India vs Bangladesh : ಬಾಂಗ್ಲಾ ಟೀಂಗೆ ಬಿಗ್ ಶಾಕ್ : ಸರಣಿಯಿಂದ ವೇಗದ ಬೌಲರ್ ಔಟ್!

India vs Bangladesh 1st Odi : ಎರಡು ತಂಡಗಳ ನಡುವಿನ ಮೊದಲ ಪಂದ್ಯದಿಂದ ಬಿಗ್ ಮ್ಯಾಚ್ ವಿನ್ನರ್ ಆಟಗಾರನನ್ನು ಕೈಬಿಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಈ ಆಟಗಾರ ಮೊದಲ ಏಕದಿನ ಪಂದ್ಯದಲ್ಲಿ ಆಡುತ್ತಿಲ್ಲ. ಈ ಬೌಲರ್ ಟಿ20 ವಿಶ್ವಕಪ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು.

Written by - Channabasava A Kashinakunti | Last Updated : Dec 1, 2022, 06:27 PM IST
  • ಡಿಸೆಂಬರ್ 4 ರಿಂದ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಆರಂಭ
  • ಮೊದಲ ಪಂದ್ಯದಿಂದ ಬಿಗ್ ಮ್ಯಾಚ್ ವಿನ್ನರ್ ಆಟಗಾರನನ್ನು ಕೈಬಿಡಲಾಗಿದೆ
  • ತಮೀಮ್ ಇಕ್ಬಾಲ್ ಕೂಡ ಟೀಂನಿಂದ ಹೊರಗೆ!
India vs Bangladesh : ಬಾಂಗ್ಲಾ ಟೀಂಗೆ ಬಿಗ್ ಶಾಕ್ : ಸರಣಿಯಿಂದ ವೇಗದ ಬೌಲರ್ ಔಟ್! title=

India vs Bangladesh 1st Odi : ಡಿಸೆಂಬರ್ 4 ರಿಂದ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸ ಆರಂಭವಾಗುವ ಮುನ್ನವೇ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಎರಡು ತಂಡಗಳ ನಡುವಿನ ಮೊದಲ ಪಂದ್ಯದಿಂದ ಬಿಗ್ ಮ್ಯಾಚ್ ವಿನ್ನರ್ ಆಟಗಾರನನ್ನು ಕೈಬಿಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಈ ಆಟಗಾರ ಮೊದಲ ಏಕದಿನ ಪಂದ್ಯದಲ್ಲಿ ಆಡುತ್ತಿಲ್ಲ. ಈ ಬೌಲರ್ ಟಿ20 ವಿಶ್ವಕಪ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು.

ಮೊದಲ ODI ನಿಂದ ಈ ಆಟಗಾರ ಔಟ್

ಭಾರತ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಮುಂಚಿತವಾಗಿ ಬಾಂಗ್ಲಾದೇಶವು ಭಾರಿ ಹೊಡೆತ ಅನುಭವಿಸಿದೆ, ವೇಗದ ಬೌಲರ್ ತಸ್ಕಿನ್ ಅಹ್ಮದ್ ಬೆನ್ನುನೋವಿನ ಕಾರಣ ಭಾನುವಾರದ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ವೇಗದ ಬೌಲರ್ ಶರೀಫುಲ್ ಇಸ್ಲಾಮ್ ಅವರನ್ನು ಟಾಸ್ಕಿನ್ ಅವರ ಬ್ಯಾಕ್ ಅಪ್ ಆಗಿ ODI ತಂಡದಲ್ಲಿ ಕರೆಯಲಾಗಿದೆ. ಕಳೆದ ವರ್ಷ ಬಾಂಗ್ಲಾದೇಶ ಪರ ಆಡಿದ ಟಾಸ್ಕಿನ್ 19 ಏಕದಿನ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಮುಖ್ಯ ಆಯ್ಕೆಗಾರ ಮಿನ್ಹಾಜುಲ್ ಅಬೆದಿನ್ ಗುರುವಾರ ಕ್ರಿಕ್‌ಬಜ್‌ಗೆ ತಿಳಿಸಿದರು, "ತಸ್ಕಿನ್ ಅವರ ಬೆನ್ನು ನೋವು ಮತ್ತೆ ಉಲ್ಬಣಗೊಂಡಿದ್ದರಿಂದ ಮೊದಲ ಪಂದ್ಯದಿಂದ ಹೊರಗುಳಿಯಲಾಗಿದೆ."

ಇದನ್ನೂ ಓದಿ : IND vs BAN : ಬಾಂಗ್ಲಾದೇಶ ಪ್ರವಾಸದಿಂದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್ ಔಟ್!

ತಮೀಮ್ ಇಕ್ಬಾಲ್ ಕೂಡ ಟೀಂನಿಂದ ಹೊರಗೆ!

ತಸ್ಕಿನ್ ಅಹ್ಮದ್ ಅಲ್ಲದೆ, ಬಾಂಗ್ಲಾದೇಶದ ನಿಯಮಿತ ನಾಯಕ ತಮೀಮ್ ಇಕ್ಬಾಲ್ ಅವರು ನವೆಂಬರ್ 30 ರಂದು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡ ಕಾರಣ ಟೀಂ ನಿಂದ ಹೊರಗುಳಿದಿದ್ದಾರೆ. ಮಿನ್ಹಾಜುಲ್ ಅಬೇದಿನ್, 'ನಾವು ತಮೀಮ್ ಅವರ ಸ್ಕ್ಯಾನ್ ವರದಿಗಾಗಿ ಕಾಯುತ್ತಿದ್ದೇವೆ. ಅವರಿಗೆ ಬೆನ್ನಿನ ಗಾಯವಾಗಿದ್ದು, ಅವರ ಲಭ್ಯತೆಯನ್ನು ನಿರ್ಧರಿಸಲು ವೈದ್ಯರು ಸ್ಕ್ಯಾನ್ ಮಾಡುವಂತೆ ಹೇಳಿದ್ದಾರೆ ಎಂದು ತಿಳಿಸಿದೆ.

ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ

ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಎರಡು ಏಕದಿನ ಪಂದ್ಯಗಳು ಡಿಸೆಂಬರ್ 4 ಮತ್ತು 7 ರಂದು ಢಾಕಾದ ಮೀರ್‌ಪುರದಲ್ಲಿರುವ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಡಿಸೆಂಬರ್ 10 ರಂದು ಚಿತ್ತಗಾಂಗ್‌ನ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸದ್ಯ ಭಾರತ ಏಕದಿನ ತಂಡಗಳ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶ ಏಳನೇ ಸ್ಥಾನದಲ್ಲಿದೆ. ಎಲ್ಲಾ ODI ಪಂದ್ಯಗಳು ಸ್ಥಳೀಯ ಕಾಲಮಾನ ಮಧ್ಯಾಹ್ನ 12 ರಿಂದ ಹಗಲು-ರಾತ್ರಿ ಪಂದ್ಯಗಳಾಗಿರುತ್ತವೆ. ಈ ಸರಣಿಯ ಬಳಿಕ ಉಭಯ ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳೂ ನಡೆಯಲಿವೆ.

ಇದನ್ನೂ ಓದಿ : Kohli Highest Paid Cricketer : ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ 'ಟಾಪರ್' ಕಿಂಗ್ ಕೊಹ್ಲಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News