Pak Vs Eng Test: ಗುರುವಾರ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಆರಂಭಗೊಂಡ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನವೇ 112 ವರ್ಷಗಳಷ್ಟು ಹಳೆಯ ದಾಖಲೆಯನ್ನು ನುಚ್ಚುನೂರಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂದ ಮೊದಲ ದಿನದಾಂತ್ಯಕ್ಕೆ ಭರ್ಜರಿ 506 ರನ್ ಗಳಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ದಿನ ಮಾಡಿದ ಅತಿ ದೊಡ್ಡ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 1910ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂದ ಮೊದಲ ದಿನದಾಂತ್ಯಕ್ಕೆ 494 ರನ್ ಗಳಿಸಿತ್ತು. ಇಂಗ್ಲೆಂಡ್ ನ ಈ ಇನ್ನಿಂಗ್ಸ್‌ನಲ್ಲಿ ಆರಂಭಿಕ ಇಬ್ಬರೂ ಬ್ಯಾಟ್ಸ್ ಮನ್ ಗಳು ಶತಕ ಬಾರಿಸಿದರೆ, ನಂತರ ಕ್ರೀಸ್ ಗೆ ಬಂದ ಒಲಿ ಪಾಪ್ ಮತ್ತು ಹೆರ್ ಬ್ರೂಕ್ ಕೂಡ ಶತಕ ಬಾರಿಸಿದ್ದಾರೆ.


COMMERCIAL BREAK
SCROLL TO CONTINUE READING

112 ವರ್ಷಗಳ ಹಳೆಯ ದಾಖಲೆ ಧ್ವಂಸ
9 ಡಿಸೆಂಬರ್ 1910 ರಂದು, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ತಂಡ 494 ರನ್ ಗಳಿಸಿತ್ತು. ಇದೀಗ ಡಿಸೆಂಬರ್ 1, 2022 ರಂದು, ರಾವಲ್ಪಿಂಡಿಯಲ್ಲಿ , ಇಂಗ್ಲೆಂಡ್ ತಂಡ ಮೊದಲ ದಿನದಾಂತ್ಯಕ್ಕೆ 506 ರನ್ ಗಳಿಸುವ ಮೂಲಕ ಇತಿಹಾಸವನ್ನು ಮರುಸೃಷ್ಟಿಸಿದೆ. ಇಂಗ್ಲೆಂಡ್‌ನ ಬಹುತೇಕ ಎಲ್ಲಾ ಬ್ಯಾಟ್ಸ್‌ಮನ್‌ಗಳ ಸ್ಟ್ರೈಕ್ ರೇಟ್ ಸುಮಾರು 100 ಆಗಿತ್ತು. ಈ ಅವಧಿಯಲ್ಲಿ, ಬೆನ್ ಸ್ಟೋಕ್ಸ್ ಅವರ ಸ್ಟ್ರೈಕ್ ರೇಟ್ 200 ಕ್ಕಿಂತ ಹೆಚ್ಚಿತ್ತು. ಸ್ಟೋಕ್ಸ್ 15 ಎಸೆತಗಳಲ್ಲಿ 34 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಸ್ಟೋಕ್ಸ್ ತನ್ನ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ ಬಾರಿಸಿದ್ದಾರೆ.


ಇದನ್ನೂ ಓದಿ-India vs Bangladesh : ಬಾಂಗ್ಲಾ ಟೀಂಗೆ ಬಿಗ್ ಶಾಕ್ : ಸರಣಿಯಿಂದ ವೇಗದ ಬೌಲರ್ ಔಟ್!


ಒಂದೇ ದಿನದಲ್ಲಿ 74 ಬೌಂಡರಿ ಹಾಗೂ 3 ಸಿಕ್ಸರ್ ಗಳು
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರು ಪಂದ್ಯವನ್ನು ಆರಂಭಿಸಿದ ರೀತಿಯಲ್ಲಿಯೇ ಮುಂದೆ ಬಂದ ಎಲ್ಲಾ ಬ್ಯಾಟ್ಸ್ ಮನ್ ಗಳು ಮುಂದುವರೆಸಿ ಬಿರುಸಿನ ಬೌಂಡರಿಗಳ ಸುರಿಮಳೆಗೈದಿದ್ದಾರೆ  ಇಂಗ್ಲೆಂಡ್‌ನ ಈ ಇನ್ನಿಂಗ್ಸ್‌ನಲ್ಲಿ 74 ಬೌಂಡರಿಗಳಿದ್ದವು. ಜಾಕ್ ಕ್ರಾಲಿ 21 ಬೌಂಡರಿ, ಬೆನ್ ಡಕೆಟ್ 15, ಆಲಿ ಪಾಪ್ 14, ಜೋ ರೂಟ್ 3, ಹ್ಯಾರಿ ಬ್ರೂಕ್ 15 ಮತ್ತು ಬೆನ್ ಸ್ಟೋಕ್ಸ್ 6 ಬೌಂಡರಿ ಬಾರಿಸಿದ್ದಾರೆ. ಇಂಗ್ಲೆಂಡ್ 75 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 506 ರನ್ ಗಳಿಸಿದೆ.


ಇದನ್ನೂ ಓದಿ-Kohli Highest Paid Cricketer : ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ 'ಟಾಪರ್' ಕಿಂಗ್ ಕೊಹ್ಲಿ!


ಪಾಕಿಸ್ತಾನಿ ಬೌಲರ್ ಗಳನ್ನು ಮನಸೋಇಚ್ಛೆ ದಂಡಿಸಿದ ಇಂಗ್ಲೆಂಡ್ ದಾಂಡಿಗರು
ಈ ಮೊದಲ ದಿನದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ದಾಂಡಿಗರ ಆಟದ ಮುಂದೆ ಪಾಕಿಸ್ತಾನ ತಂಡದ ಯಾವುದೇ ಆಟ ನಡೆದಿಲ್ಲ. ತಂಡದ ಲೆಗ್ ಬ್ರೇಕ್ ಸ್ಪಿನ್ನರ್ ಜಾಹಿದ್ ಮಹಮೂದ್ 23 ಓವರ್ ಬೌಲ್ ಮಾಡಿ 160 ರನ್ ನೀಡಿದರೆ, ನಸೀಮ್ ಶಾ ಮತ್ತು ಮೊಹಮ್ಮದ್ ಅಲಿ 96-96 ರನ್ ನೀಡಿದ್ದಾರೆ. ಸೌದ್ ಸಾಕಿನ್ ಕೇವಲ ಎರಡು ಓವರ್‌ಗಳಲ್ಲಿ 30 ರನ್ ನೀಡಿದ್ದಾರೆ, ಅಘಾ ಸಲ್ಮಾನ್ 38 ರನ್ ನೀಡಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.