟಿಯಲ್ಲಿ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 1743 ರನ್ ಗಳಿಸಿದ್ದಾರೆ. ಇನ್ನು ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಮೂರನೇ ಸ್ಥಾನದಲ್ಲಿದ್ದು, ಅವರು 1532 ರನ್ ಗಳಿಸಿದ್ದಾರೆ.
ಏಕದಿನ ವಿಶ್ವಕಪ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್’ಮನ್’ಗಳ ಪಟ್ಟಿ:
1. ಸಚಿನ್ ತೆಂಡೂಲ್ಕರ್ (ಭಾರತ) - 2278 ರನ್
2. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 1743 ರನ್
3. ಕುಮಾರ್ ಸಂಗಕ್ಕಾರ (ಶ್ರೀಲಂಕಾ) – 1532 ರನ್
4. ವಿರಾಟ್ ಕೊಹ್ಲಿ (ಭಾರತ) - 1384 ರನ್
5. ರೋಹಿತ್ ಶರ್ಮಾ (ಭಾರತ) - 1289 ರನ್
6. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 1251 ರನ್
7. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 1225 ರನ್
8. ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) - 1207 ರನ್
9. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 1202 ರನ್
ಇದನ್ನೂ ಓದಿ: ಇಂಗ್ಲೆಂಡ್ ಪಂದ್ಯದಿಂದ ರೋಹಿತ್-ಕೊಹ್ಲಿ ರೂಲ್ಡೌಟ್! ಇನ್ಮುಂದೆ 30ರ ಹರೆಯದ ಈ ರಣಬೇಟೆಗಾರನೇ ಟೀಂ ಇಂಡಿಯಾದ ಕ್ಯಾಪ್ಟನ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ